Explainer: ಭಾರತದ ಸಂಕಷ್ಟ ಕಾಲದಲ್ಲಿ ಕೈಹಿಡಿದ ದೇಶಗಳಿವು: ಯಾವ ದೇಶದಿಂದ ಏನು ನೆರವು? ಇಲ್ಲಿದೆ ಮಾಹಿತಿ

ಕಳೆದ ವರ್ಷದ ಕೊರೊನಾದ ಮೊದಲ ಅಲೆಯಲ್ಲಿ ಹೀಗೆ ವಿದೇಶಗಳಿಂದ ನೆರವು ಪಡೆಯುವ ಸ್ಥಿತಿ ಈ ಮಟ್ಟಿಗೆ ಎದುರಾಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬೇರೆಯಾಗಿದೆ. ಭಾರತದ ಪರಿಸ್ಥಿತಿ ಅರಿತುಕೊಂಡು ಹಲವು ದೇಶಗಳು ಸಹಾಯಹಸ್ತ ಚಾಚಿವೆ.

Explainer: ಭಾರತದ ಸಂಕಷ್ಟ ಕಾಲದಲ್ಲಿ ಕೈಹಿಡಿದ ದೇಶಗಳಿವು: ಯಾವ ದೇಶದಿಂದ ಏನು ನೆರವು? ಇಲ್ಲಿದೆ ಮಾಹಿತಿ
ಸಿಂಗಾಪುರದಿಂದ ಭಾರತಕ್ಕೆ ಬಂದ ಆಕ್ಸಿಜನ್ ಟ್ಯಾಂಕರ್‌ಗಳು
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಆಯೇಷಾ ಬಾನು

Updated on: Apr 28, 2021 | 7:08 AM

ಭಾರತದಲ್ಲಿ ಈಗ ಮೆಡಿಕಲ್ ಆಕ್ಸಿಜನ್, ವೆಂಟಿಲೇಟರ್, ಆಕ್ಸಿಜನ್ ಸಾಗಣೆ ಟ್ಯಾಂಕರ್​ಗಳ ಕೊರತೆ ಎದುರಾಗಿದೆ. ವಿಶ್ವದ ವಿವಿಧೆಡೆಗಳಿಂದ ಭಾರತಕ್ಕೆ ನೆರವು ಹರಿದು ಬರುತ್ತಿದೆ. ಆಮೆರಿಕ, ಇಂಗ್ಲೆಂಡ್​, ಜರ್ಮನ್, ಫ್ರಾನ್ಸ್​, ಬ್ಯಾಂಕಾಂಕ್ ಸೇರಿ ಹಲವು ದೇಶಗಳು ಭಾರತೀಯರಿಗೆ ನೆರವಾಗುತ್ತಿವೆ. ಎಲ್ಲೆಡೆಯಿಂದ ಈಗ ಭಾರತಕ್ಕೆ ನೆರವು ಹರಿದು ಬರುತ್ತಿದೆ. ಕಳೆದ ವರ್ಷದ ಕೊರೊನಾದ ಮೊದಲ ಅಲೆಯಲ್ಲಿ ಹೀಗೆ ವಿದೇಶಗಳಿಂದ ನೆರವು ಪಡೆಯುವ ಸ್ಥಿತಿ ಈ ಮಟ್ಟಿಗೆ ಎದುರಾಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬೇರೆಯಾಗಿದೆ. ಭಾರತದ ಪರಿಸ್ಥಿತಿ ಅರಿತುಕೊಂಡು ಹಲವು ದೇಶಗಳು ಸಹಾಯಹಸ್ತ ಚಾಚಿವೆ. ಯಾವ ದೇಶದಿಂದ ಏನು ನೆರವು ದೊರೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕೊರೊನಾದ ಎರಡನೇ ಅಲೆಯಲ್ಲಿ ತೀವ್ರ ಸಂಕಷ್ಟ ಎದುರಾಗಿದೆ. ರೋಗಿಗಳಿಗೆ ಮೆಡಿಕಲ್ ಆಕ್ಸಿಜನ್, ವೆಂಟಿಲೇಟರ್​ಗಳ ಕೊರತೆ ಎದುರಾಗಿದೆ. ನಿತ್ಯ 2 ಸಾವಿರಕ್ಕೂ ಹೆಚ್ಚಿನ ಕೊರೊನಾ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ನಿತ್ಯ 3 ಲಕ್ಷಕ್ಕೂ ಹೆಚ್ಚಿನ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತದ ಆರೋಗ್ಯ ಕ್ಷೇತ್ರವೇ ಕುಸಿದು ಬೀಳುತ್ತಿದೆ. ಈಗ ಭಾರತದ ನೆರವಿಗೆ ವಿಶ್ವದ ವಿವಿಧ ರಾಷ್ಟ್ರಗಳು ಮಾನವೀಯತೆಯಿಂದ ನೆರವಿನ ಹಸ್ತ ಚಾಚುತ್ತಿವೆ. ಇದುವರೆಗೂ ಭಾರತಕ್ಕೆ 14ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡುವುದಾಗಿ ಘೋಷಿಸಿವೆ. ಇಂಗ್ಲೆಂಡ್, ಪ್ರಾನ್ಸ್, ಐರ್ಲೆಂಡ್, ಜರ್ಮನ್, ಆಸ್ಟ್ರೇಲಿಯಾ, ಸಿಂಗಾಪೂರ್, ಸೌದಿ ಅರೇಬಿಯಾ, ಹಾಂಗ್​ಕಾಂಗ್, ಥಾಯ್ಲೆಂಡ್, ಯುಐಇ, ರಷ್ಯಾ, ಕುವೈತ್, ಆಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತಕ್ಕೆ ನೆರವಿನ ಹಸ್ತ ಚಾಚಿವೆ.

