Viral Video: ಮಿಡತೆಯನ್ನು ಹೆದರಿಸಲು ಪ್ರಯತ್ನಿಸಿದ ಹುಡುಗ! ಮುಂದೆ ಏನಾಗುತ್ತದೆ ಎಂಬುದನ್ನು ನೀವೇ ನೋಡಿ
ಮಿಡತೆಗಳು ಮುಗ್ಧ ಮತ್ತು ಸಾಧು ಜೀವಿಗಳು ಎಂಬ ಕಲ್ಪನೆಗಳೊಂದಿಗೆ ನೀವಿದ್ದೀರಾ? ಅದು ಬಿಸಿಲಿನಲ್ಲಿ ಹುಲ್ಲುಗಾವಲುಗಳ ಸುತ್ತ ಮಾತ್ರ ಹಾರುತ್ತಿರುತ್ತದೆ ಎಂದು ತಿಳಿದಿದ್ದೀರಾ? ಹಾಗಾದರೆ, ಈ ವಿಚಾರದ ಬಗ್ಗೆ ನೀವು ಮತ್ತೊಮ್ಮೆ ಯೋಚಿಸಬೇಕಾದ ಸಮಯ. ಯಾಕೆ ಗೊತ್ತಾ? ಇಲ್ಲಿರುವ ವಿಡಿಯೋ ನೋಡಿ, ನಿಮಗೆ ಗೊತ್ತಾಗುತ್ತೆ.
ಮಿಡತೆಗಳು ಮುಗ್ಧ ಮತ್ತು ಸಾಧು ಜೀವಿಗಳು ಎಂಬ ಕಲ್ಪನೆಗಳೊಂದಿಗೆ ನೀವಿದ್ದೀರಾ? ಅದು ಬಿಸಿಲಿನಲ್ಲಿ ಹುಲ್ಲುಗಾವಲುಗಳ ಸುತ್ತ ಮಾತ್ರ ಹಾರುತ್ತಿರುತ್ತದೆ ಎಂದು ತಿಳಿದಿದ್ದೀರಾ? ಹಾಗಾದರೆ, ಈ ವಿಚಾರದ ಬಗ್ಗೆ ನೀವು ಮತ್ತೊಮ್ಮೆ ಯೋಚಿಸಬೇಕಾದ ಸಮಯ. ನಿಮ್ಮ ಮನೆಯಿಂದ ಮಿಡತೆಯನ್ನು ಹೆದರಿಸಿ ಓಡಿಸುವ ಕೆಲಸ ನಿಮಗೇ ತಿರುಗುಬಾಣವಾಗಬಹುದು. ತನ್ನ ಮನೆಯಲ್ಲಿದ್ದ ಮಿಡತೆಯೊಂದನ್ನು ಹೆದರಿಸಲು ಹೋದ ಈ ಹುಡುಗನ ವಿಡಿಯೊ ವೈರಲ್ ಆಗಿದೆ. ನೀವು ಕೀಟಗಳನ್ನು ಹೆದರಿಸುವ ಮೂರ್ಖತನ ಮಾಡಲು ಹೋದರೆ ಅದರಲ್ಲಿಯೂ ವಿಶೇಷವಾಗಿ ನೀವು ಕೀಟ ಪ್ರಿಯರಲ್ಲದಿದ್ದರೆ ಈ ಅನುಭವ ನಿಮಗೂ ಆಗಬಹುದು.
ಮನೆಯ ಜಗಲಿಯಲ್ಲಿನ ಕ್ಯಾಮೆರಾದಿಂದ ರೆಕಾರ್ಡ್ ಮಾಡಲಾಗಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಮಿಡತೆಯನ್ನು ಹೆದರಿಸಲು ಪ್ರಯತ್ನಿಸುತ್ತಾನೆ. ಆದರೆ ಅವನ ಸಂತೋಷವು ಅಲ್ಪಕಾಲಿಕವಾಗಿತ್ತು. ಏಕೆಂದರೆ ಶೀಘ್ರದಲ್ಲಿ, ಮಿಡತೆಯೇ ಅವನನ್ನು ಜಗಲಿಯಿಂದ ಓಡಿಸಿತು.
