Viral Video: ಎಷ್ಟೇ ಖರ್ಚಾಗಲಿ ಇದನ್ನ ತಗೋಳ್ಬೇಕು ಅಂತಿದಾರೆ ವಿದ್ಯಾರ್ಥಿಗಳು! ಏನದು ಅಂತ ವಿಡಿಯೋ ನೋಡಿ

30 ಪೇಜ್​ ಯಾರು ಬಾರೀತಾರಾ? ಕಲಿಯಾಕ್​ ಪ್ರಾಕ್ಟೀಸ್​ ಮಾಡಿಸ್ರಪ್ಪಾ ಅಂದ್ರ.. ಬರಿಯೋಕೆ​ ಪ್ರಾಕ್ಟೀಸ್​​ ಮಾಡಿಸ್ತಿದ್ದಾರಾ! ಎಂದು ಡೈಲಾಗ್​ ಹೊಡೆಯುತ್ತಾ ಮೊಬೈಲ್​ನಲ್ಲಿ ಸ್ಕಾನ್​ ಮಾಡಿದರೆ ಸಾಕು ಎಲ್ಲಾ ಅಕ್ಷರಗಳನ್ನು​ ಬರೆಯುವಂತಹ ಮಷಿನ್​ ಪಡೆಯುವುದೇ ವಿದ್ಯಾರ್ಥಿಗಳ ಮುಂದಿರುವ ನೀರೀಕ್ಷೆ... ಎಂಬಂತೆ ವಿಡಿಯೋ ಹರಿಬಿಟ್ಟಿದ್ದಾರೆ.

Viral Video: ಎಷ್ಟೇ ಖರ್ಚಾಗಲಿ ಇದನ್ನ ತಗೋಳ್ಬೇಕು ಅಂತಿದಾರೆ ವಿದ್ಯಾರ್ಥಿಗಳು! ಏನದು ಅಂತ ವಿಡಿಯೋ ನೋಡಿ
ಎಷ್ಟೇ ಖರ್ಚಾಗಲಿ ಇದನ್ನ ತಗೋಳ್ಬೇಕು ಅಂತಿದಾರೆ ವಿದ್ಯಾರ್ಥಿಗಳು!
Follow us
TV9 Web
| Updated By: shruti hegde

Updated on: Jul 08, 2021 | 4:45 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಿದೆ. ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೆಲವರು ವಿಡಿಯೋಗಳನ್ನು ಟ್ರೋಲ್​ ಮಾಡುತ್ತಾರೆ. ಕೊರೊನಾ ವೈರಸ್​ ಸಾಂಕ್ರಾಮಿಕ ಹರಡುತ್ತಿದ್ದಂತೆಯೇ ಕಾಲೇಜುಗಳ ಬಾಗಿಲು ಮುಚ್ಚಲ್ಪಟ್ಟವು. ಪರಿಸ್ಥಿತಿ ಹಾಗಾದಾಗ ವಿದ್ಯಾರ್ಥಿಗಳಿಗೆ ಇಡೀ ದಿನ ಆನ್​ಲೈನ್​ ಕ್ಲಾಸ್​ಗಳು​ ಜತೆಗೆ ಹೊರೆ ಹೊರೆ ಅಸೈನ್​ಮೆಂಟ್ಸ್​ಗಳು! ಇಡೀ ದಿನ ಬರೆದೇ ಸೋಲುತ್ತಿದ್ದೇವೆ ಅಂತಿದ್ದಾರೆ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ನಿರೀಕ್ಷೆಯೇ ಬೇರೆ ಇದೆ! ಅಸೈನ್​ಮೆಂಟ್​ ಬರೆಯುವ ಮಷಿನ್​ಗಾಗಿ ವಿದ್ಯಾರ್ಥಿಗಳು ಕಾಡು ಕುಳಿತಿದ್ದಾರೆ. ವೇಟ್​ ಫಾರ್​ ಇಟ್..​ ಅನ್ನುತ್ತಾ ಅಸೈನ್​ಮೆಂಟ್​ ಬರೆಯುತ್ತಿರುವ ಮಷಿನ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

