Photo Gallery | Perseverance Rover: ಮಂಗಳನ ಅಂಗಳದಲ್ಲಿ ಹೆಜ್ಜೆಯೂರಿದ ನಾಸಾ ನೌಕೆ; ತಜ್ಞರ ತಂಡದಲ್ಲಿ ಭಾರತೀಯ ಮೂಲದ ಮಹಿಳೆ!

Perseverance Rover: ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್​ನಿಂದ ಈ ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತ್ತು.

  • TV9 Web Team
  • Published On - 13:30 PM, 19 Feb 2021
1/5
NASA CELEBRATION
ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.35ಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್​ನ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ. ಈ ಸಾಧನೆ ನೆರವೇರುತ್ತಲೇ ನಾಸಾದ ತಂತ್ರಜ್ಞರು ಸಂಭ್ರಮ ಹಂಚಿಕೊಂಡರು.
2/5
JOE BIDEN NASA MARS
ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ಕೂಡ ನಾಸಾ ಹೊಂದಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಾಸಾದ ಸಾಧನೆಯ ಕ್ಷಣಗಳನ್ನು ವೀಕ್ಷಿಸಿದರು.
3/5
Kannada News top 9 major developments of 19th February
ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಡಾ. ಸ್ವಾತಿ ಮೋಹನ್.
swati mohan indian american scientist who worked in nasa for mars perseverance rover
4/5
NASA ON MARS
ಮಂಗಳನ ಅಂಗಳದಲ್ಲಿ ಇಳಿಯುವ ವೇಳೆ ಮೊದಲ ಚಿತ್ರಗಳನ್ನು ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ನಾಸಾದ ಕಚೇರಿಗೆ ಕಳಿಸಿತು. ಈ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
5/5
SWATHI MOHAN
ರೋವರ್​ನ ಆ್ಯಲ್ಟಿಟ್ಯೂಡ್ (Altitude) ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್​ನ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದವರು ಡಾ. ಸ್ವಾತಿ. ಮೋಹನ್​ಗೆ ಭಾರತದಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ. ದೇಶವೇ ಹೆಮ್ಮೆ ಪಡುವ ಸಾಧನೆಯನ್ನು ಅವರು ನಾಸಾ ತಂಡದಲ್ಲಿ ಮಾಡಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.