ಭಾರತಕ್ಕೆ ಇಂಗ್ಲೆಂಡ್ 495 ಆಕ್ಸಿಜನ್ ಕಾನ್​ಸೆಂಟ್ರೇಟರ್, 120 ವೆಂಟಿಲೇಟರ್​ಗಳನ್ನು ಈ ವಾರವೇ ಕಳಿಸುತ್ತಿದೆ. ಇವುಗಳ ಪೈಕಿ ಈಗಾಗಲೇ 100 ವೆಂಟಿಲೇಟರ್, 95 ಆಕ್ಸಿಜನ್ ಕನಸಂಟ್ರೇಟರ್ ಮಂಗಳವಾರವೇ ಭಾರತಕ್ಕೆ ಬಂದಿದೆ.

ಪ್ರಾನ್ಸ್ ಎರಡು ಹಂತದಲ್ಲಿ ಭಾರತಕ್ಕೆ ನೆರವು ಕಳಿಸುತ್ತಿದೆ. ಈ ವಾರ 8 ಆಕ್ಸಿಜನ್ ಜನರೇಟಿಂಗ್ ಪ್ಲಾಂಟ್​ಗಳನ್ನು ಕಳಿಸುತ್ತಿದೆ. ಇವುಗಳನ್ನು ತಕ್ಷಣವೇ ಆಳವಡಿಸಬಹುದು. ಜೊತೆಗೆ ಲಿಕ್ವಿಡ್ ಆಕ್ಸಿಜನ್ ಯೂನಿಟ್​ಗಳು, 28 ರೆಸ್ಪಿರೇಟರ್​ಗಳು, 200 ಎಲೆಕ್ಟ್ರಿಕ್ ಸೀರೆಂಜ್ ಪುಷರ್​ಗಳನ್ನು ಕಳಿಸುತ್ತಿದೆ. ಎರಡನೇ ಹಂತದಲ್ಲಿ ಮುಂದಿನ ವಾರ 5 ಲಿಕ್ವಿಡ್ ಆಕ್ಸಿಜನ್ ಕಂಟೇನರ್​ಗಳನ್ನು ಕಳಿಸುತ್ತಿದೆ. ಐರ್ಲೆಂಡ್ ದೇಶವು ಈ ವಾರವೇ 700 ಆಕ್ಸಿಜನ್ ಕನಸಂಟ್ರೇಟರ್​ಗಳನ್ನು ಕಳಿಸುತ್ತಿದೆ.

