AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 3ರ ದಿನಭವಿಷ್ಯ

Daily Numerology March 03: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 3ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 3ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Mar 03, 2026 | 11:19 AM

Share

ಪ್ರೀತಿಯಲ್ಲಿ ಇದ್ದು, ವಿರಸಗಳು ಪದೇ ಪದೇ ಆಗುತ್ತಾ ಇದ್ದಲ್ಲಿ ಹಾಗೂ ಮದುವೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ನಾನಾ ರೀತಿ ಅಡೆತಡೆಗಳು ಎದುರಾಗುತ್ತಾ ಇದ್ದಲ್ಲಿ ‘ರೋಸ್ ಕ್ವಾರ್ಟ್ಜ್’ ಸ್ಟೋನ್ ಉಂಗುರ, ಹಾರ ಅಥವಾ ಬ್ರೇಸ್ ಲೆಟ್ ಹಾಕಿದಲ್ಲಿ ಶುಭ ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮ ಬಳಿ ಇರುವಂಥ ಉಳಿತಾಯ- ಹೂಡಿಕೆ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವುದಕ್ಕೆ ಇದು ಸೂಕ್ತ ದಿನವಾಗಿರುತ್ತದೆ. ತಾವೊಬ್ಬರೇ ಹೋಗುವುದಕ್ಕಿಂತ ಜತೆಯಲ್ಲಿ ನೀವೂ ಬಂದರೆ ಅನುಕೂಲ ಆಗುತ್ತದೆ ಎಂದು ನಿಮ್ಮ ಸ್ನೇಹಿತರು ಹೇಳುವುದರಿಂದ ದಿಢೀರ್ ಪ್ರಯಾಣ ತೆರಳುವಂತೆ ಆಗಲಿದೆ. ಶೀತ- ಜ್ವರದ ಬಾಧೆ ಅಲ್ಪ ಪ್ರಮಾಣದಲ್ಲಿಯಾದರೂ ಕಾಡಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ಇದರಿಂದ ನಿಮಗೂ ಸಂತೋಷ- ಸಮಾಧಾನ ದೊರೆಯಲಿದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ- ವೃತ್ತಿ- ವ್ಯವಹಾರ- ವ್ಯಾಪಾರಗಳಲ್ಲಿ ನಿಮ್ಮ ಮಾತಿಗೆ ತೂಕ ಸಿಗುವ ದಿನ ಇದಾಗಿರುತ್ತದೆ. ಕುಟುಂಬದಲ್ಲಿ ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ವಿಷಯಗಳು ಚರ್ಚೆ ಆಗಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಅಲರ್ಜಿ– ಚರ್ಮದ ಸಮಸ್ಯೆಗಳು ಪದೇಪದೇ ಕಾಣಿಸುತ್ತಾ ತೊಂದರೆ ನೀಡುತ್ತಾ ಇದ್ದಲ್ಲಿ ಅಂಥವುಗಳಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ದಿನ ಇದಾಗಿರುತ್ತದೆ. ಹಣಕಾಸು ವಿಚಾರದಲ್ಲಿ ಹರಿವು ಚೆನ್ನಾಗಿರುತ್ತದೆ. ದೂರದ ಸಂಬಂಧಿಗಳಿಂದ ಸಂತಸದ ಸುದ್ದಿ ಬರುವ ಸಾಧ್ಯತೆ ಇದೆ. ಪ್ರೀತಿಯಲ್ಲಿ ಇರುವವರು ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಿ, ಮದುವೆಗೆ ಒಪ್ಪಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Follow Us