30 ಪೇಜ್​ ಯಾರು ಬಾರೀತಾರಾ? ಕಲಿಯಾಕ್​ ಪ್ರಾಕ್ಟೀಸ್​ ಮಾಡಿಸ್ರಪ್ಪಾ ಅಂದ್ರ.. ಬರಿಯೋಕೆ​ ಪ್ರಾಕ್ಟೀಸ್​​ ಮಾಡಿಸ್ತಿದ್ದಾರಾ! ಎಂದು ಡೈಲಾಗ್​ ಹೊಡೆಯುತ್ತಾ ಮೊಬೈಲ್​ನಲ್ಲಿ ಸ್ಕಾನ್​ ಮಾಡಿದರೆ ಸಾಕು ಎಲ್ಲಾ ಅಕ್ಷರಗಳನ್ನು​ ಬರೆಯುವಂತಹ ಮಷಿನ್​ ಪಡೆಯುವುದೇ ವಿದ್ಯಾರ್ಥಿಗಳ ಮುಂದಿರುವ ನೀರೀಕ್ಷೆ… ಎಂಬಂತೆ ವಿಡಿಯೋ ಹರಿಬಿಟ್ಟಿದ್ದಾರೆ. ಆದಷ್ಟು ಬೇಗ ಈ ಮಷಿನ್​ ಬರ್ಲಪ್ಪಾ ಅಂತ ವಿದ್ಯಾರ್ಥಿಗಳು ನಗುತ್ತಾ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಸ್ನೇಹಿತರಿಗೂ ಸಹ ಟ್ಯಾಗ್​ ಮಾಡುತ್ತಿದ್ದಾರೆ.

ಈಗಿನ ತಂತ್ರಜ್ಞಾನದ ಯುಗದಲ್ಲಿ ಪೆನ್ನು ಪಟ್ಟಿ ಹಿಡಿದು ಬರೆಯುವುದೇ ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಯಲ್ಲಿ ಮಾತ್ರ ವಿದ್ಯಾರ್ಥಿಗಳು ಬರೆಯುವ ಅಭ್ಯಾಸ ಹೊಂದಿದ್ದಾರೆ ಅಷ್ಟೆ! ಹಾಗಿರುವಾಗ 30-40 ಹಾಳೆಗಳನ್ನು ಬರೆಯಲು ಕೊಡುತ್ತಾರೆ ಎಂಬುದೇ ವಿದ್ಯಾರ್ಧಿಗಳ ಚಿಂತೆ! ಇದೀಗ ಕಾಲೇಜು ಹುಡುಗರು ಅಸೈನ್​ಮೆಂಟ್​ ರೈಟಿಂಗ್​ ಮಷಿನ್​ಗಾಗಿ ಕಾದು ಕುಳಿತಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.

ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗುತ್ತಿದ್ದಂತೆಯೇ 38 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ರಿಯಲ್​ ಪ್ಯಾಕ್ಟ್​ ಆಫ್​ ಸ್ಟುಡೆಂಟ್​ ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಿಂದ ವಿಡಿಯೋ ಹಂಚಕೊಳ್ಳಲಾಗಿದೆ. ತಮ್ಮ ಸ್ನೇಹಿತರಿಗೆ ಟ್ಯಾಗ್​ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ವಿಡಿಯೋ ಪೋಸ್ಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

Viral Video: ಮಿಡತೆಯನ್ನು ಹೆದರಿಸಲು ಪ್ರಯತ್ನಿಸಿದ ಹುಡುಗ! ಮುಂದೆ ಏನಾಗುತ್ತದೆ ಎಂಬುದನ್ನು ನೀವೇ ನೋಡಿ

Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