ಪಕ್ಕದಲ್ಲಿ ಪತಿ ಬಂದು ಕುಳಿತುಕೊಳ್ಳುತ್ತಿದ್ದಂತೆ ದೊಡ್ಡದಾಗಿ ಅಳುತ್ತ ಮತ್ತೊಬ್ಬರನ್ನು ತಬ್ಬಿಕೊಂಡ ವಧು; ಈ ವಿಡಿಯೋ ನೋಡಿದ್ರೆ ನಿಮಗೂ ನಗು ಬರುತ್ತೆ
ವಿಡಿಯೋ ನೋಡಿದ ಜನರು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ತುಂಬ ತಮಾಷೆಯುಕ್ತವಾಗಿ ಕಾಮೆಂಟ್ ಮಾಡಿದ್ದಾರೆ. ವರ ಬಹುಶಃ ಸರ್ಕಾರಿ ಕೆಲಸದಲ್ಲಿ ಇರಬೇಕು ಎಂದು ಒಂದಷ್ಟು ಮಂದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ನಗು ತರಿಸುತ್ತವೆ. ಅದರಲ್ಲೂ ಇತ್ತೀಚೆಗೆ ಮದುವೆಗೆ ಸಂಬಂಧಪಟ್ಟ ವಿಡಿಯೋಗಳು ತುಂಬ ಹರಿದಾಡುತ್ತಿದ್ದು, ಒಂದಲ್ಲ ಒಂದು ವಿಚಿತ್ರ ಸನ್ನಿವೇಶವನ್ನು ನಮ್ಮೆದುರು ತೆರೆದಿಡುತ್ತಿವೆ. ಎಲ್ಲಿ ನಡೆದಿದ್ದು ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೇ ಸೆಕೆಂಡ್, ನಿಮಿಷಗಳ ವಿಡಿಯೋಗಳು ನಮ್ಮನ್ನು ನಗೆಗಡಲಲ್ಲಿ ತೇಲಿಸದೆ ಇದ್ದರೆ ಕೇಳಿ. ಹಾಗೇ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಇದು ದುಃಖದ ಸನ್ನಿವೇಶದ್ದಾದರೂ ನೋಡಿದರೆ ನಗುವುದು ಗ್ಯಾರಂಟಿ.
ಹೊಸದಾಗಿ ಮದುವೆಯಾದ ಜೋಡಿಗೆ ಸಂಬಂಧಪಟ್ಟ ವಿಡಿಯೋ ಇದು. ಮದುವೆಯೆಲ್ಲ ಮುಗಿದು, ವಧು ವರನ ಮನೆಗೆ ಹೊರಟ ಸಂದರ್ಭ. ಚೆಂದವಾಗಿ ಅಲಂಕಾರ ಮಾಡಿಕೊಂಡು ಕಾರಿನಲ್ಲಿ ಕುಳಿತಿದ್ದಾಳೆ. ಕಣ್ಣಲ್ಲಿ ನೀರು ತುಂಬಿ, ಆಗಲೇ ಮುಖವೆಲ್ಲ ಬಾಡಿದೆ. ಅದು ಸಹಜ ಕೂಡ. ಪ್ರತಿ ಹೆಣ್ಣು ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಸಂದರ್ಭ ಅಳುತ್ತಾಳೆ. ಹಾಗೇ ಈಕೆಯೂ ಕಾರಿನಲ್ಲಿ ಬಾಡಿದ ಮುಖ ಹೊತ್ತು ಕುಳಿತಿದ್ದಳು. ಅವಳು ಕುಳಿತ ಬದಿಯ ಬಾಗಿಲು ಇನ್ನೂ ಹಾಕಿರಲಿಲ್ಲ. ಅಲ್ಲೊಬ್ಬ ಮಹಿಳೆ ನಿಂತಿದ್ದಳು.
ಅಷ್ಟರಲ್ಲಿ ಕಾರಿನ ಇನ್ನೊಂದು ಬದಿಯ ಬಾಗಿಲು ತೆಗೆದ ವರ ಬಂದು ವಧುವಿನ ಪಕ್ಕದಲ್ಲಿ ಕುಳಿತ. ತಿರುಗಿ ಆತನನ್ನು ನೋಡಿದ ವಧು ಒಂದೇ ಸಮನೆ ದೊಡ್ಡದಾಗಿ ಅಳಲು ಶುರು ಮಾಡಿದಳು. ಅಲ್ಲೇ ತನ್ನ ಸಮೀಪ ನಿಂತಿದ್ದ ಮಹಿಳೆಯನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು. ಆ ವಿಡಿಯೋ ಇದೀಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿದ ಜನರು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ತುಂಬ ತಮಾಷೆಯುಕ್ತವಾಗಿ ಕಾಮೆಂಟ್ ಮಾಡಿದ್ದಾರೆ. ವರ ಬಹುಶಃ ಸರ್ಕಾರಿ ಕೆಲಸದಲ್ಲಿ ಇರಬೇಕು ಎಂದು ಒಂದಷ್ಟು ಮಂದಿ ಅಭಿಪ್ರಾಯವ್ಯಕ್ತಪಡಿಸಿದ್ದರೆ, ವರ ನೋಡಲು ಅಷ್ಟು ಸುಂದರವಾಗಿಲ್ಲ. ಹಾಗಾಗಿ ಅವನನ್ನು ನೋಡಿ ವಧು ಅಳುತ್ತಿದ್ದಾಳೆ ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ದುಃಖದ ಸನ್ನಿವೇಶವೊಂದು ಫನ್ನಿ ಕ್ಷಣವಾಗಿ ಬದಲಾಗಿದೆ.
View this post on Instagram
ಇದನ್ನೂ ಓದಿ: ವಿಶ್ವದ ಅತ್ಯಂತ ಎತ್ತರದ ಕುದುರೆ ಬಿಗ್ ಜೇಕ್ ನಿಧನ; ಅದು ಮೃತಪಟ್ಟ ದಿನಾಂಕ ಹೇಳಲು ಹಿಂದೇಟು ಹಾಕಿದ ಮಾಲೀಕರು
A bride who began to cry loudly as her husband came and sat beside her Viral Video
Published On - 11:54 am, Wed, 7 July 21