ಈ ವಿಡಿಯೊದಲ್ಲಿ, ಮೊದಲಿಗೆ ಒಬ್ಬ ಯುವಕ ಬಾಗಿಲಿನ ಮುಂದೆ ಹೆಜ್ಜೆ ಹಾಕುತ್ತಾನೆ. ಅವನು ಅನಿಯಂತ್ರಿತವಾಗಿ ಗೋಡೆಯಿಂದ ಒಂದು ದೊಡ್ಡ ಮಿಡತೆಯನ್ನು ಓಡಿಸುತ್ತಾನೆ, ಆದರೆ, ನಂತರ ಆ ಮಿಡತೆ ತನ್ನ ಹತ್ತಿರ ಬಂದು ಸುತ್ತಲು ಶುರುಮಾಡಿದಾಗ ಸ್ವತಃ ಹೆದರುತ್ತಾನೆ. ಅವನು ಕೂಗುತ್ತಾ ಭಯಭೀತನಾಗಿ ಜಗಲಿಯಿಂದ ಬೀದಿಗೆ ಓಡಿಹೋಗುವಾಗ, ಆ ಕುಟುಂಬದ ಮಹಿಳೆಯೊಬ್ಬಳು ಈ ಸನ್ನಿವೇಶವನ್ನು ನೋಡಿ ನಗುತ್ತಾಳೆ.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವೀಡಿಯೊವನ್ನು ಅಮೆರಿಕದ ನೆವಾಡಾದಲ್ಲಿ ನಡೆದಿದೆ. ವೀಡಿಯೊವನ್ನು ಕಳುಹಿಸಿದವರು, “ನಾವು ತಿಂಡಿ ಮಾಡಿ ನಂತರ ಮನೆಗೆ ಹಿಂತಿರುಗುತ್ತಿದ್ದೆವು. ಆಗ ದೈತ್ಯ ಮಿಡತೆಯೊಂದು ಜಗಲಿಯ ಗೋಡೆಯ ಮೇಲೆ ಇತ್ತು. ಥಾಮಸ್ ಅದನ್ನು ದೂರವಿಡಲು ಪ್ರಯತ್ನಿಸಿದನು ಆದರೆ ಅದು ಅವನ ಮೇಲೆ ಆಕ್ರಮಣ ಮಾಡಿತು,” ಎಂದು ಬರೆದಿದ್ದಾರೆ.
ಕೀಟವು ತನ್ನ ರಕ್ಷಣೆಗಾಗಿ ಮಾಡಿದಂತಹ ಈ ದಾಳಿಯನ್ನು ಥಾಮಸ್ ಖಂಡಿತವಾಗಿಯೂ, ಪ್ರತೀಕಾರ ಮನೋಭಾವನೆ ಎಂದು ಅಂದುಕೊಂಡಿರಬಹುದು. ಮುಂದಿನ ಬಾರಿ ಥಾಮಸ್ ಮನೆಗೆ ಮರಳಿದಾಗ ಮಿಡತೆ ಬೇರೊಂದು ಗೋಡೆಯನ್ನು ಆರಿಸಿಕೊಳ್ಳಬೇಕೆಂದು ನಾವು ಆಶಿಸುತ್ತೇವೆ.
ಇದನ್ನೂ ಓದಿ:
ವಿಶ್ವದಲ್ಲಿಯೇ ಅತಿ ಚಿಕ್ಕ ಹಸುವಿದು! ಬಾಂಗ್ಲಾದೇಶದ ಕುಬ್ಜ ಹಸುವಿನ ಆಕರ್ಷಣೆಗೆ ಆಶ್ಚರ್ಯಗೊಂಡ ಪ್ರವಾಸಿಗರು
(In the viral video a boy tries to scare grasshopper but gets hounded)