Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?

ಭಯಾನಕ ದೃಶ್ಯದ ಕುರಿತಾಗಿ ಸ್ಥಳೀಯರು ತಿಳಿದಿರುವಂತೆ ತೋರುತ್ತಿದ್ದಾರೆ. ಆದರೆ ಯಾರೂ ಕೂಡಾ ನಿಜವಾಗಿಯೂ ನಿಗೂಢ ಗೊಂಬೆಯ ಕುರಿತಾಗಿ ಮಾತನಾಡಲು ಮುಂದೆಬರುತ್ತಿಲ್ಲ.

Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?
ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ
Follow us
TV9 Web
| Updated By: shruti hegde

Updated on:Jun 03, 2021 | 11:11 AM

ಕತ್ತಲೆಯಲ್ಲಿ ಕೆಲವು ಆಕೃತಿಗಳನ್ನು ನೋಡಿದರೆ ನಾವು ಭಯಗೊಳ್ಳುವುದು ಸಮಾನ್ಯ. ಕೆಲವು ಬಾರಿ ಯಾವುದೋ ವಸ್ತುವಿನ ನೆರಳು ಕೂಡಾ ಒಂದು ರೀತಿಯ ವಿಕಾರ ಆಕೃತಿಯಂತೆ ಕಂಡು ಭಯಗೊಂಡ ಸನ್ನಿವೇಶವೂ ನಡೆದಿರುತ್ತದೆ. ಆದರೆ ನಿಜವಾಗಿಯೂ ಮರದ ಕೊಂಬೆಗೆ ಗೊಂಬೆಯು ಒಂದು ಜೋಕಾಲಿಯ ಮೇಲೆ ಕೂತಿರುವ ದೃಶ್ಯವನ್ನು ಕತ್ತಲೆಯಲ್ಲಿ ನೋಡಿದರೆ ಹೇಗಾಗಬಹುದು? ಅಂತಹುದೇ ಒಂದು ದೃಶ್ಯ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ.

ಮ್ಯಾಂಗ್ರೋವ್​ ಜೌಗು ಪ್ರದೇಶದಲ್ಲಿ ಮರದ ಕೊಂಬೆಗೆ ನಿಗೂಢ ಗೊಂಬೆಯೊಂದು ಜೋಕಾಲಿಯ ಮೇಲೆ ಕುಳಿತಿರುವ ದೃಶ್ಯವೊಂದು ಕಂಡು ಬಂದಿದೆ. ಆದರೆ ಪಟ್ಟಣದ ಎಲ್ಲಾ ನಿವಾಸಿಗಳಿಗೆ ಗೊಂಬೆಯ ಕುರಿತಾಗಿ ಚೆನ್ನಾಗಿ ತಿಳಿದಿದೆ. ಆದರೆ ಗೊಂಬೆಯನ್ನು ಮುಟ್ಟಲು ಅಥವಾ ತನಿಖೆ ನಡೆಸಲು ಯಾರೂ ಕೂಡಾ ಮುಂದಾಗುತ್ತಿಲ್ಲ. ಎಂದು ವರದಿಗಳು ತಿಳಿಸಿವೆ.

ಇದಾಗ್ಯೂ ಕೂಡಾ ಗೊಂಬೆಯ ಸುತ್ತಲಿನ ಕಥೆಗಳ ಕುರಿತಾಗಿ ಸ್ಥಳೀಯ ಸಂಸದರಿಗೆ ಚೆನ್ನಾಗಿ ತಿಳಿದಿದೆ. ಇದು ಗೊಂದಲಕ್ಕೆ ಸೃಷ್ಟಿಯಾಗಿದ್ದು ಚರ್ಚೆಗೆ ಕಾರಣವಾಗಿದೆ.

ಅಲ್ಲಿನ ಪ್ರತಿಯೊಬ್ಬರೂ ಕೂಡಾ ಗೊಂಬೆಯ ಕುರಿತಾಗಿ ತಿಳಿದಿರುವಂತೆ ತೋರುತ್ತಿದ್ದಾರೆ. ಆದರೆ ಯಾರೂ ಕೂಡಾ ನಿಜವಾಗಿಯೂ ನಿಗೂಢ ಗೊಂಬೆಯ ಕುರಿತಾಗಿ ಮಾತನಾಡಲು ಮುಂದೆಬರುತ್ತಿಲ್ಲ. ‘ಇದು ಆಧುನಿಕ ಸನ್ನಿವೇಶದ ಕಥೆಯಾಗಿರಬಹುದು ಆದರೆ ನಾನು ಖಂಡಿತವಾಗಿಯೂ ಈ ಕುರಿತಾಗಿ ತಮಾಷೆ ಮಾಡಲು ಸಿದ್ಧನಿಲ್ಲ. ಗೊಂಬೆಯ ದೃಶ್ಯ ಉತ್ತರಗಳಿಗಿಂತ, ಪ್ರಶ್ನೆಗಳನ್ನು ಹೆಚ್ಚು ಹುಟ್ಟುಹಾಕಿದೆ ಎಂದು ’ ಎಂದು ಸ್ಥಳೀಯ ರಾಜಕೀಯ ಪ್ರತಿನಿಧಿ ನಿಕ್​ ಡಮೆಟ್ಟೊ ಹೇಳಿದ್ದಾರೆ.

ಈ ಕುರಿತಂತೆ ಒಬ್ಬ ವ್ಯಾಪಾರಿ ಸ್ಥಳೀಯ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದು, ಯಾರೋ ದಂಪತಿ ಮರಕ್ಕೆ ಜೋಕಾಲಿ ಕಟ್ಟಿ ಗೊಂಬೆಯನ್ನು ಇರಿಸಿದ್ದಾರೆಂದು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: 

Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು

ಭಯಾನಕ ಕಥೆಗೆ ಸುಖಾಂತ್ಯ; ‘ಕನ್ನಡತಿ’ ತಂಡ ಹರಿಬಿಡ್ತು ಹೊಸ ವಿಡಿಯೋ  

Published On - 11:10 am, Thu, 3 June 21