ಜರ್ಮನಿಯಿಂದ ಮೊಬೈಲ್ ಆಕ್ಸಿಜನ್ ಉತ್ಪಾದನಾ ಪ್ಲಾಂಟ್​ಗಳನ್ನು ಕಳಿಸಲಾಗುತ್ತಿದೆ. 120 ವೆಂಟಿಲೇಟರ್, 8 ಕೋಟಿ ಕೆಎನ್‌-95 ಮಾಸ್ಕ್​ಗಳನ್ನು ಭಾರತಕ್ಕೆ ಕಳಿಸಲಾಗುತ್ತಿದೆ. ಇನ್ನೂ ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಆಸ್ಟ್ರೇಲಿಯಾ ದೇಶವು ಮಂಗಳವಾರ 500 ವೆಂಟಿಲೇಟರ್, 10 ಲಕ್ಷ ಮಾಸ್ಕ್, ಐದು ಲಕ್ಷ ಪಿ2, ಎನ್‌-95 ಮಾಸ್ಕ್, ಒಂದು ಲಕ್ಷ ಸೋಂಕು ನಿರೋಧಕ ಕನ್ನಡಕಗಳು, ಒಂದು ಲಕ್ಷ ಗ್ಲೌಸ್, 20 ಸಾವಿರ ಫೇಸ್ ಶೀಲ್ಡ್ ಕಳಿಸುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್ ಹೇಳಿದ್ದಾರೆ.

ಕುವೈತ್ ಮತ್ತು ರಷ್ಯಾ ಭಾರತಕ್ಕೆ ಸಹಾಯ ಮಾಡುವ ಭರವಸೆ ನೀಡಿವೆ. ರಷ್ಯಾದಿಂದ ಭಾರತಕ್ಕೆ ಮೆಡಿಕಲ್ ಆಕ್ಸಿಜನ್ ಕಳಿಸುವ ಭರವಸೆ ನೀಡಲಾಗಿದೆ. ಸಿಂಗಾಪುರದಿಂದ 250 ಆಕ್ಸಿಜನ್ ಕನಸಂಟ್ರೇಟರ್, 4 ಕ್ರಯೋಜನಿಕ್ ಕಂಟೇನರ್, ಇತರೆ ಮೆಡಿಕಲ್ ಸಾಮಗ್ರಿ ಭಾರತಕ್ಕೆ ಬಂದಿದೆ. ಸೌದಿ ಅರೇಬಿಯಾದಿಂದ 80 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದಿದೆ. ಹಾಂಗ್​ಕಾಂಗ್​ನಿಂದ 800 ಆಕ್ಸಿಜನ್ ಕಾನ್​ಸಂಟ್ರೇಟರ್, ಥಾಯ್ಲೆಂಡ್​ನಿಂದ 4 ಕ್ರಯೋಜನಿಕ್ ಆಕ್ಸಿಜನ್ ಟ್ಯಾಂಕ್, ಯುಎಇಯಿಂದ 6 ಕ್ರಯೋಜನಿಕ್ ಆಕ್ಸಿಜನ್ ಕಂಟೇನರ್ ಭಾರತಕ್ಕೆ ಬಂದಿವೆ. ದುಬೈನಿಂದ 6 ಮೆಡಿಕಲ್ ಆಕ್ಸಿಜನ್ ಟ್ಯಾಂಕರ್​ಗಳನ್ನು ಭಾರತೀಯ ವಾಯುಪಡೆಯ ವಿಮಾನದಲ್ಲಿ ಏರ್​ಲಿಫ್ಟ್ ಮಾಡಲಾಗಿದೆ. ಜೊತೆಗೆ ಬ್ಯಾಂಕಾಂಕ್​ನಿಂದ 4 ಮೆಡಿಕಲ್ ಆಕ್ಸಿಜನ್ ಟ್ಯಾಂಕರ್​ಗಳನ್ನು ಏರ್​ಲಿಫ್ಟ್ ಮಾಡಿ ಭಾರತಕ್ಕೆ ತರಲಾಗಿದೆ. ವಿಶ್ವದ ದೊಡ್ಡಣ್ಣ ಆಮೆರಿಕ, ಈಗಾಗಲೇ ಭಾರತಕ್ಕೆ ಅಗತ್ಯವಿರುವ ವೈದ್ಯಕೀಯ ನೆರವು ನೀಡುವುದಾಗಿ ಘೋಷಿಸಿದೆ. ವೆಂಟಿಲೇಟರ್, ಲಸಿಕೆಯ ಕಚ್ಚಾವಸ್ತುಗಳು ಸೇರಿದಂತೆ ಎಲ್ಲವನ್ನೂ ನೀಡುವುದಾಗಿ ಆಮೆರಿಕ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಘೋಷಿಸಿದ್ದಾರೆ.

