ಅಮೆರಿಕದಲ್ಲಿ 7 ವರ್ಷಗಳ ಗರಿಷ್ಠ ಮಟ್ಟ ತಲುಪುತ್ತಿದೆ ಇಂಧನದ ಬೆಲೆ; ಭಾರತಕ್ಕೆ ಹೋಲಿಸಿದರೆ ಎಷ್ಟು ವ್ಯತ್ಯಾಸ ಗೊತ್ತಾ?

ಈ ವಾರಾಂತ್ಯಕ್ಕೆ ರಸ್ತೆ ಮೇಲೆ ಇಳಿಯುವ ಅಮೆರಿಕನ್ನರು ಏಳು ವರ್ಷಗಳಲ್ಲೇ ಗರಿಷ್ಠ ದರವನ್ನು ಪೆಟ್ರೋಲ್​ಗಾಗಿ ನೀಡಬೇಕಾಗುತ್ತದೆ. ಹಾಗಿದ್ದರೂ ನಾವು ಭಾರತದ ಜತೆಗೆ ಹೋಲಿಸಿಕೊಂಡರೆ ಎಷ್ಟು ವ್ಯತ್ಯಾಸ ಇದೆ ಗೊತ್ತಾ?

ಅಮೆರಿಕದಲ್ಲಿ 7 ವರ್ಷಗಳ ಗರಿಷ್ಠ ಮಟ್ಟ ತಲುಪುತ್ತಿದೆ ಇಂಧನದ ಬೆಲೆ; ಭಾರತಕ್ಕೆ ಹೋಲಿಸಿದರೆ ಎಷ್ಟು ವ್ಯತ್ಯಾಸ ಗೊತ್ತಾ?
ಅಮೆರಿಕ ಅಧ್ಯಕ್ಷ ಜೋ ಬೈಡನ್​ (ಸಂಗ್ರಹ ಚಿತ್ರ)
Follow us
Srinivas Mata
|

Updated on: May 29, 2021 | 8:53 PM

ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಹೊತ್ತಿ ಉರಿಯುತ್ತಿದೆ ಎಂಬ ಭಾರತೀಯರ ಆಕ್ರೋಶದ ಜತೆಗೆ ಈಗ ನಾವು ಅಮೆರಿಕನ್ನರನ್ನೂ ಜತೆ ಮಾಡಿಕೊಳ್ಳಬಹುದು. ಯಾಕೆ ಗೊತ್ತಾ? ಅಲ್ಲಿ ಗ್ಯಾಸೊಲಿನ್ ಎಂದು ಕರೆಯುವ ವಾಹನದ ಇಂಧನದ ಬೆಲೆಯು ಈ ವಾರಾಂತ್ಯದ ರಜಾ ದಿನಕ್ಕೆ 7 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಲಿದೆ. ಇಂಧನದ ವೆಚ್ಚದ ಮೇಲೆ ನಿಗಾ ಇಡುವುದಾಗಿ ಶ್ವೇತಭವನ ಭರವಸೆ ನೀಡಿದೆ. ರಾಷ್ಟ್ರೀಯ ಸರಾಸರಿ ದರವು ಪಂಪ್​ನಲ್ಲಿ ಈ ತಿಂಗಳು ಒಂದು ಗ್ಯಾಲನ್​ಗೆ 3.045 ಅಮೆರಿಕನ್ ಡಾಲರ್ ಇದೆ. ಅಂದರೆ ಇವತ್ತಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ 220.44 ಆಗುತ್ತದೆ. ಇನ್ನು 1 ಗ್ಯಾಲನ್ ಅಂದರೆ 3.78 ಲೀಟರ್​ ಆಗುತ್ತದೆ. ಭಾರತದಲ್ಲಿ ನಾವು ಪೆಟ್ರೋಲ್ ಅಂತ ಕರೆದರೆ, ಅದನ್ನೇ ಅಮೆರಿಕದಲ್ಲಿ ಗ್ಯಾಸೊಲಿನ್ ಎನ್ನಲಾಗುತ್ತದೆ. ಭಾರತದಲ್ಲಿ ಲೀಟರ್​ ಪೆಟ್ರೋಲ್ 100 ರೂಪಾಯಿ ಸಮೀಪ ಇದೆ. ಇಷ್ಟಾದರೂ ಹೋಲಿಕೆ ಅಂತ ಮಾಡುವುದಾದರೆ ಅಮೆರಿಕದಲ್ಲಿ ಒಂದು ಲೀಟರ್ ಪೆಟ್ರೋಲ್​​ಗೆ ರೂ. 58.31 ಆಗುತ್ತದೆ. ಆದರೂ ಅಲ್ಲಿ 7 ವರ್ಷಗಳ ಗರಿಷ್ಠ ಮಟ್ಟದಲ್ಲಿ ಇದೆ.

