AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸಾದ ಹಬಲ್ ಹಂಚಿಕೊಂಡ ಆಕರ್ಷಕ ಗೆಲಾಕ್ಸಿ ಫೋಟೋಗಳು ವಿಶ್ವದ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದೆ

ಇಲ್ಲಿರುವ ಚಿತ್ರಗಳನ್ನು 10 ವರ್ಷಗಳ ಹಿಂದೆ ಹಬಲ್ ಟೆಲಿಸ್ಕೋಪ್ ಸೆರೆಹಿಡಿದಿದೆ. ನಾಸಾ ಈಗ ಇದನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮತ್ತೆ ಪೋಸ್ಟ್ ಮಾಡಿದೆ.

ನಾಸಾದ ಹಬಲ್ ಹಂಚಿಕೊಂಡ ಆಕರ್ಷಕ ಗೆಲಾಕ್ಸಿ ಫೋಟೋಗಳು ವಿಶ್ವದ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದೆ
ನಾಸಾ ಸೆರೆಹಿಡಿದ ಗ್ಯಾಲಕ್ಸಿಸಿಯ ಚಿತ್ರಣ
preethi shettigar
|

Updated on:May 12, 2021 | 1:57 PM

Share

ನಾಸಾ ತನ್ನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಬಲ್ ಟೆಲಿಸ್ಕೋಪ್ ಸೆರೆ ಹಿಡಿದ ಆಕರ್ಷಿಕ ಫೋಟೊಗಳನ್ನು ಪೋಸ್ಟ್ ಮಾಡಿದೆ. ಈ ಫೋಟೊಗಳು ಎರಡು ಸುಂದರ ಗೆಲಾಕ್ಸಿಯ ಮೇಲೆ ಬೆಳಕು ಚೆಲ್ಲಿವೆ. ಕೋಟಿಗಟ್ಟಲೆ ನಕ್ಷತ್ರಗಳನ್ನು ಹಾಗೂ ಗ್ರಹಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಗೆಲಾಕ್ಸಿ ಮಾತ್ರ ಏಕಾಂತ ವಾಸದಲ್ಲಿರುತ್ತದೆ. ಇದಕ್ಕೆ ಕಾರಣ ಒಂದು ಗ್ಯಾಲಕ್ಸಿಯಿಂದ ಮತ್ತೊಂದು ಗೆಲಾಕ್ಸಿಗೆ ಇರುವ ಅಂತರ. ಹಬಲ್ ಟೆಲಿಸ್ಕೋಪ್ ಸೆರೆಹಿಡಿದಿರುವ ಈ ಎರಡು ಗೆಲಾಕ್ಸಿಗಳು ಭೂಮಿಯಿಂದ 300 ದಶಲಕ್ಷ ಜ್ಯೋತಿರ್ವರ್ಷ ಅಂತರದಲ್ಲಿರುವ ಆ್ಯಂಡ್ರೋಮೆಡಾ ನಕ್ಷತ್ರಮಂಡಲದಲ್ಲಿದೆ. ಈ ಎರಡು ಗೆಲಾಕ್ಸಿಗಳು ಪರಸ್ಪರ ಸಂವಹನದಲ್ಲಿರುವಂತೆ ಗೋಚರವಾಗಿದ್ದು, ಕಾಸ್ಮಿಕ್ ಗುಲಾಬಿಯಂತೆ ಕಾಣಿಸುತ್ತಿದೆ.

ಈ ಫೋಟೊಗಳನ್ನು ಸುಮಾರು 10 ವರ್ಷಗಳ ಹಿಂದೆ ಸೆರೆಹಿಡಿಯಲಾಗಿದ್ದು, ನಾಸಾ ಈಗ ಇದನ್ನು ತನ್ನ ಇನ್​ಸ್ಟಾಗ್ರಾಂ​​ ಖಾತೆಯಲ್ಲಿ ಪುನಃ ಪೋಸ್ಟ್ ಮಾಡಿದೆ. ಆರ್ಪ್ 273 ರ ಗೆಲಾಕ್ಸಿಗಳು ಗುರುತ್ವಾಕರ್ಷಣೆಯ ಸೆಳೆತದಿಂದ ಸಂವಹನ ನಡೆಸುತ್ತವೆ. ಯುಜಿಸಿ 1810 ಎಂಬ ದೊಡ್ಡ ಗಾತ್ರದ ಗೆಲಾಕ್ಸಿಯು ಕೆಳಗಿರುವ ಯುಜಿಸಿ 1813 ಗೆಲಾಕ್ಸಿಯ ಗುರುತ್ವಾಕರ್ಷಣೆಯಿಂದಾಗಿ ಗುಲಾಬಿ ತರಹದ ಆಕಾರದಲ್ಲಿ ಗೋಚರಿಸಿದೆ. ಚಿತ್ರದಲ್ಲಿ ನೀಲಿ ಬೆಳಕಿನ ಅಗಾಧವಾದ ನಕ್ಷತ್ರಗಳು ನಮಗೆ ಕಾಣ ಸಿಗುತ್ತದೆ.

