ಮೀಟಿಂಗ್​ ಆಗುವಾಗ ಕಾಫಿ ಲೋಟದಲ್ಲಿ ಮೂತ್ರ ವಿಸರ್ಜಿಸಿದ ಆಡಳಿತ ಪಕ್ಷದ ಸಂಸದ; ವೈರಲ್​ ಆಯ್ತು ಕೆನಡಾ ಎಂಪಿ ವಿಡಿಯೋ

ಈ ಘಟನೆಯಿಂದಾಗಿ ನಾನು ತೀವ್ರ ಮುಜುಗರಕ್ಕೀಡಾಗಿದ್ದು, ಇದಕ್ಕೆ ಸಾಕ್ಷಿಯಾದವರು ಎಷ್ಟು ಹಿಂಸೆ ಅನುಭವಿಸಿರಬಹುದು ಎಂದು ಅಂದಾಜಿಸಬಲ್ಲೆ. ಇದರ ಬಗ್ಗೆ ನನಗೆ ಬೇಸರವಿದೆ ಎನ್ನುವುದಾಗಿ ಟ್ವಿಟರ್ ಮೂಲಕ ವಿಲಿಯಮ್ ಅಮೋಸ್ ಹೇಳಿಕೊಂಡಿದ್ದಾರೆ.

ಮೀಟಿಂಗ್​ ಆಗುವಾಗ ಕಾಫಿ ಲೋಟದಲ್ಲಿ ಮೂತ್ರ ವಿಸರ್ಜಿಸಿದ ಆಡಳಿತ ಪಕ್ಷದ ಸಂಸದ; ವೈರಲ್​ ಆಯ್ತು ಕೆನಡಾ ಎಂಪಿ ವಿಡಿಯೋ
ಅಚಾತುರ್ಯವೆಸಗಿದ ಕೆನಡಾ ಎಂಪಿ
Follow us
Skanda
|

Updated on:May 29, 2021 | 1:33 PM

ಕೆಲ ದಿನಗಳ ಹಿಂದೆ ನಗ್ನವಾಗಿ ಜೂಮ್​ ಮೀಟಿಂಗ್​ನಲ್ಲಿ ಕಾಣಿಸಿಕೊಂಡಿದ್ದ ಕೆನಡಾ ಎಂಪಿ ವಿಲಿಯಮ್ ಅಮೋಸ್ ಈ ಬಾರಿ ಮತ್ತೆ ಆಕ್ಷೇಪಾರ್ಹ ರೀತಿಯ ವರ್ತನೆ ತೋರಿಸಿದ್ದಾರೆ. ಸರ್ಕಾರಕ್ಕೆ ಸಂಬಂಧಿಸಿದ ವಿಡಿಯೋ ಕಾಲ್ ಮೀಟಿಂಗ್​ ನಡೆಯುವಾಗಲೇ ಕಾಫಿ ಕಪ್​ನಲ್ಲಿ ಸಂಸದ ಮೂತ್ರ ವಿಸರ್ಜಿಸಿದ್ದು, ಪೇಚಿಗೆ ಸಿಲುಕಿದ್ದಾರೆ. ವಿಲಿಯಮ್ ಅಮೋಸ್ ಕೆನಡಾದ ಆಡಳಿತ ಪಕ್ಷದ ಸಂಸದರಾಗಿದ್ದು, ಘಟನೆಯ ಬಳಿಕ ಟ್ವಿಟರ್​ನಲ್ಲಿ ಕ್ಷಮೆಯಾಚಿಸಿದ್ದಾರೆ. ಸಭೆಯ ಮಧ್ಯೆ ವಿರಾಮ ತೆಗೆದುಕೊಂಡಾಗ ಅಚಾತುರ್ಯದಿಂದ ಹೀಗಾಗಿದ್ದು ಕಳೆದ ಬಾರಿ ನಗ್ನವಾಗಿ ಕಾಣಿಸಿಕೊಂಡಿದ್ದು ಹಾಗೂ ಈಗ ಮೂತ್ರ ವಿಸರ್ಜಿಸಿದ್ದು ಎರಡೂ ಘಟನೆಗಳ ಬಗ್ಗೆ ಖೇದ ವ್ಯಕ್ತಪಡಿಸುತ್ತೇನೆ. ಇದರಿಂದ ಭಾರೀ ಮುಜುಗರವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಘಟನೆ ಬಳಿಕ ಕೆನಡಾ ಸಂಸದ ತಾತ್ಕಾಲಿಕವಾಗಿ ತನ್ನ ಸ್ಥಾನದಿಂದ ಕೆಳಗಿಳಿದಿದ್ದು, ಸೂಕ್ತ ಸಲಹೆ ಪಡೆಯುವುದಕ್ಕಾಗಿ ಹುದ್ದೆಯಿಂದ ಕೆಲ ಕಾಲ ದೂರ ಇರುವುದಾಗಿ ಹೇಳಿದ್ದಾರೆ. ಆದರೆ, ಎಲ್ಲಿಯೂ ಯಾವ ಬಗೆಯ ಸಲಹೆ ಪಡೆಯುವುದಕ್ಕೆ ಈ ತೆರನಾದ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಇದೇ ವೇಳೆ, ನಾನು ನನ್ನ ಕ್ಷೇತ್ರದ ಜನರ ಪ್ರತಿನಿಧಿಯಾಗಿ ಮುಂದೆಯೂ ಕೆಲಸ ನಿರ್ವಹಿಸುತ್ತೇನೆ. ಸಂಸತ್ತಿನಲ್ಲಿ ಅವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆಯಿದೆ. ನನಗೆ ಬೆಂಬಲ ನೀಡುತ್ತಿರುವ ನನ್ನ ಸಹೋದ್ಯೋಗಿಗಳು ಹಾಗೂ ಪ್ರೀತಿ ತೋರುತ್ತಿರುವ ನನ್ನ ಕುಟುಂಬಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಕಳೆದ ರಾತ್ರಿ ಖಾಸಗಿ ಜಾಗದಲ್ಲಿದ್ದುಕೊಂಡು ಕಚೇರಿಯ ಸಭೆಯಲ್ಲಿ ಆನ್​ಲೈನ್ ಮೂಲಕ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ನಾನು ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂಬ ಅರಿವಿಲ್ಲದೇ ಮೂತ್ರ ವಿಸರ್ಜನೆ ಮಾಡಿರುವೆ. ಈ ಘಟನೆಯಿಂದಾಗಿ ನಾನು ತೀವ್ರ ಮುಜುಗರಕ್ಕೀಡಾಗಿದ್ದು, ಇದಕ್ಕೆ ಸಾಕ್ಷಿಯಾದವರು ಎಷ್ಟು ಹಿಂಸೆ ಅನುಭವಿಸಿರಬಹುದು ಎಂದು ಅಂದಾಜಿಸಬಲ್ಲೆ. ಇದರ ಬಗ್ಗೆ ನನಗೆ ಬೇಸರವಿದೆ ಎನ್ನುವುದಾಗಿ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.

