AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೈರಸ್ ಎಲ್ಲಿಂದ ಹರಡಿತು? ಕೊವಿಡ್ ರೋಗದ ಸೋಂಕಿನ ಅರಿಯಲು ಸಿಐಎ ತನಿಖೆಗೆ ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ

ನಿರ್ದಿಷ್ಟವಾಗಿ ಇಂಥ ಸ್ಥಳದಿಂದಲೇ ವೈರಸ್ ಸೃಷ್ಟಿಯಾಗಿ ಇಡೀ ಜಗತ್ತಿಗೆ ಹರಡಿದೆ ಎಂದು ಹೇಳಲು ಅಂತಾರಾಷ್ಟ್ರೀಯ ತಜ್ಞರಿಗೆ ಈವರೆಗೆ ಸಾಧ್ಯವಾಗಿಲ್ಲ. ಬಾವಲಿಗಳಿಂದ ಬೇರೆ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ನೇಮಿಸಿದ್ದ ತಜ್ಞರ ಸಮಿತಿ ಹೇಳಿತ್ತು.

ಕೊರೊನಾ ವೈರಸ್ ಎಲ್ಲಿಂದ ಹರಡಿತು? ಕೊವಿಡ್ ರೋಗದ ಸೋಂಕಿನ ಅರಿಯಲು ಸಿಐಎ ತನಿಖೆಗೆ ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ
ಅಮೆರಿಕ ಅಧ್ಯಕ್ಷ ಜೊ ಬೈಡೆನ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 28, 2021 | 4:27 PM

ವಾಷಿಂಗ್​ಟನ್: ಕೊರೊನಾ ವೈರಸ್ ಮೂಲ ಯಾವುದು ಎಂಬುದು ಇನ್ನೂ ನಿಗೂಢ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಚೀನಾಗೆ ಭೇಟಿ ನೀಡಿ ಪರಿಶೀಲಿಸಿದರೂ, ವೈರಸ್ ಮೂಲದ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ. ಈಗ ಆಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್ ಅವರೇ ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಆಮೆರಿಕಾದ ಗುಪ್ತಚರ ಸಂಸ್ಥೆ ಸಿಐಎಗೆ ಈ ಆದೇಶ ನೀಡಿದ್ದಾರೆ.

ಕೊರೊನಾ ವೈರಸ್ ವಿಶ್ವಕ್ಕೆಲ್ಲಾ ಹರಡಿ ಒಂದೂವರೆ ವರ್ಷ ಕಳೆದಿದೆ. ಆದರೆ, ಕೊರೊನಾ ವೈರಸ್ ಯಾವ ಮೂಲದಿಂದ ಸೃಷ್ಟಿಯಾಗಿ ಜಗತ್ತಿಗೆ ಹರಡಿತು ಎನ್ನುವುದು ಮಾತ್ರ ಈವರೆಗೂ ಸ್ಪಷ್ಟವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಿಂದ ನೇಮಕವಾದ ಅಂತಾರಾಷ್ಟ್ರೀಯ ತಜ್ಞರ ಸಮಿತಿಯು ಚೀನಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತನ್ನ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದೆ. ಆದರೇ ನಿರ್ದಿಷ್ಟವಾಗಿ ಇಲ್ಲಿಂದಲೇ ವೈರಸ್ ಸೃಷ್ಟಿಯಾಗಿ ಇಡೀ ಜಗತ್ತಿಗೆ ಹರಡಿದೆ ಎಂದು ಹೇಳಲು ಅಂತಾರಾಷ್ಟ್ರೀಯ ತಜ್ಞರಿಗೆ ಈವರೆಗೆ ಸಾಧ್ಯವಾಗಿಲ್ಲ. ಬಾವಲಿಗಳಿಂದ ಬೇರೆ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ನೇಮಿಸಿದ್ದ ತಜ್ಞರ ಸಮಿತಿ ಹೇಳಿತ್ತು.

