AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸಾ ಬಿಡುಗಡೆಗೊಳಿಸಿದೆ ಆಕಾಶಗಂಗೆಯ ಅಮೋಘ ಚಿತ್ರ; ನೆಟ್ಟಿಗರು ಫುಲ್ ಫಿದಾ

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲಾದ ಮಿಲ್ಕಿ ವೇ ಗ್ಯಾಲಕ್ಸಿಯ ಚಿತ್ರವನ್ನು ಹಂಚಿಕೊಂಡಿದ್ದೇವೆ. ಈ ಚಿತ್ರವೇ ಎಷ್ಟೊಂದು ವಿಷಯಗಳನ್ನು ಬಣ್ಣಿಸುತ್ತದೆ. ನಾವು ವಾಸಿಸುವ ಸ್ಥಳವೂ ಈ ಮಿಲ್ಕಿ ವೇ ಗೆಲಾಕ್ಸಿಯಲ್ಲೇ ಇದೆ..’ ಎಂದು ನಾಸಾ ಚಿಕ್ಕದೊಂದು ಅಡಿಟಿಪ್ಪಣಿ ಕೊಟ್ಟಿದೆ.

ನಾಸಾ ಬಿಡುಗಡೆಗೊಳಿಸಿದೆ ಆಕಾಶಗಂಗೆಯ ಅಮೋಘ ಚಿತ್ರ; ನೆಟ್ಟಿಗರು ಫುಲ್ ಫಿದಾ
ನಾವಿರುವ ಸ್ಥಳವನ್ನು ಪತ್ತೆಹಚ್ಚಬಹುದೇ?
Follow us
guruganesh bhat
| Updated By: Skanda

Updated on: Apr 16, 2021 | 9:25 AM

ನಾಸಾ ಒಂದು ಕುತೂಹಲಕಾರಿ ಚಿತ್ರವನ್ನು ಈಗಷ್ಟೇ ಬಿಡುಗಡೆಗೊಳಿಸಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲಾದ ಮಿಲ್ಕಿ ವೇ ಗೆಲಾಕ್ಸಿಯ ಚಿತ್ರವನ್ನು ನಾಸಾ ತನ್ನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಈ ಚಿತ್ರ ಲಕ್ಷಾಂತರ ಜನರ ಗಮನವನ್ನು ಸೆಳೆದಿದ್ದು, ಬಿಡುಗಡೆಗೊಂಡ ಒಂದು ಗಂಟೆಯ ಒಳಗೆ 9 ಲಕ್ಷ ಲೈಕ್ಸ್ ಮತ್ತು 300ಕ್ಕೂ ಹೆಚ್ಚಿನ ಕಮೆಂಟ್​ಗಳನ್ನು ಪಡೆದುಕೊಂಡಿದೆ.

ನಾವು ಹಂಚಿಕೊಳ್ಳುತ್ತಿರುವ ಚಿತ್ರಕ್ಕೆ ಯಾವುದೇ ಪರಿಚಯ ಬೇಕೆಂದು ಅನಿಸುವುದಿಲ್ಲ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲಾದ ಮಿಲ್ಕಿ ವೇ ಗ್ಯಾಲಕ್ಸಿಯ ಚಿತ್ರವನ್ನು ಹಂಚಿಕೊಂಡಿದ್ದೇವೆ. ಈ ಚಿತ್ರವೇ ಎಷ್ಟೊಂದು ವಿಷಯಗಳನ್ನು ಬಣ್ಣಿಸುತ್ತದೆ. ನಾವು ವಾಸಿಸುವ ಸ್ಥಳವೂ ಈ ಮಿಲ್ಕಿ ವೇ ಗೆಲಾಕ್ಸಿಯಲ್ಲೇ ಇದೆ.. ಎಂದು ನಾಸಾ ಚಿಕ್ಕದೊಂದು ಅಡಿಟಿಪ್ಪಣಿ ಕೊಟ್ಟಿದೆ.

