ವೈರಲ್ ವಿಡಿಯೋ: ಕಾರ್ಮಿಕನ ಶವವನ್ನು ಕಸದ ಗಾಡಿಗೆ ಹಾಕಿ ಸಾಗಿಸಿದ ಅಧಿಕಾರಿಗಳು

viral video: ದೆಹಲಿಯಲ್ಲಿದ್ದ ಕಾರ್ಮಿಕ ಸುಸ್ತು, ಆಯಾಸ, ಬಳಲಿಕೆಯಿದೆ ಎಂದು ಸ್ವಗ್ರಾಮಕ್ಕೆ ವಾಪಸಾಗಿದ್ದ. ಆದರೆ ಆತನಿಗೆ ಚಿಕಿತ್ಸೆ ಕೊಡುವ ಮೊದಲೇ ಮೃತಪಟ್ಟ ಎಂದು ಕಾರ್ಮಿಕನ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಇದರಲ್ಲಿ ಕಾರ್ಮಿಕನ ಕುಟುಂಬಸ್ಥರೂ ತಪ್ಪಿತಸ್ಥರು ಎಂಬ ಮಾತುಗಳು ಕೇಳಿಬಂದಿದೆ.

ವೈರಲ್ ವಿಡಿಯೋ: ಕಾರ್ಮಿಕನ ಶವವನ್ನು ಕಸದ ಗಾಡಿಗೆ ಹಾಕಿ ಸಾಗಿಸಿದ ಅಧಿಕಾರಿಗಳು
ವಿಡಿಯೋ: ಕಾರ್ಮಿಕನ ಶವವನ್ನು ಕಸದ ಗಾಡಿಗೆ ಹಾಕಿ ಸಾಗಿಸಿದ ಅಧಿಕಾರಿಗಳು
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:May 31, 2021 | 12:31 PM

ಲಖ್ನೋ: ಇತ್ತೀಚೆಗೆ ಗಂಗಾ ನದಿ ತಟದಲ್ಲಿ ಕೊರೊನಾ ಸೋಂಕಿತರ ಮೃತ ದೇಹಗಳನ್ನು ನದಿಗೆ ಎಸೆಯಲಾಗುತ್ತಿದೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಅಲ್ಲಿಂದಲೇ ಮತ್ತೊಂದು ವಿಡಿಯೋ ವಾರ್ತೆ ಕೇಳಿಬಂದಿದೆ. ದೆಹಲಿಯಲ್ಲಿ ಇತ್ತೀಚೆಗೆ 50 ವರ್ಷದ ಕಾರ್ಮಿಕರೊಬ್ಬರು ಅಸುನೀಗಿದ್ದರು. ಅವರ ಶವವನ್ನು ಮಹೋಬಾ ಜಿಲ್ಲೆಯ ಗ್ರಾಮಕ್ಕೆ ತರಲಾಗಿತ್ತು. ಆ ವೇಳೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಮಿಕನ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಕಸದ ಗಾಡಿಗೆ ಎತ್ತೆಸೆದು ಸಾಗಿಸುವ ಶೋಚನೀಯ ದೃಶ್ಯ ಕಂಡುಬಂದಿದೆ.

ಲಖ್ನೋದಿಂದ 250 ಕಿ.ಮೀ. ದೂರದಲ್ಲಿರುವ ಮಹೋಬಾ ಪಟ್ಟಣದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ತನಿಖೆಗೆ ಆಜ್ಞಾಪಿಸಲಾಗಿದೆ. 24 ಗಂಟೆಯಲ್ಲಿ ತನಿಖೆ ನಡೆಸಿ, ವರದಿ ಒಪ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿರುವುದಾಗಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿ ಆರ್​ಕೆ ಗೌತಂ ತಿಳಿಸಿದ್ದಾರೆ.

ಮಹೋಬಾ ಜಿಲ್ಲಾ ಆಸ್ಪತ್ರೆಯ ಶವಾಗಾರದ ಬಳಿ ಈ ಘಟನೆ ನಡೆದಿದ್ದು, ಇಬ್ಬರು ಪೊಲೀಸ್​ ಸಿಬ್ಬಂದಿ ಕಾರ್ಮಿಕನ ಶವವನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ, ಕಸ ಸಾಗಿಸುವ ಟ್ರಕ್​​ನೊಳಕ್ಕೆ ಹಾಕುವ ದೃಶ್ಯ ಮತ್ತು ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೂಚನೆ ನೀಡುವ ದೃಶ್ಯ ಮೊಬೈಲ್​ನಲ್ಲಿ ವಿಡಿಯೋ ಮಾಡಲಾಗಿದೆ. ​

ದೆಹಲಿಯಲ್ಲಿದ್ದ ಕಾರ್ಮಿಕ ಸುಸ್ತು, ಆಯಾಸ, ಬಳಲಿಕೆಯಿದೆ ಎಂದು ಸ್ವಗ್ರಾಮಕ್ಕೆ ವಾಪಸಾಗಿದ್ದ. ಆದರೆ ಆತನಿಗೆ ಚಿಕಿತ್ಸೆ ಕೊಡುವ ಮೊದಲೇ ಮೃತಪಟ್ಟ ಎಂದು ಕಾರ್ಮಿಕನ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಇದರಲ್ಲಿ ಕಾರ್ಮಿಕನ ಕುಟುಂಬಸ್ಥರೂ ತಪ್ಪಿತಸ್ಥರು ಎಂಬ ಮಾತುಗಳು ಕೇಳಿಬಂದಿದೆ.

ಮೃತ ಕಾರ್ಮಿಕನನ್ನು ಜಿಲ್ಲಾ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ ಹೇಳಿದ್ದಾರೆ. ಆದರೆ ಅವರು ಆಸ್ಪತ್ರೆಯತ್ತ ಸುಳಿದಿಲ್ಲ. ಕಾರ್ಮಿಕನ ಪುತ್ರ ಮಾತ್ರ ಆಸ್ಪತ್ರೆಗೆ ಬಂದು, ಶವಪರೀಕ್ಷೆಯ ಬಳಿಕ ತಂದೆಯ ಮೃತ ದೇಹ ಸಾಗಿಸಲು ಸ್ವತಃ ಆತನೇ ಕಸ ಸಾಗಿಸುವ ಟ್ರಕ್​ಗೆ ವ್ಯವಸ್ಥೆ ಮಾಡಿದ್ದ ಎಂಬ ಮಾತುಗಳು ಕೇಳಿಬಂದಿವೆ.

(viral video Uttar Pradesh police Caught Dumping Man Body Into Garbage Van in Mahoba district hospital) ಈ ಗಾಡಿಯಲ್ಲಿ ತುಂಬಾ ಹೆಣ ಸಾಗಿಸಿದ್ದೀನಿ, ಈಗ ಮಕ್ಕಳ ಶವವನ್ನೂ ಸಾಗಿಸಬೇಕಾ? ನಟ ಅರ್ಜುನ್​ ಗೌಡ ಆತಂಕ

Published On - 12:13 pm, Mon, 31 May 21

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