ರಾಜಣ್ಣ ಮಾಡಿರುವ ಹನಿ ಟ್ರ್ಯಾಪ್ ಆರೋಪ ಬಹಳ ಸೂಕ್ಷ್ಮ, ಆಫ್ ದಿ ಕಫ್ ಪ್ರತಿಕ್ರಿಯೆ ನೀಡಲ್ಲ: ಪರಮೇಶ್ವರ್
ಸಚಿವ ರಾಜಣ್ಣ ನಿನ್ನೆ ಸದನದಲ್ಲಿ ತಮ್ಮನ್ನು ಹನಿ ಟ್ರ್ಯಾಪಿಂಗ್ಗಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದ ಬಳಿಕ ಕೋಲಾಹಲ ಸೃಷ್ಟಿಯಾಯಿತು. ಪ್ರಕರಣದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಬೇಕೆಂದು ಬಿಜೆಪಿಯ ಶಾಸಕರು ಗಲಾಟೆ ಶುರುಮಾಡಿ ಸದನದ ಬಾವಿಗಿಳಿದು ಸ್ಪೀಕರ್ ಮೇಲೆ ಪೇಪರ್ಗಳನ್ನು ಎಸೆದ ಕಾರಣ 18 ಶಾಸಕರನ್ನು ಸಸ್ಪೆಂಡ್ ಮಾಡಲಾಯಿತು.
ಬೆಂಗಳೂರು, 22 ಮಾರ್ಚ್: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಸಹಕಾರ ಸಚಿ ಕೆಎನ್ ರಾಜಣ್ಣ (KN Rajanna) ಮಾಡಿರುವ ಹನಿ ಟ್ರ್ಯಾಪಿಂಗ್ ಅರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದು ಬಹಳ ಸೂಕ್ಷ್ಮ ವಿಷಯ ಅಗಿರುವುದರಿಂದ ಆಫ್ ದಿ ಕಫ್ ಉತ್ತರ ನೀಡಲು ಆಗಲ್ಲ ಎಂದು ಅವರು ಹೇಳಿದರು. ರಾಜಣ್ಣ ತನ್ನನ್ನು ಭೇಟಿಯಾಗಲಿರುವ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರ ನೀಡದ ಪರಮೇಶ್ವರ್ ಸರಸರ ಕಾರುಹತ್ತಿ ಅಲ್ಲಿಂದ ಹೊರಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಪರಮೇಶ್ವರ್ ಬಿಟ್ಟು ಎಲ್ಲರೂ ಭಾಗಿಯಾಗಿದ್ದರು: ಎಂಬಿ ಪಾಟೀಲ್