254 ಮಕ್ಕಳನ್ನು ಬಲಿಪಡೆದಿದ್ದ ಹಡಗು ದುರಂತಕ್ಕೆ 7 ವರ್ಷ; 2014ರಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡರೇ ಭಯ ಹುಟ್ಟುತ್ತದೆ..

ಅಂದು ಹಡಗು ಮುಳುಗಿದಾಗ ಒಟ್ಟು 304 ಮಂದಿ ಸಾವನ್ನಪ್ಪಿದ್ದಾರೆ. 172 ಜನರ ಜೀವ ಉಳಿದಿದೆ. ಆದರೆ ಹೀಗೆ ಮೃತಪಟ್ಟ 304 ಜನರಲ್ಲಿ 254 ಮಕ್ಕಳೇ ಆಗಿದ್ದು ಬಹುದೊಡ್ಡ ದುರಂತ ಎಂದೇ ಪರಿಗಣಿಸಲ್ಪಟ್ಟಿದೆ.

254 ಮಕ್ಕಳನ್ನು ಬಲಿಪಡೆದಿದ್ದ ಹಡಗು ದುರಂತಕ್ಕೆ 7 ವರ್ಷ; 2014ರಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡರೇ ಭಯ ಹುಟ್ಟುತ್ತದೆ..
ಹಡಗು ಮುಳುಗಿರುವ ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Apr 16, 2021 | 4:15 PM

ಸಮುದ್ರ, ನದಿ ಮಾರ್ಗದ ಪ್ರಯಾಣ ಖುಷಿಕೊಡುವುದು ಸತ್ಯ. ಹಾಗೇ, ಅಪಾಯವೂ ಇದೆ. ಬೋಟ್​, ಹಡಗುಗಳ ಡಿಕ್ಕಿಯಿಂದ, ಮುಳುಗುವಿಕೆಯಿಂದ ನೂರಾರು ಜನರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಅಂಥ ಒಂದು ಭೀಕರ ಅಪಘಾತಕ್ಕೆ ಸಾಕ್ಷಿಯಾಗಿತ್ತು ದಕ್ಷಿಣ ಕೊರಿಯಾ. 2014 ಏಪ್ರಿಲ್​ 16ರಂದು ನಡೆದಿದ್ದ ಹಡಗು ಅಪಘಾತದಲ್ಲಿ 300ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು. ಅದರಲ್ಲಿ ಬಹುಪಾಲು ಜನರು ಮಕ್ಕಳೇ ಆಗಿದ್ದರು. ಅಂದಿನ ದುರಂತದ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಯಿತಾದರೂ ಅಪಘಾತಕ್ಕೆ ನಿಜವಾದ ಕಾರಣ ಏನೆಂಬುದು ಕೊನೆಗೂ ಗೊತ್ತಾಗಲಿಲ್ಲ.

2014ರಲ್ಲಿ ಏನಾಗಿತ್ತು? ಅದು 2014ನೇ ಇಸ್ವಿ, ಏಪ್ರಿಲ್ 16. ಈ ಎಮ್​.ವಿ.ಸಿವೋಲ್​ ಹಡಗು ಇಂಚಿಯಾನ್​ದಿಂದ ಜೆ-ಜು ಐಸ್​ಲ್ಯಾಂಡ್​ಗೆ ತೆರಳುತ್ತಿತ್ತು. ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಮೆಂಗ್ಗೋಲ್ ಕಣಿವೆಯನ್ನು ಪ್ರವೇಶ ಮಾಡಿತ್ತು. ಆದರೆ 8.40ರಹೊತ್ತಿಗೆ ಅದೇನಾಯಿತೋ ಗೊತ್ತಿಲ್ಲ, ಹಡಗು ಒಮ್ಮೆಲೇ ತಿರುವು ತೆಗೆದುಕೊಂಡಿತು. ಹೀಗೆ ಆಕಸ್ಮಿಕವಾಗಿ ಒಮ್ಮೆಲೇ ತಿರುಗಿದ್ದೇ ದೊಡ್ಡ ದುರಂತಕ್ಕೆ ಕಾರಣವಾಯಿತು.