2014ರ ನಂತರದ ಗರಿಷ್ಠ ಮಟ್ಟದಲ್ಲಿ ಅಲ್ಲಿನ ಇಂಧನದ ಬೆಲೆ ಇದೆ. “ಅನಿಲ ಬೆಲೆ ಏರಿಕೆ ಆಗುತ್ತಿರುವುದು ಅಮೆರಿಕನ್ನರ ಪಾಲಿಗೆ ನೋವಿನ ಸಂಗತಿ ಎಂಬುದು ಅಧ್ಯಕ್ಷರಿಗೆ ಗೊತ್ತಿದೆ,” ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗ್ಯಾಸ್​ ಮೇಲೆ ತೆರಿಗೆ ಏರಿಸುವ ಯಾವುದೇ ಪ್ರಸ್ತಾವಕ್ಕೆ ಅಧ್ಯಕ್ಷ ಬೈಡನ್ ವಿರೋಧಿಸಿದ್ದಾರೆ. ಆದ್ದರಿಂದ ಬೆಲೆ ಮೇಲೆ ನಿಗಾ ಮಾಡುವುದನ್ನು ಮುಂದುವರಿಸಿದ್ದೇವೆ. ಅಮೆರಿಕನ್ನರು ಮತ್ತೆ ರಸ್ತೆ ಮೇಲೆ ಸಂಚರಿಸಬಹುದು ಎಂಬುದನ್ನು ತಿಳಿಸಲು ಸಂತೋಷಿಸುತ್ತೇವೆ ಎಂದಿದ್ದಾರೆ.

ಬೇಡಿಕೆಯು ದಿನಕ್ಕೆ 1 ಕೋಟಿ ಬ್ಯಾರೆಲ್ ಮೇಲಿರಲಿದೆ: ಕೊರೊನಾಗೆ ಮುಂಚೆ ಎಷ್ಟು ಬೇಡಿಕೆ ಇತ್ತೋ ಅದೇ ಮಟ್ಟದ ಬೇಡಿಕೆ ಈ ಗ್ಯಾಸೊಲಿನ್​ಗೆ ಬಂದಿದೆ. ವಿಶ್ವದ ಅತಿ ದೊಡ್ಡ ಆರ್ಥಿಕತೆ ಮತ್ತೆ ತೆರೆದುಕೊಂಡು, ವರ್ಷದ ಲಾಕ್​ಡೌನ್​ ಮತ್ತು ನಿರ್ಬಂಧದ ನಂತರ ಚಾಲಕರು ರಸ್ತೆಗೆ ಇಳಿದಿರುವುದರಿಂದ ಮತ್ತೆ ಹಳೇ ಸ್ಥಿತಿಗೆ ಬಂದಿದೆ. ಬೇಸಿಗೆಯಲ್ಲಿ ಸರಾಸರಿ ಗ್ಯಾಸೊಲಿನ್ ಬೇಡಿಕೆ ಸಹಜ ಸ್ಥಿತಿಗೆ ಮರಳುತ್ತದೆ. ಕೆಲವು ವಾರಗಳಲ್ಲಿ ಬೇಡಿಕೆಯು ದಿನಕ್ಕೆ 1 ಕೋಟಿ ಬ್ಯಾರೆಲ್ ಮೇಲಿರಲಿದೆ ಎಂದು ಗ್ಯಾಸ್​ಬಡಿಯಲ್ಲಿ ಪೆಟ್ರೋಲಿಯಂ ಅನಲಿಸ್ಟ್ ಆಗಿರುವ ಪ್ಯಾಟ್ರಿಕ್ ಡೆ ಹಾನ್ ಹೇಳಿದ್ದಾರೆ. ಚಂಡಮಾರುತ ಅಥವಾ ಬೇರೆ ಯಾವುದಾದರೂ ಅನಿರೀಕ್ಷಿತ ಕಾರಣಗಳಿಂದಾಗಿ ರಿಫೈನರಿಗಳಿಗೆ ಪೂರೈಕೆ ತಲುಪುವುದು ವ್ಯತ್ಯಯ ಆದಲ್ಲಿ ಮತ್ತೆ ಬೆಲೆ ಏರಿಕೆ ಆಗಲಿದೆ ಎಂದಿದ್ದಾರೆ.

ಬೆಲೆಯ ಮೇಲೆ ಪರಿಣಾಮ ಆಗಬಹುದು: ಏನಾದರೂ ಸಮಸ್ಯೆ ಅಂತ ಎದುರಾದಲ್ಲಿ ಟ್ರಕ್ ಚಾಲಕರ ಕೊರತೆಗೆ ಕಾರಣ ಆಗಬಹುದು. ಮತ್ತೆ ಸಹಜ ಸ್ಥಿತಿಗೆ ತರುವುದರ ಮೇಲೆ ಹಾಗೂ ಬೆಲೆಯ ಮೇಲೆ ಪರಿಣಾಮ ಆಗಬಹುದು ಎಂದು ಹಾನ್ ಹೇಳಿದ್ದಾರೆ. ಸೋಮವಾರದಂದು ಅಮೆರಿಕದಲ್ಲಿ ಮೆಮೋರಿಯಲ್ ಹಾಲಿಡೇ. ಆ ವಾರದ ಕೊನೆಗೆ ಡ್ರೈವಿಂಗ್ ಸೀಸನ್ ಶುರುವಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸೊಲಿನ್ ಬೇಡಿಕೆಯನ್ನು ನೋಡಿದಾಗ ಸರಾಸರಿ ನಾಲ್ಕು ವಾರದ ಸರಾಸರಿ ಪೂರೈಕೆಯಾದ ಇಂಧನ ಕಳೆದ ವರ್ಷದ ಮಾರ್ಚ್ ನಂತರ ಇದೇ ಮೊದಲ ಬಾರಿಗೆ 90 ಲಕ್ಷ ಬ್ಯಾರೆಲ್ ದಾಟಿದೆ ಎಂಬುದು ಯು.ಎಸ್. ಎನರ್ಜಿ ಇನ್​ಫರ್ಮೇಷನ್ ಅಡ್ಮಿನಿಸ್ಟ್ರೇಷನ್​ನಿಂದ ಗೊತ್ತಾಗುತ್ತದೆ.

ಹದಿನೈದು ವರ್ಷಗಳ ಸರಾಸರಿ ದರಕ್ಕಿಂತ ಕಡಿಮೆ: ಪ್ರಾದೇಶಿಕವಾಗಿ ಮತ್ತೆ ಪೂರೈಕೆಯನ್ನು ಸಹಜ ಸ್ಥಿತಿಗೆ ತರುವುದು ಇಂಧನ ಹರಿವನ್ನು ಮತ್ತೆ ಯಥಾಸ್ಥಿತಿಗೆ ತರುವಷ್ಟು ಸುಲಭ ಅಲ್ಲ. ಏಕೆಂದರೆ, ಹಬ್​ಗಳಿಂದ ರೀಟೇಲರ್​ಗಳಿಗೆ ತಲುಪಿಸುವುದಕ್ಕೆ ಗಂಭೀರ ಸ್ವರೂಪದಲ್ಲಿ ಟ್ರಕ್​ಗಳು ಮತ್ತು ಚಾಲಕರ ಕೊರತೆ ಇದೆ. ಇನ್ನು ದಶಕಗಳಲ್ಲೇ ಕನಿಷ್ಠ ಮಟ್ಟದ ದರದಲ್ಲಿ ರಿಫೈನರೀಸ್ ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದಲೇ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬೇಡಿಕೆ ಕುಸಿಯಿತು. ಆದರೆ ಈಗಲೂ ಅಮೆರಿಕನ್ನರು ಪಾವತಿ ಮಾಡುತ್ತಿರುವುದು ಹದಿನೈದು ವರ್ಷಗಳ ಸರಾಸರಿ ದರ ಕ್ಕಿಂತ ಕಡಿಮೆ ಹಾಗೂ 2018 ಹಾಗೂ 2019ರ ಮೇ ತಿಂಗಳಲ್ಲಿ ಎಷ್ಟು ಪಾವತಿ ಮಾಡುತ್ತಿದ್ದರೋ ಅಷ್ಟನ್ನೇ ಎಂದು ಸಾಕಿ ಹೇಳಿದ್ದಾರೆ.

ಇದನ್ನೂ ಓದಿ: Petrol Price Today: ಮತ್ತೆ ಏರಿದ ತೈಲ ಬೆಲೆ; ಶತಕ ದಾಟಿದ ಮುಂಬೈ ನಗರದ ಪೆಟ್ರೋಲ್ ದರ

(America fuel price will hit 7 year high after 2014. Here is the reason know why?)

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು