ಕ್ಷೀರಪಥದಲ್ಲಿ ಬಣ್ಣದೋಕುಳಿ; ನಾಸಾ ಬಿಡುಗಡೆಗೊಳಿಸಿತು ವಿಸ್ಮಯಕಾರಿ ಚಿತ್ರ

ಮೊನ್ನೆ ಮೊನ್ನೆಯಷ್ಟೇ ನಾಸಾ ಬಿಡುಗಡೆಗೊಳಿಸಿದ ಅತ್ಯದ್ಭುತ ಚಿತ್ರವೊಂದು ಎಲ್ಲರನ್ನೂ ಆಕರ್ಷಿಸುತ್ತಿದೆ. ನಮ್ಮದೇ ಗ್ಯಾಲಾಕ್ಸಿ ಕ್ಷೀರಪಥದ ವರ್ಣಮಯ ಚಿತ್ರವನ್ನು ನಾಸಾ ಪ್ರಕಟಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಸದ್ದು ಮಾಡುತ್ತಿದೆ.

ಕ್ಷೀರಪಥದಲ್ಲಿ ಬಣ್ಣದೋಕುಳಿ; ನಾಸಾ ಬಿಡುಗಡೆಗೊಳಿಸಿತು ವಿಸ್ಮಯಕಾರಿ ಚಿತ್ರ
ನಾಸಾ ಬಿಡುಗಡೆಗೊಳಿಸಿದ ಚಿತ್ರ
Follow us
Skanda
| Updated By: Digi Tech Desk

Updated on:May 31, 2021 | 12:10 PM

ಬಾಹ್ಯಾಕಾಶ ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ಅಚ್ಚರಿಗಳಿಗೆ ಮಿತಿಯಿಲ್ಲ. ಯಾವುದೋ ಒಂದು ವಿಸ್ಮಯಕ್ಕೆ ನಾವು ಬೆರಗುಗೊಂಡು ಕಣ್ಣರಳಿಸುವಷ್ಟರಲ್ಲಿ ಇನ್ನೊಂದಷ್ಟು ಹೊಸ ವಿಷಯಗಳು ನಮ್ಮ ಗಮನ ಸೆಳೆಯಲು ಸಜ್ಜಾಗಿ ಕುಳಿತಿರುತ್ತವೆ. ಮೊನ್ನೆ ಮೊನ್ನೆಯಷ್ಟೇ ನಾಸಾ ಬಿಡುಗಡೆಗೊಳಿಸಿದ ಅತ್ಯದ್ಭುತ ಚಿತ್ರವೊಂದು ಎಲ್ಲರನ್ನೂ ಆಕರ್ಷಿಸುತ್ತಿದೆ. ನಮ್ಮದೇ ಗ್ಯಾಲಾಕ್ಸಿ ಕ್ಷೀರಪಥದ ವರ್ಣಮಯ ಚಿತ್ರವನ್ನು ನಾಸಾ ಪ್ರಕಟಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಸದ್ದು ಮಾಡುತ್ತಿದೆ.

ಸೌರಮಂಡಲವನ್ನೊಳಗೊಂಡ ನಮ್ಮದೇ ಗ್ಯಾಲಾಕ್ಸಿ ಕ್ಷೀರಪಥ ಊಹೆಗೂ ನಿಲುಕದಷ್ಟು ವಿಸ್ತಾರವಾಗಿದೆ. ಇದರ ಕುರಿತಾಗಿ ಸಾಕಷ್ಟು ವರ್ಷಗಳಿಂದ ನಿರಂತರ ಅಧ್ಯಯನ ನಡೆಯುತ್ತಿದೆಯಾದರೂ ಇಂದಿಗೂ ಅಚ್ಚರಿಗಳಿಗೇನು ಕೊರತೆಯಾಗಿಲ್ಲ. ಅಂದಹಾಗೆ ಈ ಚಿತ್ರವು ಎರಡು ದಶಕಗಳಿಂದ ಸುತ್ತು ಹೊಡೆಯುತ್ತಿರುವ ಚಂದ್ರ ಎಕ್ಸ್-ರೇ ಅಬ್ಸರ್ವೇಟರಿಯಿಂದ ತೆಗೆದಿರುವುದಾಗಿದ್ದು, ಇದು ಸುಮಾರು 370 ವಿವಿಧ ಹಂತಗಳ ಚಿತ್ರವಾಗಿದೆ ಎಂದು ನಾಸಾ ತಿಳಿಸಿದೆ.

