AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮರಳಿ ಯತ್ನವ ಮಾಡು ಎಂಬ ಮಾತನ್ನು ಪುಟ್ಟ ಹುಡುಗಿ ಸಾಧಿಸಿ ತೋರಿಸಿದ್ದಾಳೆ; ವಿಡಿಯೋ ನೋಡಿ

ಮೊದಮೊದಲು ಕಂಬ ಹತ್ತಲು ಪ್ರಯತ್ನಪಟ್ಟ ಹುಡುಗಿ ಹಲವು ಬಾರಿ ಸೋತಿದ್ದಾಳೆ. ಆದರೆ ಕೊನೆಗೂ ಕಂಬ ಹತ್ತಲು ಯಶಸ್ವಿಯಾಗಿದ್ದಾಳೆ. ವಿಡಿಯೋ ಹಂಚಿಕೊಂಡ ಐಎಎಸ್ ಅಧಿಕಾರಿ ಈ ಮಗು ನನ್ನ ಗುರು ಎಂದು ಬರೆದುಕೊಂಡಿದ್ದಾರೆ.

Viral Video: ಮರಳಿ ಯತ್ನವ ಮಾಡು ಎಂಬ ಮಾತನ್ನು ಪುಟ್ಟ ಹುಡುಗಿ ಸಾಧಿಸಿ ತೋರಿಸಿದ್ದಾಳೆ; ವಿಡಿಯೋ ನೋಡಿ
ಪುಟ್ಟ ಹುಡುಗಿಯ ಸಾಹಸ
Follow us
TV9 Web
| Updated By: ganapathi bhat

Updated on:Aug 14, 2021 | 1:05 PM

ಮರಳಿ ಯತ್ನವ ಮಾಡು ಎಂಬ ಮಾತನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಯಾವುದೇ ಕೆಲಸ ಒಂದು ಬಾರಿ ಕೈಗೂಡದಿದ್ದರೆ ಚಿಂತಿಸುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇರಬೇಕು. ಒಂದು ಬಾರಿಗೆ ಕೆಲಸ ಆಗಲಿಲ್ಲ ಎಂದು ಕೈಕಟ್ಟಿ ಕುಳಿತರೆ ಹಾಗೇ ಕೂತಿರಬೇಕಾಗುತ್ತದೆ. ಇದನ್ನು ವಿವರಿಸಲು ಜೇಡರ ಬಲೆಯ ಕತೆಯನ್ನೂ ನೀವು ಕೇಳಿರಬಹುದು. ಜೇಡ ತನ್ನ ಬಲೆ ಕಡಿದು ಹೋದರೂ ಮತ್ತೆ ಪೋಣಿಸುತ್ತಿರುತ್ತದೆ.

ಈಗ ಈ ವಿಷಯವನ್ನು ಪುಟ್ಟ ಮಗುವೊಂದು ಸಾಧಿಸಿ ತೋರಿಸಿದೆ. ಮತ್ತಷ್ಟು ಮತ್ತಷ್ಟು ಪ್ರಯತ್ನ ಪಡಬೇಕು. ಆಗ ಗೆಲುವು ಅಥವಾ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಮಾಡಿ ತೋರಿಸಿದೆ. 7 ವರ್ಷ ವಯಸ್ಸಿನ ಪುಟ್ಟ ಹುಡುಗಿಯೊಬ್ಬಳು ಕಂಬವನ್ನು ಹತ್ತಲು ಮತ್ತೆ ಮತ್ತೆ ಪ್ರಯತ್ನಿಸಿ, ಕೊನೆಗೂ ತನ್ನ ಕಾರ್ಯ ಸಾಧನೆ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಡುಗಿಯ ಹೆಸರನ್ನು ಆರತ್ ಹೊಸೈನಿ ಎಂದು ತಿಳಿಸಲಾಗಿದೆ.

ಈ ಪುಟ್ಟ ಹುಡುಗಿ ಲಿವರ್​ಪೂಲ್ ಅಕಾಡೆಮಿಯಲ್ಲಿ ಫುಟ್​ಬಾಲ್ ತರಬೇತಿ ಪಡೆಯುತ್ತಿದ್ದಾಳಂತೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಐಎಎಸ್ ಅಧಿಕಾರಿ ಎಮ್​ವಿ ರಾವ್ ಹಂಚಿಕೊಂಡಿದ್ದಾರೆ. ಮೊದಮೊದಲು ಕಂಬ ಹತ್ತಲು ಪ್ರಯತ್ನಪಟ್ಟ ಹುಡುಗಿ ಹಲವು ಬಾರಿ ಸೋತಿದ್ದಾಳೆ. ಆದರೆ ಕೊನೆಗೂ ಕಂಬ ಹತ್ತಲು ಯಶಸ್ವಿಯಾಗಿದ್ದಾಳೆ. ವಿಡಿಯೋ ಹಂಚಿಕೊಂಡ ಐಎಎಸ್ ಅಧಿಕಾರಿ ಈ ಮಗು ನನ್ನ ಗುರು ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಮೊದಲನೆಯದಾಗಿ ಆರತ್​ನ ಅಕೌಂಟ್​ನಲ್ಲಿ 2018ರಲ್ಲಿ ಹಂಚಲ್ಪಟ್ಟದ್ದು ಎಂದು ತಿಳಿದುಬಂದಿದೆ. ಆದರೆ ಈಗ ಮತ್ತೆ ಶೇರ್ ಆಗುತ್ತಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಮಗುವಿನ ಸಾಹಸ, ಛಲ, ಧೈರ್ಯ, ಉತ್ಸಾಹ ಕಂಡು ನೆಟ್ಟಿಗರು ಭರಪೂರವಾಗಿ ಹೊಗಳಿದ್ದಾರೆ. ಒಬ್ಬರು ಮಗುವನ್ನು ರೊನಾಲ್ಡೋ ಇನ್ ಮೇಕಿಂಗ್ ಎಂದೂ ಹೊಗಳಿದ್ದಾರೆ.

ಈ ಪುಟ್ಟ ಬಾಲಕಿಯ ಫುಟ್​ಬಾಲ್ ಕೌಶಲ್ಯವನ್ನು ಇಲ್ಲಿ ಗಮನಿಸಿ. ಆಕೆಯ ಎರಡು ವಿಡಿಯೋಗಳನ್ನು ನಿಮಗೆ ನೀಡಲಾಗಿದೆ. ಸೋಲು ಗೆಲುವು ನಮ್ಮ ಜೀವನದ ಒಂದು ಭಾಗ. ಈ ಮಧ್ಯೆ ಇಂಥ ಆತ್ಮವಿಶ್ವಾಸ ಉಳಿಸಿಕೊಂಡು ಬಾಳಬೇಕಿದೆ.

ಇದನ್ನೂ ಓದಿ: Viral Video: ಆಹಾರ ನೀಡಲು ಮುಂದಾದ ಪುಟ್ಟ ಹುಡುಗನನ್ನು ಮೇಲೆತ್ತಿ ನೇತಾಡಿಸಿದ ಜಿರಾಫೆ; ವಿಡಿಯೋ ವೈರಲ್!

ಮನಸ್ಸು ಮಾಡಿದರೆ ಏನೂ ಸಾಧಿಸಬಹುದು; ಕೃತಕ ಕಾಲಿನ ಮೂಲಕ ಕಂದಕ ಏರಿದ ಪುಟ್ಟ ಬಾಲಕಿಯ ವಿಡಿಯೋ ನೋಡಿ!

Published On - 4:04 pm, Sun, 30 May 21