ವುಹಾನ್​ನ ವೈರಸ್ ಲ್ಯಾಬೋರೇಟರಿಯಿಂದ ಕೊರೊನಾ ವೈರಸ್ ಸೋರಿಕೆಯಾಗಿರುವ ಸಾಧ್ಯತೆ ಕಡಿಮೆ ಎಂದು ಅಂತಾರಾಷ್ಟ್ರೀಯ ತಜ್ಞರ ಸಮಿತಿ ಹೇಳಿತ್ತು. ಜನವರಿ-ಫೆಬ್ರುವರಿ ತಿಂಗಳಿನಲ್ಲಿ 4 ವಾರಗಳ ಕಾಲ ಚೀನಾದಲ್ಲೇ ಇದ್ದು, ವುಹಾನ್ ಸೇರಿದಂತೆ ಬೇರೆಬೇರೆ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಈ ವರದಿಯನ್ನು ತಜ್ಞರ ಸಮಿತಿ ನೀಡಿತ್ತು.

ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಎಲ್ಲಿಂದ ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ. ಕೊರೊನಾ ಸೃಷ್ಟಿಗೆ ಎರಡು ಸಾಧ್ಯತೆಗಳಿವೆ. ಮೊದಲನೆಯದಾಗಿ ಕೊರೊನಾ ವೈರಸ್ ಈಗಾಗಲೇ ತಗುಲಿದ್ದ ಪ್ರಾಣಿಯಿಂದ ಅದು ಮನುಷ್ಯರಿಗೆ ಬಂದಿರಬಹುದು. ಎರಡನೆಯದಾಗಿ ಚೀನಾದ ವುಹಾನ್ ಲ್ಯಾಬೋರೇಟರಿಯಲ್ಲಿ ಕೊರೊನಾ ವೈರಸ್ ಪರೀಕ್ಷೆ ವೇಳೆ ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ ಸೋರಿಕೆಯಾಗಿ ವಿಶ್ವಕ್ಕೆ ಹರಡಿರಬಹುದು. ಕೊರೊನಾ ವೈರಸ್ ಸೃಷ್ಟಿಯಾಗಿ ಹರಡಿದ್ದರ ಬಗ್ಗೆ ಈ ಎರಡು ಸಾಧ್ಯತೆಗಳ ಬಗ್ಗೆ ಕಳೆದ ವರ್ಷದಿಂದ ಚರ್ಚೆಯಾಗುತ್ತಿದೆ.

ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಹೇಗೆ ಹರಡಿತು ಎನ್ನುವುದು ಅಲ್ಲಿನ ವಿಜ್ಞಾನಿಗಳು ಹಾಗೂ ಸರ್ಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಆದರೆ, ತಮಗೆ ಗೊತ್ತಿರುವ ಸತ್ಯವನ್ನು ಜಗತ್ತಿನ ಎದುರು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ. ಕೊರೊನಾ ವೈರಸ್ ಚೀನಾ ದೇಶದಲ್ಲೇ ಮೊದಲು ಸೃಷ್ಟಿಯಾಗಿದ್ದರೂ, ಚೀನೀ ವೈರಸ್ ಎಂದು ಕರೆಯಬೇಡಿ ಅಂತ ಆಮೆರಿಕಾದ ಅಧ್ಯಕ್ಷರಿಗೆ ಹೇಳಿದೆ. ಈಗಲೂ ಚೀನಾ ದೇಶದ್ದು ಅದೇ ನಿಲುವು. ಕೊಕೊನಾ ವೈರಸ್ ಮೂಲದ ಬಗ್ಗೆ ಚೀನಾ ದೇಶವೇ ಇಷ್ಟೊತ್ತಿಗೆ ತನಿಖೆ ನಡೆಸಿ ಸತ್ಯವನ್ನು ಜಗತ್ತಿಗೆ ಹೇಳಿದ್ದರೆ, ಒಳ್ಳೆಯದಿತ್ತು. ಆದರೆ, ಚೀನಾ ಸತ್ಯವನ್ನು ಜಗತ್ತಿನ ಎದುರು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರುತ್ತಿಲ್ಲ.

