AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಸಮಾರಂಭದಲ್ಲಿ ಸಕತ್​​ ಮ್ಯೂಸಿಕ್​ಗೆ ಸೊಂಟ ಬಳುಕಿಸಿದ ವಯಸ್ಕರು; ವಿಡಿಯೋ ನೋಡಿ ಯುವಜನತೆ ಮರುಳಾದ್ರು!

ನೃತ್ಯ ಮಾಡುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ. ಪ್ರತಿಭೆ ಇದ್ದರೂ ಸಹ ಕೆಲವರಿಗೆ ನೃತ್ಯ ಮಾಡುವ ಉತ್ಸಾಹ ಇರುವುದಿಲ್ಲ. ಆದರೆ ಇಲ್ಲಿರುವ ವಯಸ್ಕರು ಮದುವೆ ಸಮಾರಂಭದಲ್ಲಿ ಡಿಜೆ ಮ್ಯೂಸಿಕ್​ಗೆ ಸಕತ್​ ಆಗಿ ನೃತ್ಯ ಮಾಡಿದ್ದಾರೆ. ಇವರನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

ಮದುವೆ ಸಮಾರಂಭದಲ್ಲಿ ಸಕತ್​​ ಮ್ಯೂಸಿಕ್​ಗೆ ಸೊಂಟ ಬಳುಕಿಸಿದ ವಯಸ್ಕರು; ವಿಡಿಯೋ ನೋಡಿ ಯುವಜನತೆ ಮರುಳಾದ್ರು!
ಸಕತ್​​ ಮ್ಯೂಸಿಕ್​ಗೆ ಸೊಂಟ ಬಳುಕಿಸಿದ ವಯಸ್ಕರು
TV9 Web
| Edited By: |

Updated on: Jul 09, 2021 | 11:46 AM

Share

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ನೃತ್ಯದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಹೊಸ ಹೊಸ ಸ್ಟೈಲ್​, ಹೊಸ ಲುಕ್​! ಈಗಿನ ಯುವಜನತೆಯಂತೂ ಡಾನ್ಸ್​ ಅಂದ್ರೆ ಎಲ್ಲಿದ್ರೂ ಓಡಿ ಬಂದು ಒಂದು ಸ್ಟೆಪ್​ ಹಾಕಿಯೇ ಬಿಡ್ತಾರೆ! ಹಾಗೆಯೇ ಇಲ್ಲೋರ್ವ ವಯಸ್ಕರೂ ಸಹ ನಾವು ಯಾವುದರಲ್ಲೂ ಕಡಿಮೆ ಇಲ್ಲ ಅನ್ನುತ್ತಾ ಯುವಕರಂತೆ ಸ್ಟೆಪ್​ ಹಾಕುತ್ತಿದ್ದಾರೆ. ಇವರ ಸ್ಟೈಲಿಶ್​ ಸ್ಟೆಪ್​ಗೆ ಯುವಜನತೆಯೇ ಮರುಳಾಗಿದ್ದಾರೆ. ಸಕತ್​ ಆಗಿ ಸೊಂಟ ಬಳುಕಿಸುತ್ತಾರೆ.. ಒಳ್ಳೆಯ ಸ್ಟೆಪ್​ ಹಾಕ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ನೃತ್ಯ ಮಾಡುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ. ಪ್ರತಿಭೆ ಇದ್ದರೂ ಸಹ ಕೆಲವರಿಗೆ ನೃತ್ಯ ಮಾಡುವ ಉತ್ಸಾಹ ಇರುವುದಿಲ್ಲ. ಆದರೆ ಇಲ್ಲಿರುವ ವಯಸ್ಕರು ಮದುವೆ ಸಮಾರಂಭದಲ್ಲಿ ಡಿಜೆ ಮ್ಯೂಸಿಕ್​ಗೆ ಸಕತ್​ ಆಗಿ ನೃತ್ಯ ಮಾಡಿದ್ದಾರೆ. ಇವರನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

ವಯಸ್ಸಾಯಿತು ಎಂಬುದೇ ಅದೆಷ್ಟೋ ಜನರ ಚಿಂತೆ! ಆದರೆ ಆರೋಗ್ಯವೊಂದಿದ್ದರೆ ಯಾವ ವಯಸ್ಸಿನಲ್ಲಿಯೂ ಸಹ ಯುವಕರಂತೆ ಇರಬಹುದು ಎಂಬುದಕ್ಕೆ ಇವರೇ ಸಾಕ್ಷಿ. ಅದರಲ್ಲಿಯೂ ನೃತ್ಯ ಮಾಡಿ ಅಂದಾಕ್ಷಣ.. ನಮಗೆ ವಯಸ್ಸಾಯ್ತು ಕುಣಿಯೋಕೆ ಆಗಲ್ಲ ಎಂದು ಹಿಂಜರಿಯುವವರೇ ಹೆಚ್ಚು. ಹಾಗಿರುವಾಗ ಇಲ್ಲೋರ್ವರು ಸಕತ್​ ಹಾಡಿಗೆ ಸೊಂಟ ಬಳುಕಿಸುತ್ತಾ ಸ್ಟೈಲಿಶ್​ ಸ್ಟೆಪ್​ ಹಾಕಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ 40,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಯಸ್ಕರು ಎಲ್ಲಿ ನೃತ್ಯ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಆದರೆ ನಟ್ಟಿಗರನ್ನು ಮೆಚ್ಚಿಸುವ ಈ ಡಾನ್ಸ್​ ನೋಡಿ ಜನರು ಆಶ್ಚರ್ಯಪಟ್ಟಿರುವುದಂತೂ ಸತ್ಯ. ನೃತ್ಯ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ಸೆಕ್ಷನ್​ನಲ್ಲಿ ಬರೆದಿದ್ದಾರೆ. ಕೆಲವರು ಹೃದಯದ ಎಮೋಜಿಗಳನ್ನು ಕಳುಹಿಸಿದ್ದರೆ ಇನ್ನು ಕೆಲವರು ನಗುವ ಎಮೋಜಿಗಳನ್ನು ಕಳುಹಿಸಿದ್ದಾರೆ. ಇನ್ನು ಕೆಲವರು ವಯಸ್ಕರ ಡಾನ್ಸ್​ ನೋಡಿ ಫಿದಾ ಆಗಿದ್ದಾರೆ.

ಇದನ್ನೂ ಓದಿ:

Viral Video: ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!

Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