ಮಿಲ್ಕಿ ವೇಗೆ ಕನ್ನಡದಲ್ಲಿ ಕ್ಷೀರಪಥ ಎಂದು ಕರೆಯಲಾಗುತ್ತದೆ. ಅಲ್ಲದೇ ಆಕಾಶಗಂಗೆ ಎಂದೂ ಇದನ್ನು ಕರೆಯಲಾಗುತ್ತದೆ. ಆಕಾಶದಿಂದ ಭೂಮಿಗೆ ಗಂಗಾನದಿ ಅಥವಾ ಗಂಗಾಮಾತೆ ಇಳಿದ ರೀತಿ ಇದೆಂದು ಪ್ರಾಚೀನ ಭಾರತೀಯರು ಭಾವಿಸಿದ್ದರು. ಪೌರಾಣಿಕ ಕಥೆಗಳಲ್ಲಿ ಗಂಗೆಯು ವಿಷ್ಣುಸ್ವರೂಪ ತ್ರಿವಿಕ್ರಮನ ಪಾದದಲ್ಲಿ ಹುಟ್ಟಿ ಸ್ವರ್ಗದಲ್ಲಿ ಹರಿಯುತ್ತಾಳೆ. ನಂತರ ಬ್ರಹ್ಮನ ಕಲಶ ಸೇರಿ, ಕೈಲಾಸ ವಾಸಿಯಾದ ಶಿವನ ಜಟೆಯಲ್ಲಿ ವಾಸವಾಗಿದ್ದಳು ಗಂಗೆ. ನಂತರ ಭಗೀರಥನ ಪ್ರಯತ್ನದಿಂದ ಭೂಮಿಗೆ ಹರಿಯುತ್ತಾಳೆ. ಹಾಗಾಗಿ ಭಾರತದ ಪ್ರಾಚೀನರು ಈ ನಕ್ಷತ್ರಲೋಕದ ಬೆಳಕಿನ ಪಟ್ಟಿಯನ್ನು ಆಕಾಶಗಂಗೆ ಎಂದು ಕರೆದರು. ಈ ಎಲ್ಲ ಕಾರಣಗಳಿಂದ ಭಾರತದಲ್ಲಿ ಮಿಲ್ಕಿ ವೇಯನ್ನು ಆಕಾಶಗಂಗೆ ಎಂದು ಕರೆಯಲಾಗುತ್ತದೆ. ಇದೀಗ ನಾಸಾ ಮಿಲ್ಕಿ ವೇಯ ಅದ್ಭುತ ಚಿತ್ರವೊಂದನ್ನು ಬಿಡುಗಡೆಗೊಳಿಸಿದೆ.

ಪರ್ಸೆವೆರೆನ್ಸ್ ರೋವರ್ ಸಾಧನೆಯನ್ನೂ ಮಾಡಿದೆ ನಾಸಾ

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್​ನ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ಮಂಗಳ ಗ್ರಹವನ್ನು ಸ್ಪರ್ಶಿಸಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಜೆಡ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

ಕಳೆದ ವರ್ಷ ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್​ನಿಂದ ಈ ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತ್ತು.

ಇದನ್ನೂ ಓದಿ: Swati Mohan ವ್ಯಕ್ತಿ ವ್ಯಕ್ತಿತ್ವ | ಮಂಗಳನ ಅಂಗಳದಲ್ಲಿ ಜೀವ ಕುರುಹು ಹುಡುಕುವ ನಾಸಾ ತಂಡದಲ್ಲಿ ಭಾರತ ಸಂಜಾತೆ ಡಾ. ಸ್ವಾತಿ ಮೋಹನ್

Photo Gallery | Perseverance Rover: ಮಂಗಳನ ಅಂಗಳದಲ್ಲಿ ಹೆಜ್ಜೆಯೂರಿದ ನಾಸಾ ನೌಕೆ; ತಜ್ಞರ ತಂಡದಲ್ಲಿ ಭಾರತೀಯ ಮೂಲದ ಮಹಿಳೆ!

(NASA released milky way galaxy images taken from International space station)