ಈಗ ವಿಶ್ವದ ಪ್ರಭಾವಿ ದೇಶ ಆಮೆರಿಕದ ಅಧ್ಯಕ್ಷ ಜೋಸೆಫ್ ಬೈಡೆನ್, ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಹೇಗೆ? ವೈರಸ್ ಮೂಲ ಯಾವುದು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಆಮೆರಿಕಾದ ಗುಪ್ತಚರ ಸಂಸ್ಥೆ ಸಿಐಎಗೆ ಸೂಚನೆ ನೀಡಿದ್ದಾರೆ. ಸಿಐಎ, ವುಹಾನ್ ಲ್ಯಾಬೋರೇಟರಿಯಿಂದ ವೈರಸ್ ಸೋರಿಕೆಯಾಗಿದೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಿದೆ.

‘ಎರಡು ಪಟ್ಟು ಶ್ರಮ ವಹಿಸಿ ಕೊರೊನಾ ವೈರಸ್ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಿ, ವಿಶ್ಲೇಷಣೆ ನಡೆಸಿ ಅಂತಿಮ ತೀರ್ಮಾನದ ಹತ್ತಿರಕ್ಕೆ ಬರುವಂತೆ ಗುಪ್ತಚರ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. 90 ದಿನಗಳಲ್ಲಿ ವೈರಸ್ ಮೂಲದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ’ ಎಂದು ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಬುಧವಾರ ಹೇಳಿದ್ದಾರೆ. ಅಗತ್ಯವಿರುವ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಿ. ಚೀನಾಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿ, ನನಗೆ ವರದಿ ಕೊಡಿ ಎಂದು ಜೋ ಬೈಡೆನ್ ಹೇಳಿದ್ದಾರೆ.

ಈ ವಾರದ ಪ್ರಾರಂಭದಲ್ಲಿ ಸಲ್ಲಿಕೆಯಾಗಿರುವ ಆಮೆರಿಕಾದ ಗುಪ್ತಚರ ಸಂಸ್ಥೆಯ ವರದಿ ಪ್ರಕಾರ, ವುಹಾನ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿಯ ಮೂವರು ಸಂಶೋಧಕರು 2019ರ ನವೆಂಬರ್​ನಲ್ಲಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ಮೂವರು ಸಂಶೋಧಕರಿಗೆ ಅನಾರೋಗ್ಯದ ಯಾವ ಲಕ್ಷಣಗಳು ಇದ್ದವು ಎಂದು ಆಮೆರಿಕಾದ ಗುಪ್ತಚರ ಸಂಸ್ಥೆ ವರದಿ ಸ್ಪಷ್ಟವಾಗಿ ಹೇಳಿಲ್ಲ.

ಆದರೆ, ಅಂತಾರಾಷ್ಟ್ರೀಯ ತಜ್ಞರ ಸಮಿತಿಯ ತನಿಖೆಗೂ ಚೀನಾ ಸರಿಯಾದ ಸಹಕಾರ ಕೊಟ್ಟಿರಲಿಲ್ಲ. ಇದು ಆಮೆರಿಕಾದ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾ ದೇಶವು ವಿಶ್ವದ ಪ್ರಭಾವಿ ದೇಶಗಳ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಸೋರಿಕೆ ಮಾಡಿ, ಇಡೀ ವಿಶ್ವಕ್ಕೆ ಹರಡಿರಬಹುದು. ಪ್ರಭಾವಿ ದೇಶಗಳ ಜನರ ಜೀವ ಬಲಿ ಪಡೆಯುವುದರ ಜೊತೆಗೆ ಆರ್ಥಿಕ ಶಕ್ತಿ ವೃದ್ದಿಯಾಗದಂತೆ ತಡೆಯುವ ಹುನ್ನಾರವನ್ನು ಕೊರೊನಾ ವೈರಸ್ ಸೋರಿಕೆ ಮೂಲಕ ಚೀನಾ ಮಾಡಿದೆ ಎಂಬ ಅನುಮಾನ ಪ್ರಮುಖ ದೇಶಗಳಿಗೆ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯ ವೇಳೆಯೂ ಚೀನಾ ಪಾರದರ್ಶಕತೆಯನ್ನು ಕಾಪಾಡಿಕೊಂಡಿಲ್ಲ. ಹೀಗಾಗಿ ಚೀನಾದ ಲ್ಯಾಬ್ ತನಿಖೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಪುನರ್ ವಿಮರ್ಶೆ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ. ಅಂತಾರಾಷ್ಟ್ರೀಯ ತಜ್ಞರ ಸಮಿತಿಯಲ್ಲಿ ಚೀನಾದ ವಿಜ್ಞಾನಿಗಳನ್ನು ಕೂಡ ಸೇರ್ಪಡೆ ಮಾಡಲಾಗಿತ್ತು. ಹೀಗಾಗಿ ಮತ್ತೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ತಜ್ಞರು ಚೀನಾಗೆ ಹೋಗಿ ವೈರಸ್ ಮೂಲದ ಬಗ್ಗೆ ತನಿಖೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಸುದ್ದಿಸಂಸ್ಥೆಗಳ ಮೂಲಗಳಿಂದ ಲಭ್ಯವಾಗಿದೆ.

ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆಗೆ ಆದೇಶ ನೀಡುತ್ತಿದ್ದಂತೆ, ಚೀನಾ ಮತ್ತೆ ತನ್ನ ಹಳೆಯ ರಾಗವನ್ನೇ ಮುಂದುವರಿಸಿದೆ. ಕೊರೊನಾ ವೈರಸ್ ಮೂಲದ ಬಗ್ಗೆ ರಾಜಕೀಯ ಮಾಡುವುದು ತನಿಖೆಗೆ ಅಡ್ಡಿ ಉಂಟು ಮಾಡುತ್ತೆ ಎಂದು ಆಮೆರಿಕಾದಲ್ಲಿರುವ ಚೀನಾದ ರಾಯಭಾರ ಕಚೇರಿ ಹೇಳಿದೆ. ವಿಶ್ವದಲ್ಲಿ ಕೊರೊನಾ ವೈರಸ್ ಪ್ರಾರಂಭದಲ್ಲಿ ಪತ್ತೆಯಾದ ಮೂಲದ ಬಗ್ಗೆ ಸಮಗ್ರ ತನಿಖೆಗೆ ಚೀನಾ ಬೆಂಬಲಿಸುತ್ತೆ. ವಿಶ್ವದ ಎಲ್ಲ ಕಡೆ ಇರುವ ಬಯೋಲಾಜಿಕಲ್ ಲ್ಯಾಬೋರೇಟರಿ ಮತ್ತು ರಹಸ್ಯ ಸ್ಥಳಗಳ ಬಗ್ಗೆ ಸಂಪೂರ್ಣವಾದ ತನಿಖೆ ಆಗಬೇಕು ಎಂದು ಚೀನಾ ರಾಯಭಾರ ಕಚೇರಿ ಹೇಳಿದೆ.

2019ರ ಡಿಸೆಂಬರ್ ಹಾಗೂ ಅದಕ್ಕೂ ಮೊದಲೇ ಚೀನಾದ ವುಹಾನ್​ನಲ್ಲಿ ಮೊದಲಿಗೆ ಕೊರೊನಾ ವೈರಸ್ ಪತ್ತೆಯಾಯಿತು. ಇದುವರೆಗೂ ಭಾರತದಲ್ಲೂ ಮೂರು ಲಕ್ಷಕ್ಕೂ ಅಧಿಕ ಜನರು ಸೇರಿದಂತೆ, ವಿಶ್ವದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದು ಸಾವಿನ ಅಂಕಿಅಂಶದ ಅಧಿಕೃತ ದಾಖಲೆಗಳು, ಆದರೆ ಲೆಕ್ಕಕ್ಕೇ ಸೇರ್ಪಡೆಯಾಗದೇ ಲಕ್ಷಾಂತರ ಜನರು ಸಾವನ್ನಪ್ಪಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

(President of America Joe Biden Orders Probe from CIA about Coronavirus Origin)

ಇದನ್ನೂ ಓದಿ: ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ

ಇದನ್ನೂ ಓದಿ: ಮೊದಲ ಮಾಧ್ಯಮ ಗೋಷ್ಠಿಯಲ್ಲಿ ತಮ್ಮನ್ನೇ ತಾವು ಹೊಗಳಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

Published On - 4:26 pm, Fri, 28 May 21

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