Coronavirus cases in India: ದೇಶದಲ್ಲಿ 43,733 ಹೊಸ ಕೊವಿಡ್ ಪ್ರಕರಣ ಪತ್ತೆ , 930 ಮಂದಿ ಸಾವು
Covid-19: ಜೂನ್ 29 ರಿಂದ ಜುಲೈ 5 ಅವಧಿಯ ವಾರದಲ್ಲಿ ಭಾರತದ 73 ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಸಕಾರಾತ್ಮಕ ಪ್ರಮಾಣವನ್ನು ವರದಿ ಮಾಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 43,733 ಹೊಸ ಕೊವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು 930 ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಸಕ್ರಿಯ ಪ್ರಕರಣಗಳು 4,59,920 ಕ್ಕೆ ಇಳಿದಿವೆ. ಕೇರಳದಲ್ಲಿ 14,373 ಹೊಸ ಪ್ರಕರಣಗಳು ವರದಿಯಾಗಿವೆ, ಇದು ಸುಮಾರು ಒಂದು ತಿಂಗಳಲ್ಲಿ ಅತಿ ಹೆಚ್ಚು. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 8,418 ಪ್ರಕರಣಗಳು ಮತ್ತು 400 ಸಾವುಗಳು ವರದಿಯಾಗಿವೆ. ದೈನಂದಿನ 930 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,04,211 ಕ್ಕೆ ಏರಿದೆ.
ಸಕ್ರಿಯ ಪ್ರಕರಣಗಳು ಮತ್ತಷ್ಟು 4,59,920 ಕ್ಕೆ ಇಳಿದಿವೆ ಮತ್ತು ಒಟ್ಟು ಸೋಂಕುಗಳ ಶೇಕಡಾ 1.50 ರಷ್ಟಿದೆ, ಆದರೆ ರಾಷ್ಟ್ರೀಯ ಕೊವಿಡ್ ಚೇತರಿಕೆ ಪ್ರಮಾಣವು ಶೇಕಡಾ 97.18 ಕ್ಕೆ ತಲುಪಿದೆ. ಮಂಗಳವಾರ 19,07,216 ಪರೀಕ್ಷೆಗಳನ್ನು ನಡೆಸಲಾಗಿದ್ದು, ದೇಶದಲ್ಲಿ ಕೊವಿಡ್ ಪತ್ತೆಗಾಗಿ ಇದುವರೆಗೆ ನಡೆಸಿದ ಒಟ್ಟು ಪರೀಕ್ಷೆ 42,33,32,097 ಕ್ಕೆ ತಲುಪಿದೆ
India reports 43,733 new #COVID19 cases, 47,240 recoveries, and 930 deaths in the last 24 hours, as per the Union Health Ministry
Total cases: 3,06,63,665 Total recoveries: 2,97,99,534 Active cases: 4,59,920 Death toll: 4,04,211
Total vaccinated: 36,13,23,548 pic.twitter.com/kINBbaKa8A
— ANI (@ANI) July 7, 2021
ದೈನಂದಿನ ಸಕಾರಾತ್ಮಕ ದರವು ಶೇಕಡಾ 2.29 ರಷ್ಟಿದೆ. ಸತತ 16 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ, ಸಾಪ್ತಾಹಿಕ ಸಕಾರಾತ್ಮಕ ದರವು ಶೇಕಡಾ 2.39 ಕ್ಕೆ ಇಳಿದಿದೆ.
ಚೇತರಿಕೆಗಳು ಸತತ 55 ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 2,97,99,534 ಕ್ಕೆ ಏರಿದೆ, ಆದರೆ ಸಾವಿನ ಪ್ರಮಾಣವು ಶೇಕಡಾ 1.32 ರಷ್ಟಿದೆ.
A total of 42,33,32,097 samples were tested for #COVID19 up to July 6. Of which, 19,07,216 samples were tested yesterday: Indian Council of Medical Research (ICMR) pic.twitter.com/JBEuIMet9y
— ANI (@ANI) July 7, 2021
ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ ದಾಟಿದೆ , ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಗಳ ಭೀಕರ ಮೈಲಿಗಲ್ಲು ದಾಟಿದೆ.
