ಮೇ 1ರಿಂದ 3ನೇ ಹಂತದ ಲಸಿಕೆ ವಿತರಣೆ; ನೀವೂ 18 ವರ್ಷ ಮೇಲ್ಪಟ್ಟವರಾಗಿದ್ದರೆ ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಿ.. ಇಲ್ಲಿದೆ ನೋಡಿ ವಿಧಾನ

Covid Vaccination: ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಲಸಿಕೆ ವಿತರಣೆಯನ್ನು ತೀವ್ರಗೊಳಿಸಲು ಮುಂದಾಗಿದೆ. ಮೂರನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಹೇಳಿಕೊಂಡಿದೆ.

ಮೇ 1ರಿಂದ 3ನೇ ಹಂತದ ಲಸಿಕೆ ವಿತರಣೆ; ನೀವೂ 18 ವರ್ಷ ಮೇಲ್ಪಟ್ಟವರಾಗಿದ್ದರೆ ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಿ.. ಇಲ್ಲಿದೆ ನೋಡಿ ವಿಧಾನ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Follow us
Lakshmi Hegde
| Updated By: ರಶ್ಮಿ ಕಲ್ಲಕಟ್ಟ

Updated on:Apr 28, 2021 | 2:51 PM

ದೇಶದಲ್ಲಿ ಕೊರೊನಾ ವೈರಸ್ ಮಿತಿಮೀರುತ್ತಿರುವುದರಿಂದ ಮೇ 1ರಿಂದ 18-45ವರ್ಷ ವಯಸ್ಸಿನ ಎಲ್ಲರಿಗೂ ಕೊವಿಡ್ 19 ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂತೆಯೇ ಮೇ 1 ರಿಂದ ಮೂರನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದ್ದು, ಅದಕ್ಕೆ ಸಂಬಂಧಪಟ್ಟಂತೆ ಜನರು ಲಸಿಕೆ ಪಡೆಯಲು ಮಾಡಿಕೊಳ್ಳಬೇಕಾದ ನೋಂದಣಿ ಕಾರ್ಯ ಇಂದು ಸಂಜೆ 4 ಗಂಟೆಯಿಂದ ಶುರುವಾಗಲಿದೆ.

18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಿರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾಗಿ ಮೇ 1ರಿಂದ ಕೊವಿಡ್​ ಲಸಿಕೆ ಪಡೆಯುವ ಫಲಾನುಭವಿಗಳು ಇಂದಿನಿಂದಲೇ ಕೊವಿನ್​ (Co-Win) ಆ್ಯಪ್​​ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕು.

ಕೊವಿನ್ ಆ್ಯಪ್ ಹಾಗೂ ಆರೋಗ್ಯ ಸೇತು ಆ್ಯಪ್​ ಎರಡೂ ಕಡೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಇಂದು ಸಂಜೆಯಿಂದ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. cowin.gov.in ವೆಬ್​​ಸೈಟ್ ಮೂಲಕ ಕೊವಿನ್​ ಪೋರ್ಟಲ್​​ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ..

1. ಮೊದಲು https://www.cowin.gov.in/home ವೆಬ್​ಸೈಟ್​ಗೆ ಹೋಗಿ.

2. ವೆಬ್​ಸೈಟ್​ನ ಬಲಭಾಗದಲ್ಲಿ ಮೇಲೆ ಸೈನ್​ ಇನ್​ ಯುವರ್​ಸೆಲ್ಫ್​ ಎಂದು ಇರುತ್ತದೆ. ಅಲ್ಲಿ ಕ್ಲಿಕ್​ ಮಾಡಿ ಮೊಬೈಲ್​ ನಂಬರ್ ಹಾಕಿ.

3.ನಂತರ ನಿಮಗೊಂದು ಒಟಿಪಿ ಬರುತ್ತದೆ. ಆ ಒಟಿಪಿ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಪೇಜ್​​ವೊಂದು ತೆರೆಯಲ್ಪಡುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ನೀವಿರುವ ಪ್ರದೇಶ, ಸಂಪೂರ್ಣ ವಿಳಾಸ, ಪಿನ್​ ಕೋಡ್​ಗಳನ್ನು ನಮೂದಿಸಬೇಕು.

4. ಇಷ್ಟಾದ ಬಳಿಕ ಅಲ್ಲಿ ನಿಮ್ಮ ಪ್ರದೇಶದ ಸುತ್ತಮುತ್ತ ಇರುವ ಆಸ್ಪತ್ರೆಗಳ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳ ಹೆಸರೂ ಬರಲಿದ್ದು, ಯಾವುದೇ ಆಸ್ಪತ್ರೆಯನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಮೊಬೈಲ್​ಗೆ ಮೆಸೇಜ್ ಬರಲಿದ್ದು, ಅದರಂತೆ ಹೋಗಿ ಲಸಿಕೆ ಪಡೆಯಬಹುದು.

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಲಸಿಕೆ ವಿತರಣೆಯನ್ನು ತೀವ್ರಗೊಳಿಸಲು ಮುಂದಾಗಿದೆ. ಮೂರನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಹೇಳಿಕೊಂಡಿದೆ. ಇಲ್ಲಿಯವರೆಗೆ ದೇಶದಲ್ಲಿ 24 ಕೋಟಿ ಡೋಸ್​ ಲಸಿಕೆ ನೀಡಿದ್ದಾರೆ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ

Explainer: ಭಾರತದ ಸಂಕಷ್ಟ ಕಾಲದಲ್ಲಿ ಕೈಹಿಡಿದ ದೇಶಗಳಿವು: ಯಾವ ದೇಶದಿಂದ ಏನು ನೆರವು? ಇಲ್ಲಿದೆ ಮಾಹಿತಿ

19 Vaccination registration start from today for all adults to know how to register check here

Published On - 8:25 am, Wed, 28 April 21