ಕಾಸ್ಮಿಕ್ ಗುಲಾಬಿ ನಿಮಗಾಗಿ ಎಂದು ನಾಸಾ ತನ್ನ ಇನ್​ಸ್ಟಾಗ್ರಾಂ​ನಲ್ಲಿ ಬರೆದುಕೊಂಡಿದೆ

ದೊಡ್ಡ ರಂಗೋಲಿಗೆ ಕೈ ಬೆರಳ ತುದಿಯಲ್ಲಿ ಬಣ್ಣವನ್ನು ಮೆತ್ತಿಕೊಂಡು ಅದನ್ನು ಚಿಮುಕಿಸಿದ ಹಾಗೆ ಈ ಫೋಟೆ ಗೋಚರಿಸುತ್ತಿದೆ.

ನಾಸಾದ ಪ್ರಕಾರ, ಹಬಲ್ ಬಾಹ್ಯಾಕಾಶದಲ್ಲಿ ಇರಿಸಲಾದ ಮೊದಲ ಪ್ರಮುಖ ಆಪ್ಟಿಕಲ್ ಟೆಲಿಸ್ಕೋಪ್ ಆಗಿದೆ ಮತ್ತು ಇದು ಇಡೀ ವಿಶ್ವವನ್ನು ಯಾವುದೇ ತಡೆಯಿಲ್ಲದ ವೀಕ್ಷಿಸಲು ನೆರವಾಗಿದ್ದು, ವಿಜ್ಞಾನಿಗಳು ನಮ್ಮ ಸೌರವ್ಯೂಹದ ಅತ್ಯಂತ ದೂರದ ನಕ್ಷತ್ರಗಳು ಮತ್ತು ಗೆಲಾಕ್ಸಿಗಳನ್ನು ವೀಕ್ಷಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಅಮೇರಿಕನ್ ಖಗೋಳಶಾಸ್ತ್ರಜ್ಞ ಎಡ್ವಿನ್ ಪಿ. ಹಬಲ್ ಅವರ ಹೆಸರಿನಲ್ಲಿ ಇದನ್ನು 1990 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಇದು 1.3 ದಶಲಕ್ಷಕ್ಕೂ ಹೆಚ್ಚಿನ ಅವಲೋಕನಗಳನ್ನು ಮಾಡಿದೆ. ಬಾಹ್ಯಾಕಾಶ ಏಜೆನ್ಸಿಯ ಪ್ರಕಾರ, ವಾಷಿಂಗ್ಟನ್‌ನಿಂದ ಟೋಕಿಯೊದಲ್ಲಿ 10 ಅಡಿಗಿಂತಲೂ ಕಡಿಮೆ ಅಂತರದಲ್ಲಿರುವ ಜೋಡಿ ಫೈರ್‌ಫ್ಲೈಗಳನ್ನು ನೋಡುವ ಮಾದರಿಯಲ್ಲಿಯೇ, ಹಬಲ್ ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿನ ವಸ್ತುಗಳನ್ನು ವೀಕ್ಷಿಸುತ್ತದೆ ಎಂದು ತಿಳಿಸಿದೆ.

ಹಬಲ್  ಸೆರೆಹಿಡಿದಿರುವ ಬಾಹ್ಯಾಕಾಶದ ಹಲವಾರು ಅದ್ಭುತ ಘಟನೆಗಳನ್ನು ನಾಸಾ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

ಹೋಳಿ ಹಬ್ಬ ಮುಗಿದ ನಂತರದಲ್ಲಿ ಬಣ್ಣಗಳು ನಾ ಹೆಚ್ಚು ನೀ ಹೆಚ್ಚು ಎಂದು ಒಂದನೊಂದು ಮಾತನಾಡಿಸಿದ ರೀತಿಯಲ್ಲಿ ಈ ಫೋಟೊ ಕಾಣಿಸುತ್ತಿದೆ.

ಇದನ್ನೂ ಓದಿ:

ನಾಸಾ ಬಿಡುಗಡೆಗೊಳಿಸಿದೆ ಆಕಾಶಗಂಗೆಯ ಅಮೋಘ ಚಿತ್ರ; ನೆಟ್ಟಿಗರು ಫುಲ್ ಫಿದಾ

Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ

Published On - 1:09 pm, Wed, 12 May 21

Follow Us
preethi shettigar
preethi shettigar
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