ಎಲ್ಲೆಡೆಯಿಂದ ಈಗ ಭಾರತಕ್ಕೆ ನೆರವು ಹರಿದು ಬರುತ್ತಿದೆ. ಕಳೆದ ವರ್ಷದ ಕೊರೊನಾದ ಮೊದಲ ಅಲೆಯಲ್ಲಿ ಹೀಗೆ ವಿದೇಶಗಳಿಂದ ನೆರವು ಪಡೆಯುವ ಸ್ಥಿತಿ ಈ ಮಟ್ಟಿಗೆ ಎದುರಾಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬೇರೆಯಾಗಿದೆ. ಭಾರತದಲ್ಲಿ ಮೆಡಿಕಲ್ ಆಕ್ಸಿಜನ್​ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಹೀಗಾಗಿ ವಿದೇಶಗಳಿಂದ ಆಕ್ಸಿಜನ್ ಟ್ಯಾಂಕರ್​ಗಳನ್ನು ತುರ್ತಾಗಿ ಏರ್​ಲಿಫ್ಟ್ ಮಾಡುವುದು ಅನಿವಾರ್ಯವಾಗಿದೆ. ಜೊತೆಗೆ ಭಾರತದ ಕಾರ್ಪೋರೇಟ್ ಕಂಪನಿಗಳು ಕೂಡ ಮೆಡಿಕಲ್ ಆಕ್ಸಿಜನ್ ಟ್ಯಾಂಕರ್​ಗಳನ್ನು ತಮ್ಮ ಸ್ವಂತ ಹಣದಲ್ಲಿ ಅಮದು ಮಾಡಿಕೊಂಡು ಜನರ ನೆರವಿಗೆ ಧಾವಿಸುತ್ತಿವೆ. ಸ್ಟೀಲ್ ಮತ್ತು ಕೈಗಾರಿಕಾ ಕಂಪನಿಗಳು ತಮ್ಮ ಮೆಡಿಕಲ್ ಆಕ್ಸಿಜನ್ ಅನ್ನು ಈಗ ಕೊರೊನಾ ರೋಗಿಗಳ ಚಿಕಿತ್ಸೆಗೆ ಪೂರೈಸುತ್ತಿವೆ.

(Covid Emergency list of nations helping India at its struggle to cope with corona pandemic spread)

ಇದನ್ನೂ ಓದಿ: ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್​ ಸಭೆ ಸಫಲ, ಭಾರತಕ್ಕೆ ನೆರವು ನೀಡಲು 135 ಸಿಇಓಗಳ ಒಪ್ಪಿಗೆ

ಇದನ್ನೂ ಓದಿ: ಭಾರತದಲ್ಲಿ ತೀವ್ರಗೊಂಡ ಕೊರೊನಾ ಬಿಕ್ಕಟ್ಟು; ಲಸಿಕೆಗೆ ಕಚ್ಚಾವಸ್ತು ನೀಡಲು ಅಮೆರಿಕ ಸಮ್ಮತಿ, ನೆರವಿಗೆ ಬಂದ ಬ್ರಿಟನ್-ಜರ್ಮನಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್