‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ
‘ಅಪ್ಪು’ 100ನೇ ದಿನದ ಸಂಭ್ರಮಾಚರಣೆ ವೇಳೆ ಪುನೀತ್ ರಾಜ್ಕುಮಾರ್ ಅವರು ರಜನಿಕಾಂತ್ ಅವರ ಆಶೀರ್ವಾದ ಪಡೆದಿದ್ದರು. ವೇದಿಕೆ ಮೇಲೆ ರಾಘವೇಂದ್ರ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ಡ್ಯಾನ್ಸ್ ಮಾಡಿದ್ದರು. ‘ಎಲ್ಲರಿಗೂ ನಮಸ್ಕಾರ. ಕಾರ್ಯಕ್ರಮವನ್ನು ಇಷ್ಟು ಅದ್ದೂರಿಯಾಗಿ ಆಚರಿಸಿದ್ದಕ್ಕೆ ಧನ್ಯವಾದ’ ಎಂದಿದ್ದರು ರಾಜ್ಕುಮಾರ್.

ಪುನೀತ್ ರಾಜ್ಕುಮಾರ್ ನಮ್ಮ ಜೊತೆ ಇಲ್ಲ. ಆದರೆ, ಅವರು ಮಾಡಿದ ಸಿನಿಮಾಗಳು, ಅವರ ನಗು ಎಂದಿಗೂ ಮಾಸುವುದಿಲ್ಲ. ಈಗ ಅವರ ಜನ್ಮದಿನ (ಮಾರ್ಚ್ 17) ಸಮೀಪಿಸಿದೆ. ಈ ಕಾರಣಕ್ಕೆ ಶುಕ್ರವಾರ (ಮಾರ್ಚ್ 14) ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಪುನೀತ್ (Puneeth Rajkumar) ಹೀರೋ ಆಗಿ ನಟಿಸಿದ ಈ ಚಿತ್ರ ಶತದಿನೋತ್ಸವವನ್ನು ಆಚರಿಸಿಕೊಂಡಿತ್ತು. ಪುನೀತ್ ಅವರು ಜನರಿಗೆ ಮತ್ತಷ್ಟು ಹತ್ತಿರ ಆಗಿದ್ದು ಇದೇ ಸಿನಿಮಾದಿಂದ. ಈ ಚಿತ್ರದ 100ನೇ ದಿನದ ಸಂಭ್ರಾಚರಣೆಯ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋನ ಅಶ್ವಿನಿ ಪುನೀತ್ ರಾಜ್ಕುಮಾರ್ ಹಂಚಿಕೊಂಡಿದ್ದಾರೆ.
2002ರ ಏಪ್ರಿಲ್ 26ರಂದು ‘ಅಪ್ಪು’ ಸಿನಿಮಾ ರಿಲೀಸ್ ಆಯಿತು. ಪುರಿ ಜಗನ್ನಾಥ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್ಕುಮಾರ್ ಅವರೇ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಆಗಿನ ಕಾಲದಲ್ಲಿ 200 ದಿನ ಪ್ರದರ್ಶನ ಕಂಡಿತ್ತು. ಈ ಚಿತ್ರ ತೆಲುಗು, ತಮಿಳು, ಬೆಂಗಾಲಿ ಭಾಷೆಗೆ ರಿಮೇಕ್ ಆಯಿತು. ಈ ಚಿತ್ರದ ನೂರು ದಿನದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
View this post on Instagram
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಶತದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪುನೀತ್ ಶಕ್ತಿ ಎಂಥದ್ದು ಎಂದು ರಜನಿಕಾಂತ್ ಆಗಲೇ ಗುರುತಿಸಿದ್ದರು. ‘ಅಪ್ಪು ಚಿತ್ರದ ಶತಮಾನೋತ್ಸವ ಕಾರ್ಯಕ್ರಮ. ಇದು ಸಿಹಂದ ಮರಿ. ಈಗತಾನೇ ಗೆದ್ದಿದೆ, ಘರ್ಜಿಸೋಕೆ ಆರಂಭಿಸಿದೆ. ಈ ಸಿಂಹದ ಮರಿ ಇನ್ನು ಏನೇನೋ ಮಾಡುತ್ತೆ ಎಂದು ನನಗೆ ಅನಿಸುತ್ತಾ ಇದೆ’ ಎಂದು ರಜನಿಕಾಂತ್ ಹೇಳಿದ್ದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ
ಪುನೀತ್ ರಾಜ್ಕುಮಾರ್ ಅವರು ರಜನಿಕಾಂತ್ ಅವರ ಆಶೀರ್ವಾದ ಪಡೆದರು. ವೇದಿಕೆ ಮೇಲೆ ರಾಘವೇಂದ್ರ ರಾಜ್ಕುಮಾರ್, ಶಿವಕುಮಾರ್ ಹಾಗೂ ಪುನೀತ್ ಡ್ಯಾನ್ಸ್ ಮಾಡಿದ್ದರು. ‘ಎಲ್ಲರಿಗೂ ನಮಸ್ಕಾರ. ಕಾರ್ಯಕ್ರಮವನ್ನು ಇಷ್ಟು ಅದ್ದೂರಿಯಾಗಿ ಆಚರಿಸಿದ್ದಕ್ಕೆ ಧನ್ಯವಾದ’ ಎಂದಿದ್ದರು ರಾಜ್ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Thu, 13 March 25