AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮಗೆ ಯಾವ ಒತ್ತಡ?’; ರನ್ಯಾ ರಾವ್ ಕೇಸ್​ನಲ್ಲಿ ಸಿಐಡಿ ತನಿಖೆ ಹಿಂಪಡೆದ ಬಗ್ಗೆ ಪರಮೇಶ್ವರ್ ಸ್ಪಷ್ಟನೆ

ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ಆದೇಶ ಮಾಡಿತ್ತು. ಆದೇಶ ನೀಡಿದ 24 ಗಂಟೆಯಲ್ಲಿ ಅದನ್ನು ಹಿಂಪಡೆಯಲಾಯಿತು. ಈ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿತ್ತು. ಈ ಬಗ್ಗೆ ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

‘ನಮಗೆ ಯಾವ ಒತ್ತಡ?’; ರನ್ಯಾ ರಾವ್ ಕೇಸ್​ನಲ್ಲಿ ಸಿಐಡಿ ತನಿಖೆ ಹಿಂಪಡೆದ ಬಗ್ಗೆ ಪರಮೇಶ್ವರ್ ಸ್ಪಷ್ಟನೆ
ರನ್ಯಾ-ಪರಮೇಶ್ವರ್
ರಾಜೇಶ್ ದುಗ್ಗುಮನೆ
|

Updated on:Mar 13, 2025 | 12:21 PM

Share

ನಟಿ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತರುವಾಗ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆ ಹಿಡಿಯಲಾಗಿದೆ. ರನ್ಯಾ ಅವರ ಪ್ರಕರಣದಲ್ಲಿ ಪೊಲೀಸ್ ಪ್ರೊಟೋಕಾಲ್ ಉಲ್ಲಂಘನೆ ಆಗಿದೆ ಎಂದು ವರದಿ ಆಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಇದನ್ನು 24 ಗಂಟೆಯಲ್ಲಿ ಹಿಂಪಡೆಯಲಾಗಿದೆ. ಈ ಬಗ್ಗೆ ರಾಜ್ಯ ಗೃಹಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. ಈ ಮೂಲಕ ಹಬ್ಬಿದ ವಂದತಿಗಳಿಗೆ ತೆರೆ ಎಳೆದಿದ್ದಾರೆ.

ಮಾಧ್ಯಮಗಳ ಎದುರು ಮಾತನಾಡಿದ ಪರಮೇಶ್ವರ್, ‘ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಅಷ್ಟರೊಳಗಾಗಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು’ ಎಂದು ಹೇಳಿದ್ದಾರೆ.

ಈ ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿ ಇದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಈ ಕಾರಣದಿಂದಲೇ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು ಮತ್ತು ಸರ್ಕಾರ ಸಿಐಡಿ ತನಿಖೆ ಆದೇಶವನ್ನು ಹಿಂದಕ್ಕೆ ಪಡೆಯಿತು ಎನ್ನುವ ಮಾತು ಕೇಳಿ ಬಂದಿದ್ದವು. ಈ ಬಗ್ಗೆಯೂ ಪರಮೇಶ್ವರ್ ಮಾತನಾಡಿದ್ದಾರೆ. ‘ತನಿಖೆಗೆ ಆದೇಶ ನೀಡಲೂ ಯಾರು ಒತ್ತಡ ಹೇರಿರಲಿಲ್ಲ. ಹಿಂದಕ್ಕೆ ಪಡೆಯಲೂ ಯಾರೂ ಒತ್ತಡ ಹೇರಿಲ್ಲ. ಎರಡು ತನಿಖೆ ಬೇಡ ಎಂಬ ಕಾರಣಕ್ಕೆ ನಾವು ಹಿಂಪಡೆದಿದ್ದೇವೆ ಅಷ್ಟೇ. ಇಲ್ಲಿ ಯಾವುದೇ ಗೊಂದಲ ಬೇಡ’ ಎಂದು ಪರಮೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ
Image
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
Image
ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ
Image
ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಕನ್ನಡ ಚಿತ್ರರಂಗದ ಹೆಮ್ಮೆ
Image
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು

ಪರಮೇಶ್ವರ್ ಅವರು ಈ ಮೊದಲು ರನ್ಯಾ ರಾವ್ ಮದುವೆಗೆ ಹೋಗಿದ್ದ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ  ಕೇಳಿದ್ದಕ್ಕೆ ಸಿಟ್ಟಾದ ಪರಮೇಶ್ವರ್, ‘ನಾವು ಸಾವಿರ ಮದುವೆಗೆ ಹೋಗ್ತಾ ಇರ್ತೀವಿ’ ಎಂದಷ್ಟೇ ಹೇಳಿದ್ದಾರೆ.

ಇದನ್ನೂ ಓದಿ: ನಟಿ ರನ್ಯಾ ರಾವ್​ ಕೇಸ್‌: ಸಿಐಡಿ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ, ಚರ್ಚೆಗೆ ಗ್ರಾಸ

ನಟಿ ರನ್ಯಾ ಚಿನ್ನ ಸಾಗಾಟ ಮಾಡುವಾಗ ಮಲತಂದೆ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರು. ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು? ಕೇಸ್​​ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ ಎಂಬ ಬಗ್ಗೆ ತನಿಖೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:55 am, Thu, 13 March 25

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