AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನಸ್ಸು ಮಾಡಿದರೆ ಏನೂ ಸಾಧಿಸಬಹುದು; ಕೃತಕ ಕಾಲಿನ ಮೂಲಕ ಕಂದಕ ಏರಿದ ಪುಟ್ಟ ಬಾಲಕಿಯ ವಿಡಿಯೋ ನೋಡಿ!

ಹುಡುಗಿ ಕರೆದ ತಕ್ಷಣ ಆಕೆಯ ಬಳಿ ಓಡಿ ಹೋಗಿ, ಸಹಾಯ ಮಾಡುವ ಸಾಧಾರಣ ತಾಯಿಯಾಗುವ ಬದಲು, ಅವರು ಆಕೆಯನ್ನು ಸ್ವತಂತ್ರವಾಗಿ ಹತ್ತಲು ಪ್ರೋತ್ಸಾಹಿಸಿದ್ದಾರೆ. ಈ ಬಗ್ಗೆ ತಾಯಿಯ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನಸ್ಸು ಮಾಡಿದರೆ ಏನೂ ಸಾಧಿಸಬಹುದು; ಕೃತಕ ಕಾಲಿನ ಮೂಲಕ ಕಂದಕ ಏರಿದ ಪುಟ್ಟ ಬಾಲಕಿಯ ವಿಡಿಯೋ ನೋಡಿ!
ಪುಟ್ಟ ಬಾಲಕಿಯ ಸಾಧನೆ
TV9 Web
| Edited By: |

Updated on:Aug 14, 2021 | 1:10 PM

Share

ಕೊರೊನಾ ಎರಡನೇ ಅಲೆ ಭಾರತದಾದ್ಯಂತ ವ್ಯಾಪಕವಾಗಿ ಹರಡಿದೆ. ಜನರು ನೋವು, ಕಷ್ಟ, ಆತಂಕ, ಚಿಂತೆ ಇಂತಹ ಭಾವದಲ್ಲೇ ಬಹುತೇಕ ಮುಳುಗಿರುತ್ತಾರೆ. ಅವರಿಗೆ ಆಶಾಭಾವ ನೀಡುವ ಯಾವುದಾದರೂ ವಿಚಾರ ಸಿಕ್ಕರೂ ಬಹಳಷ್ಟು ಮನೋಲ್ಲಾಸ ಆಗಬಹುದು. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಕಷ್ಟವನ್ನು ಮೆಟ್ಟಿನಿಂತ ಕೆಲ ಪುಟ್ಟ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಮನಸ್ಸಿದ್ದರೆ ಏನನ್ನೂ ಸಾಧಿಸಬಹುದು, ಏನನ್ನೂ ಗೆಲ್ಲಬಹುದು ಎಂಬ ಧೈರ್ಯ ತುಂಬುತ್ತಿದೆ. ಅಂತಹದೇ ಒಂದು ವಿಡಿಯೋ ಈಗ ಹರಿದಾಡುತ್ತಿದೆ. ನಾಲ್ಕು ವರ್ಷದ ಅಂಟೋನೆಲ್ಲಾ ಎಂಬ ಮಗುವಿನ ವಿಡಿಯೋ ಜನರ ಮನಗೆದ್ದಿದೆ.

ವಿಡಿಯೋದಲ್ಲಿ ಕಂಡುಬಂದಂತೆ ಬಾಲಕಿ ತನ್ನ ತಾಯಿಯ ಬಳಿ ಕೈನೀಡಲು, ತಾನು ಮೇಲೆ ನಡೆಯಲು ಸಹಾಯ ಮಾಡಲು ಕೇಳುತ್ತಾಳೆ. ಆದರೆ, ಆಕೆಯ ತಾಯಿ ಸ್ವಪ್ರಯತ್ನದಿಂದ ಕೆಲಸ ಸಾಧಿಸುವಂತೆ ಕೇಳಿಕೊಳ್ಳುತ್ತಾಳೆ. ಕೆಳಗೆ ಬೀಳುವುದಿಲ್ಲ, ಏನೂ ಆಗುವುದಿಲ್ಲ ಎಂದು ನಂಬಿಕೆ ನೀಡುತ್ತಾಳೆ. ತನ್ನ ತೊಡೆಗಳಿಗೆ ಜೋಡಿಸಲಾದ ಕೃತಕ ಕಾಲಿನ ಮೂಲಕ ಬಾಲಕಿ ಮೇಲೆ ಹತ್ತುತ್ತಾಳೆ. ಬಳಿಕ, ಖುಷಿ ವ್ಯಕ್ತಪಡಿಸುತ್ತಾಳೆ.

ತಾನು ಕಾರ್ಯ ಸಾಧಿಸಿದ ಸಂಭ್ರಮದಲ್ಲಿ ಗೆಲುವಿನ ನಗೆ ಬೀರುತ್ತಾಳೆ. ಹುಡುಗಿಯ ಧೈರ್ಯ, ಸ್ಥೈರ್ಯದ ಬಗ್ಗೆ ಅಭಿಮಾನ ಪಡುತ್ತಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕೂಡ ಆಕೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಸಾಧನೆ ನೋಡಿದ ನೆಟ್ಟಿಗರು ಪುಟ್ಟ ಹುಡುಗಿಯನ್ನು ಮಾತ್ರವಲ್ಲ, ಆಕೆಯ ತಾಯಿಯನ್ನು ಕೂಡ ಮೆಚ್ಚಿಕೊಂಡಿದ್ದಾರೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹುಡುಗಿ ಕರೆದ ತಕ್ಷಣ ಆಕೆಯ ಬಳಿ ಓಡಿ ಹೋಗಿ, ಸಹಾಯ ಮಾಡುವ ಸಾಧಾರಣ ತಾಯಿಯಾಗುವ ಬದಲು, ಅವರು ಆಕೆಯನ್ನು ಸ್ವತಂತ್ರವಾಗಿ ಹತ್ತಲು ಪ್ರೋತ್ಸಾಹಿಸಿದ್ದಾರೆ. ಈ ಬಗ್ಗೆ ತಾಯಿಯ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಟೋನೆಲ್ಲಾಳ ತಾಯಿ ಹಾಗೂ ತಂದೆ ಆಕೆಯ ಫೊಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಅದನ್ನು ಹಂಚಿಕೊಳ್ಳುವ ಅವರ ಖಾತೆಗೆ ಈಗ 13 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಇದನ್ನೂ ಓದಿ: Viral Video: ಆಹಾರ ನೀಡಲು ಮುಂದಾದ ಪುಟ್ಟ ಹುಡುಗನನ್ನು ಮೇಲೆತ್ತಿ ನೇತಾಡಿಸಿದ ಜಿರಾಫೆ; ವಿಡಿಯೋ ವೈರಲ್!

ವೈರಲ್​ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್

Published On - 9:13 pm, Fri, 28 May 21