ಸುಮಲತಾ-ದರ್ಶನ್ ಮಧ್ಯೆ ಬಿರುಕು? ಈ ಬೆಳವಣಿಗೆ ನೋಡಿದ್ರೆ ನೀವೂ ಒಪ್ತೀರಿ
ಸುಮಲತಾ ಅಂಬರೀಷ್ ಮತ್ತು ದರ್ಶನ್ ಅವರ ನಿಕಟ ಸಂಬಂಧದ ಬಗ್ಗೆ ಈಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದರ್ಶನ್ ಅವರು ಸುಮಲತಾ ಮತ್ತು ಅವರ ಕುಟುಂಬದ ಸದಸ್ಯರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲವಾದರೂ, ಸುಮಲತಾ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಈ ವಿಚಾರಕ್ಕೆ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಸುಮಲತಾ ಅಂಬರೀಷ್ ಹಾಗೂ ದರ್ಶನ್ (Darshan) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ದರ್ಶನ್ನ ಮಗ ಎಂದು ಸುಮಲತಾ ಪರಿಗಣಿಸಿದ್ದರು. ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ‘ಅವನು ಯಾವಾಗಲೂ ನನ್ನ ಮಗ’ ಎಂದಿದ್ದರು. ಆದರೆ, ಇತ್ತೀಚಿಗಿನ ಬೆಳವಣಿಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇಬ್ಬರ ಮಧ್ಯೆ ಯಾವುದೂ ಸರಿ ಇಲ್ಲವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ.
ಅನ್ಫಾಲೋ ಮಾಡಿದ ದರ್ಶನ್
ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಆದರೆ, ಈಗ ಅವರು ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಅವರು ಯಾರನ್ನು ಫಾಲೋ ಮಾಡದೇ ಇರೋದು ಹಲವು ಪ್ರಶ್ನೆ ಹುಟ್ಟಿ ಹಾಕಿದೆ .
ಮೂಡಿದ ಅನುಮಾನ
ದರ್ಶನ್ ಜೈಲಿನಲ್ಲಿ ಇದ್ದಾಗ ಸುಮಲತಾ ಅವರು ಅವರನ್ನು ನೋಡಲು ಹೋಗಿಲ್ಲ. ರಾಜಕೀಯ ಕಾರಣಗಳಿಂದ ಅವರು ಹೀಗೆ ಮಾಡದೆ ಇರಬಹುದು. ಇದು ದರ್ಶನ್ ಮನಸ್ಸಿಗೆ ನಾಟಿದೆಯೇ ಎನ್ನುವ ಪ್ರಶ್ನೆ ಉಂಟುಮಾಡಿದೆ. ಸುಮಲತಾ ತಮ್ಮನ್ನು ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ವೈಮನಸ್ಸು ಮೂಡಿತೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಸುಮಲತಾ ಪೋಸ್ಟ್
ದರ್ಶನ್ ಅನ್ಫಾಲೋ ಮಾಡಿದ ವಿಚಾರ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಸುಮಲತಾ ಅವರು ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಂಗ್ಲಿಷ್ ಲೈನ್ಗಳನ್ನು ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ಗೆ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ನ ಅರ್ಥ ಈ ರೀತಿಯಲ್ಲಿ ಇದೆ. ‘ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತದೆ ಎಂದರೆ.. ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದಾಗ್ಯೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ’ ಎಂದು ಸುಮಲತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ಡಿ ಬಾಸ್
ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಇಲ್ಲಿ ಯಾವುದೂ ನೇರವಾಗಿಲ್ಲ. ಆದರೆ, ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಅನುಮಾನ ಹುಟ್ಟುಹಾಕಿರುವುದಂತೂ ಸತ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Wed, 12 March 25