ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ

ಕೊರೊನಾದಿಂದ ನಮ್ಮ ಅಮೆರಿಕಾ ನರಳಿತ್ತು. ಆದರೆ ಆರೋಗ್ಯಾಧಿಕಾರಿಗಳ ಅದ್ಭುತ ಕೆಲಸದಿಂದ ಜನರ ಸಹಕಾರದಿಂದ ಸೋಂಕನ್ನು ನಿಯಂತ್ರಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಾಗಾಗಿ ಎರಡು ಬಾರಿಯೂ ಚುಚ್ಚು ಮದ್ದು ಹಾಕಿಸಿಕೊಂಡವರು ಇನ್ಮುಂದೆ ಒಬ್ಬರೇ ಇದ್ದಾಗ ಮಾಸ್ಕ್​ ಹಾಕಿಕೊಳ್ಳುವುದು ಬೇಡ ಎಂದು ಅಧ್ಯಕ್ಷ ಜೋ ಬೈಡೆನ್ ಸಾರಿದ್ದಾರೆ.

ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ
ಜೊ ಬೈಡನ್​
sadhu srinath

|

Apr 28, 2021 | 10:51 AM

ದೆಹಲಿ: ಅಮೆರಿಕದಲ್ಲಿ ಉಲ್ಬಣಗೊಂಡಿದ್ದ ಕೊರೊನಾ ಸೋಂಕು ಕಾಟ ತಹಬಂದಿಗೆ ಬಂದಿದೆಯಾ? ಏಂಕೆಂದರೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ದಿಢೀರನೆ ಆದೇಶವೊಂದನ್ನು ಹೊರಡಿಸಿದ್ದು, ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಾಗಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಸಾಂಕ್ರಾಮಿಕ ರೋಗ ತಡೆ ಇಲಾಖೆ ಶಿಫಾರಸು ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ. ಹೊರಗೆ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್​ ಧರಿಸದಿದ್ದರೂ ರವಾಗಿಲ್ಲ. ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಖಂಡಿತವಾಗಿಯೂ ಧರಿಸಿ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಗಮನಾರ್ಹವೆಂದ್ರೆ ಅಮೆರಿಕದಲ್ಲಿ ಪ್ರತಿಯೊಬ್ಬ ವಯಸ್ಕರರಿಗೂ ವ್ಯಾಕ್ಸಿನೇಶನ್​ ಹಾಕಲಾಗಿದೆ. ಇದುವರೆಗೂ 95 ದಶಲಕ್ಷ ಅಮೆರಿಕನ್ನರಿಗೆ ಕೊರೊನಾ ಚುಚ್ಚುಮದ್ದು ಹಾಕಲಾಗಿದೆ ಎಂದು ಸಾಂಕ್ರಾಮಿಕ ರೋಗ ತಡೆ ಇಲಾಖೆ (Centers for Disease Control and Prevention-CDC) ತಿಳಿಸಿದೆ.

ಈ ಹಿಂದೆ ಕೊರೊನಾದಿಂದ ನಮ್ಮ ಅಮೆರಿಕಾ ನರಳಿತ್ತು. ಆದರೆ ಆರೋಗ್ಯಾಧಿಕಾರಿಗಳ ಅದ್ಭುತ ಕೆಲಸದಿಂದ ಜನರ ಸಹಕಾರದಿಂದ ಸೋಂಕನ್ನು ನಿಯಂತ್ರಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಾಗಾಗಿ ಎರಡು ಬಾರಿಯೂ ಚುಚ್ಚು ಮದ್ದು ಹಾಕಿಸಿಕೊಂಡವರು ಇನ್ಮುಂದೆ ಒಬ್ಬರೇ ಇದ್ದಾಗ ಮಾಸ್ಕ್​ ಹಾಕಿಕೊಳ್ಳುವುದು ಬೇಡ ಎಂದು ಅಧ್ಯಕ್ಷ ಜೋ ಬೈಡೆನ್ ಸಾರಿದ್ದಾರೆ.

(no need of mask to vaccinated people in usa says president Joe Biden)

Also Reed: ಮೇ 1ರಿಂದ 3ನೇ ಹಂತದ ಲಸಿಕೆ ವಿತರಣೆ; ನೀವೂ 18 ವರ್ಷ ಮೇಲ್ಪಟ್ಟವರಾಗಿದ್ದರೆ ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಿ.. ಇಲ್ಲಿದೆ ನೋಡಿ ವಿಧಾನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada