Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು

ಸಣ್ಣ ವಯಸ್ಸಿನಲ್ಲಿ ಮಾತ್ರವಲ್ಲ, ದೊಡ್ಡ ವಯಸ್ಸಿನ ಹಿರಿಯರ ಜೀವನದಲ್ಲಿ ಕೂಡ ಆಟದ ನಡುವೆ ಇಂಥ ಜಗಳ ಆಗುತ್ತದೆ. ವಯಸ್ಸಾದಂತೆ ಮನಸ್ಸು ಮತ್ತೆ ಮಕ್ಕಳಂತೆ ಆಗುತ್ತದೆ ಎಂದು ಹೇಳುತ್ತಾರಲ್ಲ ಹಾಗೆ.

Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು
ಕೇರಂ ಆಟ
Follow us
TV9 Web
| Updated By: ganapathi bhat

Updated on:Aug 14, 2021 | 1:04 PM

ಒಳಾಂಗಣ ಆಟಗಳನ್ನು ನಾವೆಲ್ಲರೂ ಆಡಿಯೇ ಇರುತ್ತೇವೆ. ಕೇರಂ , ಚೆಸ್, ಲೂಡೋ, ಹಾವು ಏಣಿ ಆಟ ಹೀಗೆ ವಿವಿಧ ಆಟಗಳನ್ನು ನಾವು ಆಡಿರುತ್ತೇವೆ. ಹೀಗೆ ಆಟದ ಸಮಯದಲ್ಲಿ ಸಣ್ಣಪುಟ್ಟ ಜಗಳಗಳಾಗುವುದು ಕೂಡ ಸಾಮಾನ್ಯ. ಮಕ್ಕಳು ಮಕ್ಕಳ ನಡುವೆ ಕೆಲವೊಮ್ಮೆ ಆಟದ ಜಗಳ ಜೋರಾಗಿ ಹೊಡೆದಾಟ ನಡೆಯುವುದು ಕೂಡ ಇದೆ. ಅಂಥಾ ಸಂದರ್ಭಗಳನ್ನು ನಾವು ಗಮನಿಸಿರುತ್ತೇವೆ. ಆದರೆ, ಸಣ್ಣ ಮಕ್ಕಳ ಹೊಡೆದಾಟವಲ್ಲ, ಮುದುಕರ ಹೊಡೆದಾಟವನ್ನು ನೀವು ಎಲ್ಲಾದರೂ ನೋಡಿದ್ದೀರಾ? ಆಟದ ವಿಷಯಕ್ಕೆ ಮುದುಕರು ಜಗಳಾಡಿದ್ದನ್ನು ಕಂಡಿದ್ದೀರಾ?

ಸಣ್ಣ ವಯಸ್ಸಿನಲ್ಲಿ ಮಾತ್ರವಲ್ಲ, ದೊಡ್ಡ ವಯಸ್ಸಿನ ಹಿರಿಯರ ಜೀವನದಲ್ಲಿ ಕೂಡ ಆಟದ ನಡುವೆ ಇಂಥ ಜಗಳ ಆಗುತ್ತದೆ. ವಯಸ್ಸಾದಂತೆ ಮನಸ್ಸು ಮತ್ತೆ ಮಕ್ಕಳಂತೆ ಆಗುತ್ತದೆ ಎಂದು ಹೇಳುತ್ತಾರಲ್ಲ ಹಾಗೆ. ವಯಸ್ಕರು ಇಬ್ಬರು ಕೇರಂ ಆಟವಾಡುತ್ತಾ, ಜಗಳ ಆಡಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ನೀವು ಹಿರಿಯರ ಮುಗ್ಧತೆ ಕಂಡು ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ.

ಹಿರಿಯರ ಕೇರಂ ಆಟವನ್ನು ನೆಟ್ಟಿಗರು ಕಣ್ಣು ಅರಳಿಸಿ ನೋಡಿದ್ದಾರೆ. ಇಬ್ಬರು ಹಿರಿಯರು ಇಲ್ಲಿ ಆಟವಾಡುತ್ತಾ ವಾದಕ್ಕೆ ಇಳಿದುಬಿಡುತ್ತಾರೆ. ಯಾವುದೋ ವಿಚಾರವಾಗಿ ಸಣ್ಣದಾಗಿ ಜಗಳ ಆರಂಭವಾಗುತ್ತದೆ. ಅದೇ ಜಗಳ ಮುಂದುವರಿದು ಒಬ್ಬ ಹಿರಿಯರು ಆಟವನ್ನು ನಿಲ್ಲಿಸಿಬಿಡುತ್ತಾರೆ. ಆಟಕ್ಕೆ ಅಡ್ಡಿ ಉಂಟುಮಾಡುತ್ತಾರೆ. ಕೇರಂ ಕಾಯಿನ್​ಗಳನ್ನು ಚೆಲ್ಲಾಪಿಲ್ಲಿ ಮಾಡಿಬಿಡುತ್ತಾರೆ.

ಆಷ್ಟೇ ಅಲ್ಲದೆ ಒಬ್ಬ ಹಿರಿಯರು, ಮತ್ತೊಬ್ಬರ ಮೇಲೆ ಕೈಮಾಡಲು ಮುಂದಾಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ. ಜನರು ವಿಡಿಯೋ ನೋಡಿ ತಮ್ಮ ಬಾಲ್ಯವನ್ನು, ಮನೆಯ ಹಿರಿಯರನ್ನು ಒಟ್ಟಿಗೆ ನೆನೆದುಕೊಂಡು ನಕ್ಕುನಕ್ಕು ಸುಸ್ತಾಗಿದ್ದಾರೆ. ಹಿರಿಯರ ವಯಸ್ಸು ದೊಡ್ಡದಾಗುತ್ತಿದಂತೆ ಅವರ ಮನಸ್ಸು ಮಕ್ಕಳಂತೆ ಆಗುತ್ತದೆ ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಹಲವರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಕೆ. ಶರ್ಮಾ ಎಂಬವರು ಹಂಚಿಕೊಂಡಿದ್ದಾರೆ. ಅವರು ದೆಹಲಿ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಇದನ್ನೂ ಓದಿ: ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​

World No Tobacco Day 2021: ಸಿಗರೇಟ್ ಸೇವನೆ ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಮಾರ್ಗಗಳನ್ನು ಅನುಸರಿಸಿ

Published On - 9:25 pm, Sun, 30 May 21