Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು

ಘಟನೆ ಥೈಲೆಂಟ್​ನಲ್ಲಿ ನಡೆದಿದೆ. ಚಿನ್ನದ ಸರವನ್ನು ಕದಿಯಲು ಪ್ರಯತ್ನಿಸಿದ ವ್ಯಕ್ತಿ ವಿಫಲರಾಗಿದ್ದಾರೆ. ಬಾಗಿಲು ಲಾಕ್ ಆಗಿದ್ದನ್ನು ನೋಡಿದ ವ್ಯಕ್ತಿ ಹಿಂತಿರುಗಿ ಬಂದು ಸರವನ್ನು ಮೊದಲಿದ್ದ ಜಾಗದಲ್ಲಿ ಇಡುತ್ತಾನೆ. ಆತನ ಮುಖ ಸಪ್ಪೆಮೋರೆಯಾಗಿದೆ.

Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು
ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು
Follow us
TV9 Web
| Updated By: shruti hegde

Updated on: Jul 08, 2021 | 1:21 PM

ಚಿನ್ನಾಭರಣದ ಅಂಗಡಿಗಳು ಕಳ್ಳರಿಗೆ ಪ್ರಮುಖ ತಾಣವಾಗಿದೆ. ಸಭ್ಯರಂತೆ ಬಂದು ಚಿನ್ನವನ್ನು ನೋಡುತ್ತಿರುವಂತೆ ಆ್ಯಕ್ಟಿಂಗ್ ಮಾಡುತ್ತಾ ಸುಮ್ಮನೆ ಸರವನ್ನು ಕದ್ದು ಪರಾರಿಯಾಗಿ ಬಿಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಚಿನ್ನದ ಸರ ಕದಿಯಲು ಹೋಗಿ ಪೇಚಿಗೆ ಸಿಲುಕಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನ ಎಕ್ಸ್​ಪ್ರೆಶನ್​ ನೋಡಿ ನೆಟ್ಟಿಗರು ಹಾಸ್ಯ ಮಾಡಿ ನಗುತ್ತಿದ್ದಾರೆ.

ಘಟನೆ ಥೈಲೆಂಟ್​ನಲ್ಲಿ ನಡೆದಿದೆ. ಚಿನ್ನದ ಸರವನ್ನು ಕದಿಯಲು ಪ್ರಯತ್ನಿಸಿದ ವ್ಯಕ್ತಿ ವಿಫಲರಾಗಿದ್ದಾರೆ. ಈ ವಿಡಿಯೋ 2018ರಲ್ಲಿ ವೈರಲ್​ ಆಗಿತ್ತು. ಆದರೆ ಪುನಃ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 27 ವರ್ಷದ ವ್ಯಕ್ತಿಯೊಬ್ಬ ಚಿನ್ನದ ಮಳಿಗೆಗೆ ಬಂದು ಚಿನ್ನದ ಸರವನ್ನು ಖದೀಸುವಂತೆ ನಾಟಕವಾಡುತ್ತಾನೆ. ಸರವನ್ನು ಕುತ್ತಿಗೆಗೆ ಹಾಕಿಕೊಂಡು ಸುಂದರವಾಗಿ ಕಾಣಿಸುತ್ತಿದ್ದೀನಾ? ಎಂದು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ. ಸ್ವಲ್ಪ ದೂರದಲ್ಲೇ ಇದ್ದ ಬಾಗಿಲು ನೋಡುತ್ತಾ ಓಡಿ ಹೋಗಿ ಗಾಜಿನ ಬಾಗಿಲು ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಬಾಗಿಲು ಲಾಕ್​ ಆಗಿರುತ್ತದೆ. ವ್ಯಕ್ತಿಯ ಪೀಕಲಾಟ ನೋಡಿದ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಬಾಗಿಲು ಲಾಕ್ ಆಗಿದ್ದನ್ನು ನೋಡಿದ ವ್ಯಕ್ತಿ ಹಿಂತಿರುಗಿ ಬಂದು ಸರವನ್ನು ಮೊದಲಿದ್ದ ಜಾಗದಲ್ಲಿ ಇಡುತ್ತಾನೆ. ಆತನ ಮುಖ ಸಪ್ಪೆಮೋರೆಯಾಗಿದೆ. ವಿಶೇಷವೆಂದರೆ, ಅನುಮಾನಾಸ್ಪದವಾದ ಆತನ ವರ್ತನೆಯಿಂದ ಅಂಗಡಿ ಮಾಲೀಕರು ಮೊದಲೇ ಬಾಗಿಲನ್ನು ಲಾಕ್​ ಮಾಡಿದ್ದಾರೆ. ನಂತರ ಪೋಲಿಸರಿಗೆ ವಿಷಯ ತಿಳಿಸಲಾಗಿದೆ.

ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಹಾಗಾಗಿ ಹಣವಿಲ್ಲದೇ ಕಳ್ಳತನ ಮಾಡಲು ಪ್ರಾರಂಭಿಸಿದೆ ಎಂದು ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:

ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

ದಾಬಸ್‌ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ; ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