ಈ ಸಮಯದಲ್ಲಿ ಹಡಗಿನ ಕ್ಯಾಪ್ಟನ್​ ತನ್ನ ಖಾಸಗಿ ಕ್ಯಾಬಿನ್​ನಲ್ಲಿ ಇದ್ದ. ಆದರೆ ಅವಘಡ ಆಗಿದ್ದು ಗೊತ್ತಾಗುತ್ತಿದ್ದಂತೆ ತಮ್ಮ ಸಹಚರರು ಮತ್ತು ಚಾಲಕನೊಟ್ಟಿಗೆ ಅಲರ್ಟ್ ಆದರು. ಮುಖ್ಯ ಇಂಜಿನಿಯರ್​ ಕೂಡ ಕೂಡಲೇ ಹಡಗಿನ ಇಂಜಿನ್​ ಬಂದ್​ ಮಾಡಿದ್ದರು. ಆದರೆ ಇಂಜಿನ್ ಆಫ್​ ಮಾಡಿದ್ದೇ ದೊಡ್ಡ ಸಮಸ್ಯೆಯಾಗಿತ್ತು. ಸುಮಾರು 476 ಜನರಿದ್ದ ಈ ಹಡಗು ಒಂದು ಬದಿಗೆ ಮುಳುಗಲು ಶುರುವಾಗಿತ್ತು. ಆಗಲೇ ಅಲ್ಲೆಲ್ಲ ಕೋಲಾಹಲ ಸೃಷ್ಟಿಯಾಗಿತ್ತು. ಕ್ಯಾಪ್ಟನ್​ ಮತ್ತು ಹಡಗಿನ ಇಂಜಿನಿಯರಿಂಗ್​ ವಿಭಾಗದ ಸಿಬ್ಬಂದಿ ಜನರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರೂ, ಪರಿಸ್ಥಿತಿ ಕೈಮೀರಿತ್ತು. ಬೆಳಗ್ಗೆ 9.30ರ ಹೊತ್ತಿಗೆ ಹಡಗು ಸಂಪೂರ್ಣವಾಗಿ ಮುಳುಗಿತ್ತು.

254 ಮಕ್ಕಳು ಮೃತರಾಗಿದ್ದರು ಅಂದು ಹಡಗು ಮುಳುಗಿದಾಗ ಒಟ್ಟು 304 ಮಂದಿ ಸಾವನ್ನಪ್ಪಿದ್ದಾರೆ. 172 ಜನರ ಜೀವ ಉಳಿದಿದೆ. ಆದರೆ ಹೀಗೆ ಮೃತಪಟ್ಟ 304 ಜನರಲ್ಲಿ 254 ಮಕ್ಕಳೇ ಆಗಿದ್ದು ಬಹುದೊಡ್ಡ ದುರಂತ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ರಕ್ಷಣಾ ಕಾರ್ಯಾಚರಣೆ ಸುಮಾರು 3 ದಿನ ನಡೆದಿದೆ. ಬದುಕುಳಿದ 172 ಜನರಲ್ಲಿ ಬಹುತೇಕರನ್ನು ಮೀನುಗಾರಿಕಾ ಬೋಟ್​​ಗಳ ಮೂಲಕವೇ ರಕ್ಷಿಸಲಾಗಿತ್ತು. ರಕ್ಷಣಾ ತಂಡಗಳು ಅತಿ ವೇಗವಾಗಿ ಕಾರ್ಯಾಚರಣೆ ನಡೆಸಿದರೂ, 476 ಜನರಲ್ಲಿ, 172 ಮಂದಿಯನ್ನಷ್ಟೇ ಬದುಕಿಸಲು ಸಾಧ್ಯವಾಗಿತ್ತು.

ಹಡಗು ಮುಳುಗಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಿದರೂ ಅದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಹಡಗನ್ನು ಏಕಾಏಕಿ ತಿರುಗಿಸಿದ್ದು ಸರಿಯಲ್ಲ ಎಂದೇ ಹೇಳಲಾಗಿದೆ. ಹೀಗೆ ಒಮ್ಮೆಲೇ ತಿರುವು ಪಡೆದಿದ್ದರಿಂದ ಅದರ ದಿಕ್ಕು ಬದಲಾಗಿ, ಮುಳುಗಿದೆ ಎಂದು ತನಿಖಾ ವರದಿ ತಿಳಿಸಿದೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ

ಹಾವೇರಿಯಲ್ಲಿ ಅಂಬರ ಗುಬ್ಬಿಗಳ ಕಲರವ; ನದಿಯ ದಡದಲ್ಲಿ ನಿರ್ಮಾಣವಾಗಿದೆ ಹಕ್ಕಿಗಳ ಸುಂದರ ಗೂಡು

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?