AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಮತ್ತೆ ಏರಿದ ತೈಲ ಬೆಲೆ; ಶತಕ ದಾಟಿದ ಮುಂಬೈ ನಗರದ ಪೆಟ್ರೋಲ್ ದರ

Petrol diesel Price Today: ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂಪಾಯಿಯ ಗಡಿ ದಾಟಿದ್ದು, ಆ ಮೂಲಕ ಪೆಟ್ರೋಲ್ ಬೆಲೆ ಲೀಟರ್​ಗೆ 100.19 ರೂಪಾಯಿಯಾದರೆ, ಡಿಸೇಲ್ ಬೆಲೆ ಲೀಟರ್​ಗೆ 92.17 ರೂಪಾಯಿಯಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 93.94 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್​ಗೆ 84.89 ರೂಪಾಯಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್​ಗೆ 97.07 ರೂಪಾಯಿ ಮತ್ತು ಡೀಸೆಲ್ ದರ ಲೀಟರ್​ಗೆ 89.99 ರೂಪಾಯಿಯಾಗಿದೆ.

Petrol Price Today: ಮತ್ತೆ ಏರಿದ ತೈಲ ಬೆಲೆ; ಶತಕ ದಾಟಿದ ಮುಂಬೈ ನಗರದ ಪೆಟ್ರೋಲ್ ದರ
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: Digi Tech Desk

Updated on:May 29, 2021 | 12:09 PM

ದೆಹಲಿ: ಸರ್ಕಾರಿ ತೈಲ ಕಂಪನಿಗಳು ಇಂದು (ಮೇ 29) ಇಂಧನ ದರವನ್ನು ಪರಿಷ್ಕರಿಸಿದ ನಂತರ ಪೆಟ್ರೋಲ್ ಲೀಟರ್​ಗೆ 25 ರಿಂದ 26 ಪೈಸೆ ಮತ್ತು ಡೀಸೆಲ್ ದರವನ್ನು ಲೀಟರ್​ಗೆ 28 ರಿಂದ 30 ಪೈಸೆಗಳಿಗೆ ಏರಿಕೆ ಮಾಡಿವೆ. ಆ ಮೂಲಕ ಇಂದು ಶನಿವಾರ ಮತ್ತೆ ತೈಲ ದರಗಳು ಏರಿಕೆ ಆಗಿವೆ. ಮೇ ತಿಂಗಳಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಇಂಧನ ದರ 15 ಬಾರಿ ಏರಿಕೆ ಕಂಡಿದೆ. ಅಲ್ಲದೆ ದರ ಏರಿಕೆಯಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಸಾರ್ವಕಾಲಿಕ ಗರಿಷ್ಠಮಟ್ಟ ತಲುಪಿದೆ.

ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂಪಾಯಿಯ ಗಡಿ ದಾಟಿದ್ದು, ಆ ಮೂಲಕ ಪೆಟ್ರೋಲ್ ಬೆಲೆ ಲೀಟರ್​ಗೆ 100.19 ರೂಪಾಯಿಯಾದರೆ, ಡಿಸೇಲ್ ಬೆಲೆ ಲೀಟರ್​ಗೆ 92.17 ರೂಪಾಯಿಯಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 93.94 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್​ಗೆ 84.89 ರೂಪಾಯಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್​ಗೆ 97.07 ರೂಪಾಯಿ ಮತ್ತು ಡೀಸೆಲ್ ದರ ಲೀಟರ್​ಗೆ 89.99 ರೂಪಾಯಿಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 93.97 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್​ಗೆ 87.74 ರೂಪಾಯಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 95.51 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್​ಗೆ 89.65 ರೂಪಾಯಿಯಾಗಿದೆ.

ಪ್ರತಿದಿನ ಆರು ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗುತ್ತದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ವ್ಯಾಪಾರಿ ಆಯೋಗ ಮತ್ತು ಇತರ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಹೊಸ ದರಗಳು ನಿಗದಿಯಾದಾಗ ಬೆಳಿಗ್ಗೆ 6 ಗಂಟೆಯಿಂದ ಅದು ಅನ್ವಯವಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

Petrol Price Today: ಸ್ಥಿರತೆಯಲ್ಲಿ ಪೆಟ್ರೋಲ್, ಡೀಸೆಲ್ ದರ; ವಿವಿಧ ನಗರಗಳಲ್ಲಿನ ಇಂಧನದ ಬೆಲೆ ವಿವರ ಹೀಗಿದೆ

Petrol Price Today: ಮೇ ತಿಂಗಳಿನಲ್ಲಿ 13 ಬಾರಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ; ವಿವಿಧ ನಗರಗಳಲ್ಲಿನ ಇಂಧನ ದರ ವಿವರ ಇಲ್ಲಿದೆ

Published On - 9:28 am, Sat, 29 May 21

ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