‘ಡೆವಿಲ್’ ಶೂಟ್ಗೆ ದರ್ಶನ್ ಎಂಟ್ರಿ; ಭದ್ರತೆಗೆ ತಂಡ ಖರ್ಚು ಮಾಡುತ್ತಿದೆ ಭಾರೀ ಮೊತ್ತ
ನಟ ದರ್ಶನ್ ಅವರ ‘ಡೆವಿಲ್’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಪುನರಾರಂಭಗೊಂಡಿದೆ. ಮಾರ್ಚ್ 12 ರಿಂದ 15 ರವರೆಗೆ ನಡೆಯುವ ಚಿತ್ರೀಕರಣಕ್ಕೆ ಭಾರೀ ಭದ್ರತೆ ಒದಗಿಸಲಾಗಿದ್ದು, ತಂಡ ಸಾಕಷ್ಟು ಖರ್ಚು ಮಾಡುತ್ತಿದೆ. ಚಿತ್ರೀಕರಣದ ಸ್ಥಳಗಳು ಸರ್ಕಾರಿ ಅತಿಥಿಗೃಹ ಮತ್ತು ಲಲಿತಮಹಲ್ ಎಂದು ತಿಳಿದು ಬಂದಿದೆ.

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ (Devil Movie) ಶೂಟಿಂಗ್ ಇಷ್ಟು ದಿನ ಅರ್ಧಕ್ಕೆ ನಿಂತು ಹೋಗಿತ್ತು. ಈಗ ದರ್ಶನ್ ಅವರು ಮತ್ತೆ ಶೂಟಿಂಗ್ಗೆ ಮರಳುತ್ತಿರುವುದರಿಂದ ಚಿತ್ರೀಕರಣ ಪುನರಾರಂಣ ಆಗುತ್ತಿದೆ. ಈ ವಿಚಾರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಮೈಸೂರಿನಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಭದ್ರತೆಗಾಗಿ ತಂಡದವರು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದಾರೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ಇದೆ.
ದರ್ಶನ್ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ಬಂಧನಕ್ಕೆ ಒಳಗಾದರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಎ2 ಆರೋಪಿ ಆಗಿದ್ದಾರೆ. ಅವರು ಆ ಸಂದರ್ಭದಲ್ಲಿ ಮೈಸೂರಿನಲ್ಲಿ ಇದ್ದರು. ಅವರನ್ನು ಹೋಟೆಲ್ನಲ್ಲಿಯೇ ಬಂಧಿಸಲಾಯಿತು. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್ ಮತ್ತೆ ಮೈಸೂರಿನಲ್ಲೇ ಅರಂಭ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸದ್ದಿಲ್ಲದೆ ಆರಂಭ ಆಯ್ತು ‘ಡೆವಿಲ್’ ಸಿನಿಮಾ ಶೂಟ್; ದರ್ಶನ್ ಎಂಟ್ರಿಗೂ ಸಮಯ ನಿಗದಿ
ಮಾರ್ಚ್ 12ರಿಂದ 15ರವರೆಗೆ ಮೈಸೂರಿನಲ್ಲಿ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ.12 ರಿಂದ ಮಾ.14 ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ‘ಡೆವಿಲ್’ ತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದೆ. ಮಾ.15 ರಂದು ಲಲಿತಮಹಲ್ ಪ್ಯಾಲೆಸ್ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಚಿತ್ರೀಕರಣ ನಡೆಯಲಿದೆ.
ದೊಡ್ಡ ಮೊತ್ತ
ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ತಂಡದವರು 1.64 ಲಕ್ಷ ರೂಪಾಯಿಯನ್ನು ಪಾವತಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಂಡದ ಬಗ್ಗೆ
ಮಿಲನಾ ಪ್ರಕಾಶ್ ‘ದಿ ಡೆವಿಲ್’ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಪ್ರಕಾಶ್ ಅವರು ನಿರ್ದೇಶನಕ್ಕೆ ಮರಳುತ್ತಿದ್ದಾರೆ. ‘ಜೈ ಮಾತ ಕಂಬೈನ್ಸ್ ’ಲಾಂಛನದಲ್ಲಿ ಸಿನಿಮಾದ ನಿರ್ಮಾಣ ಆಗುತ್ತಿದೆ. ಪ್ರಕಾಶ್ ಅವರೇ ಚಿತ್ರಕತೆ, ಕತೆ ರಚಿಸಿದ್ದಾರೆ. ಸಿನಿಮಾಗೆ ರಚನಾ ರೈ ನಾಯಕಿ. ತುಳಸಿ, ಅಚ್ಯುತ್ ಕುಮಾರ್, ಮರಾಠಿಯ ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಅವರುಗಳು ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದ್ದು, ಸುಧಾಕರ್ ಎಸ್ ರಾಜ್ ಕ್ಯಾಮೆರಾ ಜವಾಬ್ದಾರಿ ಪಡೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.