ಚಾಂಪಿಯನ್ಸ್ ಆದ ಖುಷಿಯಲ್ಲಿ ಅತ್ತಿಗೆ ಅನುಷ್ಕಾಗೆ ರೋಹಿತ್ ಶರ್ಮಾ ಪ್ರೀತಿಯ ಅಪ್ಪುಗೆ
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ರೋಹಿತ್ ಶರ್ಮಾ ಅವರು ಅನುಷ್ಕಾ ಶರ್ಮಾ ಅವರಿಗೆ ಅಪ್ಪುಗೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ರೋಹಿತ್ ಮತ್ತು ಅನುಷ್ಕಾ ಮಧ್ಯೆ ಯಾವುದೇ ವೈಷಮ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಈ ವಿಡಿಯೋ ಅವರ ನಿಕಟ ಸಂಬಂಧವನ್ನು ತೋರಿಸಿದೆ.

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರು. ಇಬ್ಬರ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಗಾಳಿ ಮಾತು ಮೊದಲಿನಿಂದಲೂ ಇದೆ. ಆದರೆ, ಇದರಲ್ಲಿ ಸತ್ಯ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಈಗ ಇದಕ್ಕೆ ಪೂರಕವಾಗಿ ಹೊಸ ಸಾಕ್ಷಿ ಸಿಕ್ಕಿದೆ. ವಿರಾಟ್ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರಿಗೆ ರೋಹಿತ್ ಶರ್ಮಾ ಅವರು ಪ್ರೀತಿಯ ಅಪ್ಪುಗೆ ಕೊಟ್ಟಿದ್ದಾರೆ. ‘ಚಾಂಪಿಯನ್ಸ್ ಟ್ರೋಫಿ’ ಗೆದ್ದ ಖುಷಿಯಲ್ಲಿ ರೋಹಿತ್ ಹೀಗೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
ನ್ಯೂಜಿಲೆಂಡ್ ವಿರುದ್ಧ ನಡೆದ ‘ಚಾಂಪಿಯನ್ಸ್ ಟ್ರೋಫಿ’ ಫೈನಲ್ನಲ್ಲಿ ರೋಹಿತ್ ಶರ್ಮಾ ಪ್ರಮುಖ ಪಾತ್ರವಹಿಸಿದರು. ಅವರು 76 ರನ್ಗಳನ್ನು ಕಲೆ ಹಾಕಿ ತಂಡಕ್ಕೆ ಆಸರೆ ಆದರು. ಈ ಮ್ಯಾಚ್ ಗೆದ್ದ ಬಳಿಕ ಸ್ಟೇಡಿಯಂನಲ್ಲಿ ಎಲ್ಲರೂ ಸಂಭ್ರಮಾಚರಣೆ ಆರಂಭಿಸಿದರು. ವಿರಾಟ್ ಕೊಹ್ಲಿ ಅವರು ಅನುಷ್ಕಾನ ಮೈದಾನಕ್ಕೆ ಕರೆತಂದರು. ಅವರಿಗೆ ಹಗ್ ಕೊಟ್ಟು ಖುಷಿಯನ್ನು ಹಂಚಿಕೊಂಡರು.
ಆ ಬಳಿಕ ಅನುಷ್ಕಾಗೆ ರೋಹಿತ್ ಶರ್ಮಾ ಎದುರಾದರು. ಅನುಷ್ಕಾ ಅವರಿಗೆ ಚಿಕ್ಕದಾಗಿ ಹಗ್ ಮಾಡಿ ರೋಹಿತ್ ಅವರು ಅನುಷ್ಕಾ ಜೊತೆ ಖುಷಿ ಹಂಚಿಕೊಂಡರು. ಇದನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಅನುಷ್ಕಾ ಹಾಗೂ ರೋಹಿತ್ ಮಧ್ಯೆ ಇರುವ ಗೆಳೆತನ ಎಂಥದ್ದು ಎಂಬುದನ್ನು ಈ ವಿಡಿಯೋ ಸಾಬೀತು ಮಾಡಿದೆ.
View this post on Instagram
Hug between Rohit Sharma and Anushka bhabhi.🥺👌 pic.twitter.com/VwjNbmkiXW
— Rohan💫 (@rohann__45) March 9, 2025
ರೋಹಿತ್ ಹಾಗೂ ವಿರಾಟ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಕಾರಣದಿಂದ ಅನುಷ್ಕಾ ಶರ್ಮಾ ಹಾಗೂ ರೋಹಿತ್ ಪತ್ನಿ ರಿತಿಕಾ ಮಧ್ಯೆಯೂ ಕಿರಿಕ್ ಆಗಿದೆ ಎಂದು ಕೆಲವರು ಸುದ್ದಿ ಮಾಡಿದ್ದರು. ಆದರೆ, ಇದನ್ನು ಇವರು ಸ್ಟೇಡಿಯಂನಲ್ಲೇ ಸುಳ್ಳು ಮಾಡಿದ್ದರು. ಮಾರ್ಚ್ 9ರ ಪಂದ್ಯದಲ್ಲೂ ರಿತಿಕಾ ಹಾಗೂ ಅನುಷ್ಕಾ ಪರಸ್ಪರ ಪ್ರೀತಿಯಿಂದ ಮಾತನಾಡಿಕೊಳ್ಳುವ ಮೂಲಕ ಎಲ್ಲಾ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿ: 3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?
ಅನುಷ್ಕಾ ಶರ್ಮಾ ಅವರು ಟೀಂ ಇಂಡಿಯಾ ಪಂದ್ಯಗಳನ್ನು ನೋಡಲು ಹಾಗೂ ಪತಿಗೆ ಬೆಂಬಲವಾಗಿ ನಿಲ್ಲಲು ಆಗಮಿಸುತ್ತಾ ಇರುತ್ತಾರೆ. ಅವರು ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅವರು ಮತ್ತೆ ಚಿತ್ರರಂಗಕ್ಕೆ ಬರೋದು ಅನುಮಾನ ಎಂದು ಹೇಳಲಾಗುತ್ತಿದೆ. ಅವರ ನಟನೆಯ ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ. ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:47 pm, Mon, 10 March 25