Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು

ಕೆಲವರು ಈ ವಿಡಿಯೋವನ್ನು ನೋಡಿ ಆಕೃತಿಯ ಬಗ್ಗೆ ವಿವಿಧ ಅಭಿಪ್ರಾಯ ತಾಳಿದ್ದಾರೆ. ಕೆಲವೊಬ್ಬರು ಇದನ್ನು ದೆವ್ವ ಎಂದು ಅಂದುಕೊಂಡಿದ್ಧಾರೆ. ಇನ್ನೂ ಕೆಲವರು ಈ ಆಕೃತಿಯನ್ನು ಏಲಿಯನ್ ಎಂದು ಕರೆದಿದ್ದಾರೆ.

Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು
ವೈರಲ್ ವಿಡಿಯೋದ ದೃಶ್ಯ
Follow us
TV9 Web
| Updated By: ganapathi bhat

Updated on:Aug 14, 2021 | 1:03 PM

ಸಾಮಾಜಿಕ ಜಾಲತಾಣಗಳ ಜಂಜಾಟದಲ್ಲಿ ನೂರಾರು ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತಿರುತ್ತವೆ. ಹಲವಾರು ವಿಡಿಯೋಗಳು ತಮ್ಮ ಪಾಡಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದುಹೋಗುತ್ತಿರುತ್ತದೆ. ಒಂದರ ಹಿಂದೆ ಒಂದರಂತೆ ಬಂದು ಹೋಗುತ್ತದೆ. ಆದರೆ, ಇಲ್ಲೊಂದು ವಿಶೇಷ ವಿಡಿಯೋ ವೈರಲ್ ಆಗಿರುವುದು ಕಂಡುಬಂದಿದೆ. ನೋಡುಗರು ಈ ಚಿತ್ರಣ ನೋಡಿ ಒಂದು ಕ್ಷಣಕ್ಕೆ ಗಾಬರಿಗೊಳ್ಳುವುದಂತೂ ಗ್ಯಾರಂಟಿ. ಒಂದು ವಿಚಿತ್ರ ಆಕೃತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಉತ್ತರಾಖಂಡ್​ದ ರಸ್ತೆಯೊಂದರಲ್ಲಿ ಈ ದೃಶ್ಯ ಕಂಡಿದೆ.

ಕೆಲವರು ಈ ವಿಡಿಯೋವನ್ನು ನೋಡಿ ಆಕೃತಿಯ ಬಗ್ಗೆ ವಿವಿಧ ಅಭಿಪ್ರಾಯ ತಾಳಿದ್ದಾರೆ. ಕೆಲವೊಬ್ಬರು ಇದನ್ನು ದೆವ್ವ ಎಂದು ಅಂದುಕೊಂಡಿದ್ಧಾರೆ. ಇನ್ನೂ ಕೆಲವರು ಈ ಆಕೃತಿಯನ್ನು ಏಲಿಯನ್ ಎಂದು ಕರೆದಿದ್ದಾರೆ. ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಈ ಬಗ್ಗೆ ವಾಗ್ವಾದವನ್ನೂ ನಡೆಸಿದ್ದಾರೆ. ಅದು ದೆವ್ವ, ಭೂತ ಏನೂ ಅಲ್ಲ ಎಂದು ಯಾರೋ ಮನುಷ್ಯರೇ ನಡೆದುಕೊಂಡು ಹೋಗುತ್ತಿರುವುದು ಎಂದಿದ್ದಾರೆ. ಒಬ್ಬೊಬ್ಬರು ಅವರ ಅನುಭವ, ಆಲೋಚನೆಗಳಿಗೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ಧಾರೆ.

ಈ ರಸ್ತೆ ಸಂಪೂರ್ಣ ಕತ್ತಲಾಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಬೈಕ್ ಅಥವಾ ಕಾರ್ ಮುಂತಾದ ವಾಹನಗಳ ಬೆಳಕಿಗೆ ಆಕೃತಿಯೊಂದು ನಡೆದು ಹೋಗುತ್ತಿರುವುದು ಕಂಡಿದೆ. ವೇಗವಾಗಿ ನಡೆದುಹೋಗುತ್ತಿರುವ ಆಕೃತಿ ಅಸ್ಪಷ್ಟವಾಗಿದೆ. ಹಾಗೇ ನೋಡುತ್ತಿರುವಂತೆ ಮತ್ತೆ ಕೆಲವು ವಾಹನಗಳನ್ನು ಅಲ್ಲೇ ನಿಲ್ಲಿಸಿದ್ದಾರೆ. ಮೊಬೈಲ್​ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.

ವಿಡಿಯೋ ಮಾಡುತ್ತಿರುವಂತೆ ಆ ಆಕೃತಿ ಸ್ವಲ್ಪ ಹೊತ್ತು ನಿಂತುಕೊಂಡು ಹಿಂದಿರುಗಿ ನೋಡಿ ಮತ್ತೆ ಮುಂದೆ ಹೋಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ನೂರಾರು ಮಂದಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಏನು? ಎಂಬ ಪ್ರಶ್ನೆಯೇ ಕೊನೆಗೆ ಹಲವರು ಇದನ್ನು ಶೇರ್ ಮಾಡಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು

Viral Video: ಪುಟ್ಟ ಮಕ್ಕಳಿಗೂ ಎಷ್ಟು ಕೆಲಸ? 6 ವರ್ಷದ ಬಾಲಕಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ದೂರು; ವಿಡಿಯೋ ನೋಡಿ

Published On - 5:50 pm, Mon, 31 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್