ಈ ಚಿತ್ರವು ಕ್ಷೀರಪಥ ಅಥವಾ ಮಿಲ್ಕ್ ವೇ ಮಧ್ಯಭಾಗದಲ್ಲಿನ ಅಸಂಖ್ಯಾತ ಕಪ್ಪು ರಂಧ್ರ ಮತ್ತು ನಕ್ಷತ್ರಗಳನ್ನು ಒಳಗೊಂಡಿದ್ದು ಇದನ್ನು ಇನ್ನಷ್ಟು ಸುಂದರವಾಗಿ ಕಾಣಿಸುವಲ್ಲಿ ದಕ್ಷಿಣ ಆಫ್ರಿಕಾದ ರೇಡಿಯೋ ಟೆಲಿಸ್ಕೋಪ್ ಕೂಡಾ ಸಹಕರಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಖಗೋಳ ಶಾಸ್ತ್ರಜ್ಞ ಡೇನಿಯಲ್ ವ್ಯಾಂಗ್ ಕಳೆದೊಂದು ವರ್ಷದಿಂದ ಕೊರೊನಾ ಕಾರಣ ಮನೆಯಲ್ಲೇ ಕುಳಿತು ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದೆ. ಅಂತಿಮವಾಗಿ ಈ ಸುಂದರ ಚಿತ್ರ ನೋಡಲು ಸಿಕ್ಕಿದೆ ಎಂದಿದ್ದಾರೆ.

ಈ ಚಿತ್ರದಲ್ಲಿ ಕಾಣುತ್ತಿರುವುದು ಕ್ಷೀರಪಥದಲ್ಲಿನ ಕ್ಷಾತ್ರ ಗುಣ. ಅಲ್ಲಿನ ವಾತಾವರಣದಲ್ಲಿ ಹೇಗೆ ಬದಲಾವಣೆಗಳು ಆಗುತ್ತಿರುತ್ತವೆ. ಏನೆಲ್ಲಾ ವಿಸ್ಮಯ ಘಟಿಸುತ್ತದೆ ಎಂಬುದಕ್ಕೆ ಈ ಚಿತ್ರ ಸಾಕ್ಷಿ ಎಂದು ಹೇಳಿದ್ದಾರೆ. ನಾಸಾ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರವನ್ನು ಖಗೋಳ ಶಾಸ್ತ್ರ ಪ್ರಿಯರು ಹಾಗೂ ಜನ ಸಾಮಾನ್ಯರು ಅಚ್ಚರಿಯಿಂದ ಹಂಚಿಕೊಂಡಿದ್ದು ಎಲ್ಲೆಡೆ ಇದು ವೈರಲ್ ಆಗಿದೆ.

ಇದನ್ನೂ ಓದಿ: ನಾಸಾದ ಹಬಲ್ ಹಂಚಿಕೊಂಡ ಆಕರ್ಷಕ ಗೆಲಾಕ್ಸಿ ಫೋಟೋಗಳು ವಿಶ್ವದ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದೆ

ನಾಸಾ ಬಿಡುಗಡೆಗೊಳಿಸಿದೆ ಆಕಾಶಗಂಗೆಯ ಅಮೋಘ ಚಿತ್ರ; ನೆಟ್ಟಿಗರು ಫುಲ್ ಫಿದಾ

Published On - 11:39 am, Mon, 31 May 21