ಈ ಘಟನೆ ಸಾರ್ವಜನಿಕರಿಗೆ ಕಾಣಿಸುತ್ತಿರಲಿಲ್ಲ. ಹಾಗಂತ ಇದನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮರುಮಾತಿಲ್ಲದೆ ಬೇಷರತ್ ಕ್ಷಮೆಯಾಚಿಸುತ್ತೇನೆ. ತಪ್ಪಿಗೆ ಪ್ರತಿಯಾಗಿ ಕೆಲ ಕಾಲ ನನ್ನ ಹುದ್ದೆಯಿಂದ ದೂರ ಉಳಿಯಲಿದ್ದೇನೆ. ಈ ಸಂದರ್ಭದಲ್ಲಿ ನನಗೆ ಅವಶ್ಯಕವಿರುವ ಕೆಲ ಸಲಹೆಗಳನ್ನು ಪಡೆಯಬೇಕಿದೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಇವರು ನಗ್ನವಾಗಿ ಆನ್​ಲೈನ್​ ಮೀಟಿಂಗ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು, ಆ ವಿಡಿಯೋದ ಸ್ಕ್ರೀನ್​ಶಾಟ್​ ಸಾಮಾಜಿಕ ಮಾಧ್ಯಮಗಳಿಗೆ ಸೋರಿಕೆಯಾಗಿ ಎಲ್ಲೆಡೆ ಹರಿದಾಡಿತ್ತು. ಬಳಿಕ ಕ್ಷಮೆಯಾಚಿಸಿದ್ದ ವಿಲಿಯಮ್ ಅಮೋಸ್, ದುರದೃಷ್ಟವಶಾತ್ ಇಂದು ನನ್ನಿಂದ ಒಂದು ತಪ್ಪಾಗಿದೆ. ಕೈ ತಪ್ಪಿನಿಂದ ಕ್ಯಾಮೆರಾ ಆನ್ ಆಗಿಯೇ ಉಳಿದ ಕಾರಣ ನಾನು ನನ್ನ ಕಚೇರಿ ಧಿರಿಸನ್ನು ತೆಗೆದು ಮನೆಯಲ್ಲಿ ತೊಡುವ ಉಡುಪನ್ನು ಹಾಕಿಕೊಳ್ಳುತ್ತಿದ್ದ ದೃಶ್ಯ ಸೆರೆಯಾಗಿದೆ. ಇದು ಆಕಸ್ಮಿಕವಾಗಿ ಘಟಿಸಿದ ತಪ್ಪಾಗಿದ್ದು ಇನ್ನುಮುಂದೆ ಇದು ಮರುಕಳಿಸದಂತೆ ನೊಡಿಕೊಳ್ಳುತ್ತೇನೆ ಎಂದು ಟ್ವಿಟರ್ ಮೂಲಕ ಕೇಳಿಕೊಂಡಿದ್ದರು.

ಇದನ್ನೂ ಓದಿ: Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ 

ಗಂಡ ಝೂಮ್ ಮೀಟಿಂಗ್​ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ

Published On - 1:31 pm, Sat, 29 May 21

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