ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

ಗರದ ಪೊಲೀಸ್ನ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಕ್ಷಮೆಯಾಚಿಸುವ ಪತ್ರವೊಂದನ್ನು ಕಳ್ಳ ಬರೆದಿಟ್ಟು ಪರಾರಿಯಾಗಿದ್ದಾನೆ.

ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jul 07, 2021 | 11:48 AM

ಒಬ್ಬ ವ್ಯಕ್ತಿ ಕಳ್ಳನಾಗಬೇಕೆಂದರೆ ಅದರ ಹಿಂದೆ ಯಾವುದಾದರೂ ಬಲವಾದ ಕಾರಣವಿರುತ್ತೆ ಅನ್ನುತ್ತಾರೆ ಮನಶಾಸ್ತ್ರಜ್ಞರು. ಆದ್ರೆ ಒಮ್ಮೆ ಕಳ್ಳತನ ಮಾಡಿದ ಮೇಲೆ ಅದೇ ಕಸುಬು ಚೆನ್ನಾಗಿದೆ ಎಂದು ಮುಂದುವರೆಸುವವರೇ ಹೆಚ್ಚು. ಆದ್ರೆ ಅವಶ್ಯಕತೆ ನೀಗಿಸಲು ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಕಳ್ಳತನ ಮಾಡಿದಂತಹ ವಿಚಿತ್ರ ಘಟನೆ ನಡೆದಿದೆ. ಖದೀಮನೊಬ್ಬ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಬೆಲೆ ಬಾಳುವ ವವಸ್ತುಗಳನ್ನು ಕಳ್ಳತನ ಮಾಡಿ ಪತ್ರ ಬರೆದಿಟ್ಟು ಕ್ಷಮೆ ಕೇಳಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ.

ನಗರದ ಪೊಲೀಸ್​ ಅಧಿಕಾರಿಯ  ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಕ್ಷಮೆಯಾಚಿಸುವ ಪತ್ರವೊಂದನ್ನು ಕಳ್ಳ ಬರೆದಿಟ್ಟು ಪರಾರಿಯಾಗಿದ್ದಾನೆ. ಸ್ನೇಹಿತನ ಜೀವ ಉಳಿಸುವ ಸಲುವಾಗಿ ನಾನು ನಿಮ್ಮ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದೇನೆ ಮತ್ತು ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕಳ್ಳ ತನ್ನ ಪತ್ರದಲ್ಲಿ ಬರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಕೊತ್ವಾಲ್​ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಕಮಲೇಶ್ ಕಟಾರೆ, ಛತ್ತೀಸ್ ಗಡದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರ ಕುಟುಂಬ ಭಿಂಡ್​ ನಗರದಲ್ಲಿ ವಾಸಿಸುತ್ತಿದೆ. ಪೊಲೀಸರ ಪತ್ನಿ ಮತ್ತು ಅವರ ಮಕ್ಕಳು ಜೂನ್ 30 ರಂದು ಸಂಬಂಧಿಕರ ಮನೆಗೆ ತೆರಳಿದ್ದರು.

ಸೋಮವಾರ ಹಿಂದಿರುಗಿದಾಗ, ಅವರ ಮನೆಯ ಬೀಗ ಮುರಿದು ಬಿದ್ದಿತ್ತು. ವಸ್ತುಗಳು ಎಲ್ಲೆಡೆ ಹರಡಿದ್ದವು. ಬಳಿಕ ಮನೆಯೊಳಗೆ ಸಿಕ್ಕ ಪತ್ರದಲ್ಲಿ ಕಳ್ಳ, ‘ಕ್ಷಮಿಸಿ ಫ್ರೆಂಡ್, ಇದು ಅನಿವಾರ್ಯವಾಗಿತ್ತು. ನಾನು ಇದನ್ನು ಮಾಡದಿದ್ದರೆ, ನನ್ನ ಸ್ನೇಹಿತನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದನು. ಚಿಂತಿಸಬೇಡಿ, ನಾನು ಹಣವನ್ನು ಪಡೆದ ತಕ್ಷಣ ಕದ್ದ ಹಣವನ್ನು ಹಿಂದಿರುಗಿಸುತ್ತೇನೆ’ ಎಂದು ಕಳ್ಳ ಬರೆದಿದ್ದ.

ಪೊಲೀಸರ ಪ್ರಕಾರ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಮತ್ತು ಕುಟುಂಬದ ಕೆಲವು ಪರಿಚಯಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ! ಇನ್ನು ಕಳ್ಳತನಕ್ಕೆ ಸಂಬಂಧಿಸಿದ ಮತ್ತೊಂದು ಘಟನೆಯಲ್ಲಿ, ಮನೆಯ ಮಾಲೀಕ ತನ್ನ ಮನೆಯ ಮುಂದೆ ಕಳ್ಳರಿಗೆ ಸಂದೇಶವನ್ನು ಬಿಟ್ಟಿರುವ ಘಟನೆ ನಡೆದಿದೆ. ರಾಂಚಿಯಲ್ಲಿರುವ ಮನೆಯೊಂದರ ಮನೆ ಮಾಲೀಕ ತಮ್ಮ ಮನೆ ಬಾಗಿಲಿನ ಮುಂದೆ “ಈ ಮನೆಯನ್ನು ಈಗಾಗಲೇ ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ, ದಯವಿಟ್ಟು ನಿಮ್ಮ ಪ್ರಯತ್ನಗಳನ್ನು ವ್ಯರ್ಥ ಮಾಡಬೇಡಿ” ಎಂದು ಬರೆಯುವ ಮೂಲಕ ಕಳ್ಳರು ಈ ಪ್ರದೇಶದಲ್ಲಿ ಈಗಾಗಲೇ ಕಳ್ಳತನವಾಗಿರುವ ಮನೆಯಿಂದ ದೂರವಿರಿ ಎಂದು ಸಂದೇಶ ಬರೆದಿಟ್ಟಿದ್ದಾರೆ.

ಜಾರ್ಖಂಡ್ ರಾಜಧಾನಿಯ ಪುಂಡಾಗ್ ಪ್ರದೇಶದ ಸ್ಥಳೀಯರು ಹೇಳುವ ಪ್ರಕಾರ ಕಳೆದ ತಿಂಗಳು 10 ದಿನಗಳಲ್ಲಿ ಒಂದು ಡಜನ್ ಮನೆಗಳಲ್ಲಿ ಕಳ್ಳತನ ನಡೆಸಿದ ನಂತರ ಕಳ್ಳರು ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ನಡೆದ ಅದೇ ರಾತ್ರಿ, ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಿತೇಂದ್ರ ಸಿಂಗ್ ಅವರ ಮನೆಗೆ ಕಳ್ಳರು ನುಗ್ಗಿ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ, ಹಾಗೂ ಕಳ್ಳರು ಕಳ್ಳತನ ಪ್ರಕರಣವನ್ನು ದಾರಿ ತಪ್ಪಿಸಲು ಬಾಡಿಗೆ ಮನೆಯಲ್ಲಿ ವಾಸಿಸುವ ಮನೋಜ್ ಅಗರ್ವಾಲ್ ಅವರ ಮನೆಯತ್ತ ಗಮನ ಹರಿಸುವಂತೆ ಮಾಡಿದ್ದಾರಂತೆ!

ಇದನ್ನೂ ಓದಿ: ದಾಬಸ್‌ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ; ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು

Published On - 11:47 am, Wed, 7 July 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು