Petrol Price Today: ಮೇ ತಿಂಗಳಿನಲ್ಲಿ 13 ಬಾರಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ; ವಿವಿಧ ನಗರಗಳಲ್ಲಿನ ಇಂಧನ ದರ ವಿವರ ಇಲ್ಲಿದೆ

Petrol Price Today: ಮೇ ತಿಂಗಳಿನಲ್ಲಿ 13 ಬಾರಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ; ವಿವಿಧ ನಗರಗಳಲ್ಲಿನ ಇಂಧನ ದರ ವಿವರ ಇಲ್ಲಿದೆ
ಪಿಟಿಐ ಚಿತ್ರ

Petrol Diesel Rate Today: ಮೇ ತಿಂಗಳಿನಲ್ಲಿ 13 ಬಾರಿ ಏರಿಕೆಯಾದ ಪೆಟ್ರೋಲ್​ ಮತ್ತು ಡೀಸೆಲ್​ ದರದಿಂದ ತೈಲ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಕೆಲವು ನಗರಗಳು ಪೆಟ್ರೋಲ್ ದರದಲ್ಲಿ 100ರ ಗಡಿ ದಾಟಿವೆ.

shruti hegde

|

May 25, 2021 | 8:52 AM

ದೆಹಲಿ: ಇಂಧನ ದರವನ್ನು ಇಂದು ಮಂಗಳವಾರ (ಮೇ 25) ಹೆಚ್ಚಳ ಮಾಡಲಾಗಿದೆ. ಲೀಟರ್​ ಪೆಟ್ರೋಲ್​ ಬೆಲೆಯಲ್ಲಿ 24 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 25 ಪೈಸೆ ಏರಿಕೆ ಮಾಡಲಾಗಿದೆ. ಮೇ ತಿಂಗಳಿನಲ್ಲಿ 13 ಬಾರಿ ಏರಿಕೆಯಾದ ಪೆಟ್ರೋಲ್​ ಮತ್ತು ಡೀಸೆಲ್​ ದರದಿಂದ ತೈಲ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಕೆಲವು ನಗರಗಳು ಪೆಟ್ರೋಲ್ ದರದಲ್ಲಿ 100ರ ಗಡಿ ದಾಟಿವೆ. ಇನ್ನು ಕೆಲವು ನಗರಗಳು ಗಡಿಯ ಅಂಚಿನಲ್ಲಿವೆ. ಇನ್ನೇನು ಕೆಲ ಪೈಸೆಗಳಷ್ಟು ಏರಿಕೆ ಕಂಡರೆ ಮುಂಬೈ ನಗರದಲ್ಲಿ ಪೆಟ್ರೋಲ್​ ದರ ಗರಿಷ್ಠ ಮಟ್ಟದಲ್ಲಿ ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ.

ತೈಲ ದರ ಏರಿಕೆಯ ಬಳಿಕ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 93.21ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 93.44 ರೂಪಾಯಿಗೆ ಏರಿಕೆ ಆಗಿದೆ. ಇಲ್ಲಿಯವರೆಗೆ ಮೇ ತಿಂಗಳಿನಲ್ಲಿ 12 ಬಾರಿ ಏರಿಕೆ ಕಂಡ ಇಂಧನ ದರದಲ್ಲಿ ಲೀಟರ್​ ಪೆಟ್ರೋಲ್​ ಬೆಲೆಯಲ್ಲಿ 2.89 ರೂ. ಹಾಗೂ ಲೀಟರ್​ ಡೀಸೆಲ್​ನಲ್ಲಿ 3.41 ರೂ ಏರಿಕೆ ಆಗಿದೆ.

ಇತ್ತೀಚೆಗಿನ ತೈಲ ದರ ಏರಿಕೆಯಿಂದಾಗಿ ಮುಂಬೈನಲ್ಲಿ ವಾಹನ ಇಂಧನ ಬೆಲೆ 100ರ ಗಡಿಗೆ ಹತ್ತಿರದಲ್ಲಿದೆ. ಸೋಮವಾರದ ದರಕ್ಕಿಂತ 22 ಪೈಸೆ ಏರಿಕೆಯ ಬಳಿಕ ಲೀಟರ್​ ಬೆಲೆ 99.71 ರೂಪಾಯಿ ಆಗಿದೆ. ಲೀಟರ್​ ಡೀಸೆಲ್​ ದರದಲ್ಲಿ 27 ಪೈಸೆ ಏರಿಕೆ ಕಂಡು ಬಂದಿದ್ದು ಲೀಟರ್​ ಡೀಸೆಲ್​ ದರ 91.57 ರೂಪಾಯಿಗೆ ಏರಿಕೆ ಆಗಿದೆ. ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ ಮಹಾರಾಷ್ಟ್ರ, ರಾಜಸ್ಥಾನದ ಕೆಲವು ಜಿಲ್ಲೆಗಳಲ್ಲಿ ಲೀಟರ್​ ಪೆಟ್ರೋಲ್​ ದರ ಈಗಾಗಲೇ ಶತಕ ಬಾರಿಸಿದೆ.

ಇನ್ನು, ಬೆಂಗಳೂರು ನಗರದಲ್ಲಿ ಲೀಟರ್​ ಪೆಟ್ರೋಲ್​ ದರ 96.55 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಲೀಟರ್​ ಡೀಸೆಲ್​ಅನ್ನು 89.39 ರೂಪಾಯಿಗೆ ಏರಿಕೆ ಮಾಡಲಾಗಿದೆ. ಸೋಮವಾರದ ದರಕ್ಕಿಂತ 22 ಪೈಸೆ ಹೆಚ್ಚಳವಾದ ಬಳಿಕ ಕೊಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 93.49 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಲೀಟರ್​ ಡೀಸೆಲ್​87.91 ರೂಪಾಯಿ ಆಗಿದೆ. ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ ದರ 95.06 ರೂಪಾಯಿ ಆಗಿದೆ. ಅದೇ ರೀತಿ ಲೀಟರ್​ ಡೀಸೆಲ್​ ದರ 89.11 ರೂಪಾಯಿಗೆ ಹೆಚ್ಚಳವಾಗಿದೆ.

ರಾಜಸ್ಥಾನದ ಶ್ರೀಗಂಗನಗರದಲ್ಲಿ ಲೀಟರ್​ ಪೆಟ್ರೋಲ್​ ದರ 104.42 ರೂಪಾಯಿ ಇದ್ದು, ಲೀಟರ್​ ಡೀಸೆಲ್​ ದರ 97.18 ರೂಪಾಯಿ ಇದೆ. ಭೂಪಾಲ್​ನಲ್ಲಿಯೂ ಲೀಟರ್​ ಪೆಟ್ರೋಲ್​ 100ರ ಗಡಿ ದಾಟಿದ್ದು, 101.52 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್ ಡೀಸೆಲ್​ ದರ 92.77 ರೂಪಾಯಿ ಇದೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Follow us on

Related Stories

Most Read Stories

Click on your DTH Provider to Add TV9 Kannada