Viral Video: ಪುಟ್ಟ ಮಕ್ಕಳಿಗೂ ಎಷ್ಟು ಕೆಲಸ? 6 ವರ್ಷದ ಬಾಲಕಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ದೂರು; ವಿಡಿಯೋ ನೋಡಿ
ಟ್ವಿಟರ್ನಲ್ಲಿ ಶನಿವಾರ ಪೋಸ್ಟ್ ಆಗಿದ್ದ ಈ ವಿಡಿಯೋ ಕ್ಲಿಪ್ ಈಗ ಸುಮಾರು 57,000ದಷ್ಟು ವೀವ್ಸ್ ಪಡೆದುಕೊಂಡಿದೆ. 5 ಸಾವಿರ ಲೈಕ್ಸ್ಗಳನ್ನು ಕೂಡ ಪಡೆದುಕೊಂಡಿದೆ. ಜೊತೆಗೆ, 1,200 ಜನರು ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ.
ದೆಹಲಿ: ಕೊರೊನಾ ಸೋಂಕಿನ ಎರಡನೇ ಅಲೆಯ ಕಾರಣದಿಂದ ಭಾರತದಲ್ಲಿ ಜನರು ಮತ್ತೆ ಮನೆಯೊಳಗೆಯೇ ಉಳಿಯುವಂತೆ ಆಗಿದೆ. ಜಗತ್ತಿನಾದ್ಯಂತ ಹಲವು ಕಡೆ ಇನ್ನೂ ಕೂಡ ಕಠಿಣ ಮಾರ್ಗಸೂಚಿಗಳು ಜಾರಿಯಲ್ಲಿದೆ. ಇದರಿಂದಾಗಿ ಬಹುತೇಕ ಎಲ್ಲರ ಜೀವನದಲ್ಲಿ ಕೂಡ ವ್ಯತ್ಯಾಸ ಉಂಟಾಗಿದೆ. ದಿನನಿತ್ಯದ ಬದುಕು, ಕೆಲಸ ಇನ್ನಿತರ ವಿಚಾರದಲ್ಲಿ ಬದಲಾವಣೆಗಳು ಉಂಟಾಗಿದೆ. ಇದು ಮಕ್ಕಳ ಬದುಕಿನ ಹೊರತಾಗಿಲ್ಲ. ಸಣ್ಣ ಮಕ್ಕಳ ಜೀವನವೂ ಏರುಪೇರಾಗಿದೆ. ಶೈಕ್ಷಣಿಕ ವಿಚಾರ, ಕಲಿಕೆ, ಸಾಮಾಜಿಕ ಒಡನಾಟ ಇತ್ಯಾದಿಗಳ ಕ್ರಮ ಭಿನ್ನವಾಗಿದೆ.
ಹಿರಿಯ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಪಡೆಯವುದು ಒಂದು ಕಡೆಯಾದರೆ, ಸಣ್ಣ ತರಗತಿಯ ಮಕ್ಕಳು ಸಹ ಆನ್ಲೈನ್ ತರಗತಿ ಎಂದು ಸುಸ್ತಾಗುತ್ತಿದ್ದಾರೆ. ಈ ಬಗ್ಗೆ 6 ವರ್ಷದ ಪುಟ್ಟ ಬಾಲಕಿ ಪ್ರಶ್ನೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗಿದೆ. ಜಮ್ಮು ಕಾಶ್ಮೀರದ ಈ ಬಾಲಕಿ, ಆನ್ಲೈನ್ ಕ್ಲಾಸ್ ಕ್ರಮದ ಬಗ್ಗೆ ಸಹಮತ ಹೊಂದಿಲ್ಲ. ತನ್ನದೇ ಮುಗ್ಧ ಶೈಲಿಯಲ್ಲಿ ಹುಡುಗಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನೇ ಪ್ರಶ್ನಿಸಿದ್ದಾಳೆ.
ದೀರ್ಘ ಅವಧಿಯ ಆನ್ಲೈನ್ ಕ್ಲಾಸ್ಗಳು ಮತ್ತು ತುಂಬಾ ಶಾಲೆಯ ಕೆಲಸದ ಬಗ್ಗೆ 6 ವರ್ಷದ ಕಾಶ್ಮೀರಿ ಹುಡುಗಿ ದೂರು ನೀಡಿದ್ದಾಳೆ ಎಂದು ಬರೆದು ಔರಂಗಜೇಬ್ ನಕ್ಶ್ಬಂದಿ ಎಂಬ ಪತ್ರಕರ್ತರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. 45 ಸರಕರಂಡ್ಗಳ ಈ ವಿಡಿಯೋ ಕ್ಲಿಪ್ನಲ್ಲಿ ಬೆಳಗ್ಗೆ 10 ಗಂಟೆಗೆ ಕ್ಲಾಸ್ ಶುರುವಾಗಿ ಮಧ್ಯಾಹ್ನ 2 ಗಂಟೆಯವರೆಗೂ ಇರುತ್ತದೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ.
ಇಂಗ್ಲಿಷ್, ಗಣಿತ, ಉರ್ದು ಹಾಗೂ ಇವಿಎಸ್ ತರಗತಿಗಳು ಇದೆ. ಜೊತೆಗೆ ಕಂಪ್ಯೂಟರ್ ತರಗತಿಯೂ ಇರುತ್ತದೆ ಎಂದು ಬಾಲಕಿ ಹೇಳಿಕೊಂಡಿದ್ದಾಳೆ. ಮಕ್ಕಳಿಗೆ ಅತಿಯಾದ ಕೆಲಸ ಇರುತ್ತದೆ. ಸಣ್ಣ ಮಕ್ಕಳು ಇಷ್ಟೊಂದು ಕೆಲಸದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ಏನು ಮಾಡೋದು ಮೋದಿ ಸಾಬ್ ಎಂದು ಕೇಳಿದ್ದಾಳೆ.
A six-year-old Kashmiri girl’s complaint to @PMOIndia @narendramodi regarding long hours of online classes and too much of school work. pic.twitter.com/S7P64ubc9H
— Aurangzeb Naqshbandi (@naqshzeb) May 29, 2021
ಟ್ವಿಟರ್ನಲ್ಲಿ ಶನಿವಾರ ಪೋಸ್ಟ್ ಆಗಿದ್ದ ಈ ವಿಡಿಯೋ ಕ್ಲಿಪ್ ಈಗ ಸುಮಾರು 57,000ದಷ್ಟು ವೀವ್ಸ್ ಪಡೆದುಕೊಂಡಿದೆ. 5 ಸಾವಿರ ಲೈಕ್ಸ್ಗಳನ್ನು ಕೂಡ ಪಡೆದುಕೊಂಡಿದೆ. ಜೊತೆಗೆ, 1,200 ಜನರು ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ.
A six-year-old Kashmiri girl’s complaint to @PMOIndia @narendramodi regarding long hours of online classes and too much of school work. pic.twitter.com/S7P64ubc9H
— Aurangzeb Naqshbandi (@naqshzeb) May 29, 2021
ಒಬ್ಬರು ಈ ಹುಡುಗಿಯ ಕ್ಯೂಟ್ನೆಸ್ ಲೆವೆಲ್ ಹಿಮಾಲಯಕ್ಕಿಂತಲೂ ಹೆಚ್ಚಾಗಿದೆ ಎಂದು ಬರೆದುಕೊಂಡಿದ್ಧಾರೆ.
A six-year-old Kashmiri girl’s complaint to @PMOIndia @narendramodi regarding long hours of online classes and too much of school work. pic.twitter.com/S7P64ubc9H
— Aurangzeb Naqshbandi (@naqshzeb) May 29, 2021
ಇದನ್ನೂ ಓದಿ: Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು
ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು
Published On - 4:51 pm, Mon, 31 May 21