45 ಜಿಲ್ಲೆಗಳಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಸಕಾರಾತ್ಮಕತೆಯೊಂದಿಗೆ, ಸಾಂಕ್ರಾಮಿಕ ರೋಗವು ಈಶಾನ್ಯ ರಾಜ್ಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಜೂನ್ 29 ರಿಂದ ಜುಲೈ 5ರ ಅವಧಿಯಲ್ಲಿ ವಾರದಲ್ಲಿ ಭಾರತದ 73 ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಸಕಾರಾತ್ಮಕ ಪ್ರಮಾಣವನ್ನು ವರದಿ ಮಾಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಅತೀ ಹೆಚ್ಚು ಕೊವಿಡ್ ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ 61ಶೇಕಡಾ ಈಶಾನ್ಯ ರಾಜ್ಯಗಳಿದ್ದು ಈ ಪೈಕಿ ಅರುಣಾಚಲ (ಪ್ರದೇಶ (18), ಮಣಿಪುರ (9), ಮೇಘಾಲಯ (6), ತ್ರಿಪುರ (4), ಸಿಕ್ಕಿಂ (4), ನಾಗಾಲ್ಯಾಂಡ್ (3), ಮತ್ತು ಮಿಜೋರಾಂ (1) ಪ್ರಕರಣ ವರದಿ ಆಗಿದೆ. ಮಣಿಪುರ (5,974) ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಮೇಘಾಲಯ (4,354), ತ್ರಿಪುರ (3,962), ಮಿಜೋರಾಂ (3,730), ಸಿಕ್ಕಿಂ (1,869) ಮತ್ತು ನಾಗಾಲ್ಯಾಂಡ್ ನಲ್ಲಿ (1192) ಇವೆ.
ದೇಶದ ಕೊವಿಡ್ -19 ಕಾರ್ಯಪಡೆಯ ಸದಸ್ಯ ಮತ್ತು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು ಈಶಾನ್ಯ ರಾಜ್ಯಗಳು ಪರೀಕ್ಷೆಯನ್ನು ಚುರುಕುಗೊಳಿಸಬೇಕಾಗಿದೆ, ಜಿಲ್ಲಾ ಮಟ್ಟದಲ್ಲಿ ಪರೀಕ್ಷಾ ಸಕಾರಾತ್ಮಕ ದರವನ್ನು “ಸೂಕ್ಷ್ಮವಾಗಿ ಗಮನಿಸಿ” ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ
ಏತನ್ಮಧ್ಯೆ, ಕುಂಭಮೇಳಕ್ಕಾಗಿ 36 ಲಕ್ಷಕ್ಕೂ ಹೆಚ್ಚು ಜನರಿಗೆ ಆತಿಥ್ಯ ವಹಿಸಿದ ಎರಡು ತಿಂಗಳ ನಂತರ, ಎರಡನೇ ಕೊವಿಡ್ ಅಲೆಗೆ ಸ್ವಲ್ಪ ಮುಂಚಿತವಾಗಿ, ಉತ್ತರಾಖಂಡದ ಬಿಜೆಪಿ ಸರ್ಕಾರವು ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ರಾಜ್ಯದ ವಾರ್ಷಿಕ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ. ಗಂಗಾದಿಂದ ನೀರು ಸಂಗ್ರಹಿಸಲು ವಾರ್ಷಿಕ ತೀರ್ಥಯಾತ್ರೆಗಾಗಿ ಈ ತಿಂಗಳು ಹರಿದ್ವಾರಕ್ಕೆ ಬರದಂತೆ ಭಕ್ತರನ್ನು ಕೇಳಬೇಕೆಂದು ಮಂಗಳವಾರ ರಾಜ್ಯದ ಪೊಲೀಸ್ ಅಧಿಕಾರಿಗಳು ನೆರೆಯ ರಾಜ್ಯಗಳ ಅಧಿಕಾರಿಗಳಿಗೆ ಮನವಿ ಮಾಡಿದರು. ಕೊವಿಡ್ ನಿರ್ಬಂಧದಿಂದಾಗಿ ಕಳೆದ ವರ್ಷ ಯಾತ್ರೆ ನಡೆಯಲಿಲ್ಲ.
ಇದನ್ನೂ ಓದಿ: Dilip Kumar Death: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನ
(India reported 43,733 new Covid-19 cases and 930 deaths in the last 24 hours data from the Union Health Ministry)
Published On - 10:34 am, Wed, 7 July 21