ಸತತ 3 ಸಿನಿಮಾ 500 ಕೋಟಿ ರೂ. ಕಲೆಕ್ಷನ್! ಯಾವ ನಟಿಯರೂ ಮಾಡಿರದ ಸಾಧನೆ ಮಾಡಿದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಅವರು ನಟಿಸಿದ ‘ಅನಿಮಲ್’, ‘ಪುಷ್ಪ 2’, ‘ಛಾವ’ ಸಿನಿಮಾಗಳು ತಲಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿವೆ. ಹೀಗೆ ಸತತ ಮೂರು ಸಿನಿಮಾಗಳಲ್ಲಿ 500 ಕೋಟಿ ರೂಪಾಯಿ ಸಕ್ಸಸ್ ಕಂಡ ಏಕೈಕ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ.

ಈಗ ಭಾರತೀಯ ಚಿತ್ರರಂಗದಲ್ಲಿ ನಂಬರ್ ಒನ್ ನಟಿ ಯಾರು ಎಂದು ಕೇಳಿದರೆ ಯಾವುದೇ ಅನುಮಾನ ಇಲ್ಲದೇ ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಸರನ್ನು ಹೇಳಬಹುದು. ದಕ್ಷಿಣ ಭಾರತದಲ್ಲಿ ಮತ್ತು ಬಾಲಿವುಡ್ನಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಈಗಂತೂ ಅವರು ಬಾಲಿವುಡ್ ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗದಿಂದ ಶುರುವಾದ ಅವರ ಸಿನಿಜರ್ನಿ ಈಗ ಯಶಸ್ಸಿನ ಉತ್ತುಂಗ ತಲುಪಿದೆ. ಬೇರೆ ಯಾವುದೇ ನಟಿಯರು ಮಾಡಿರದ ಸಾಧನೆಯನ್ನು ರಶ್ಮಿಕಾ ಮಂದಣ್ಣ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
ರಶ್ಮಿಕಾ ಮಂದಣ್ಣ ಅವರು ಮಾಡಿದ ಎಲ್ಲ ಸಿನಿಮಾಗಳೂ ಬ್ಲಾಕ್ ಬಸ್ಟರ್ ಆಗುತ್ತಿವೆ. ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿವೆ. ರಶ್ಮಿಕಾ ನಟಿಸಿದ ಅನಿಮಲ್, ಪುಷ್ಪ 2, ಛಾವ ಸಿನಿಮಾಗಳು ಧೂಳೆಬ್ಬಿಸಿವೆ. ಹಿಂದಿ ಬಾಕ್ಸ್ ಆಫೀಸ್ನಲ್ಲಿ ಈ ಮೂರೂ ಸಿನಿಮಾಗಳ 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಆ ಮೂಲಕ ರಶ್ಮಿಕಾ ಅವರ ಹೆಸರಿನಲ್ಲಿ ಒಂದು ದಾಖಲೆ ನಿರ್ಮಾಣ ಆಗಿದೆ.
ಬೇರೆ ಯಾವುದೇ ನಟಿಯರು ಅಭಿನಯಿಸಿದ 3 ಬ್ಯಾಕ್ ಟು ಬ್ಯಾಕ್ ಸಿನಿಮಾಗಳು 500 ಕೋಟಿ ಕ್ಲಬ್ ಸೇರಿದ್ದು ಇಲ್ಲ. ಈ ಸಾಧನೆಯನ್ನು ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಅವರು ಮಾಡಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಅನಿಮಲ್’ ಸಿನಿಮಾ 556.36 ಕೋಟಿ ರೂಪಾಯಿ ಗಳಿಸಿತ್ತು. ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್ 830 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ‘ಛಾವ’ ಸಿನಿಮಾ 516 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಈಗ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಜೊತೆ ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಕೂಡ ಸೂಪರ್ ಹಿಟ್ ಆದರೆ ರಶ್ಮಿಕಾ ಅವರನ್ನು ಹಿಡಿಯುವವರೇ ಇರುವುದಿಲ್ಲ. ಅನೇಕ ಹೀರೋಗಳ ಪಾಲಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಅವರ ಅದೃಷ್ಟದಿಂದಲೇ ಈ ಪರಿ ಗೆಲುವು ಸಿಗುತ್ತಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ‘ಇದು ಅವರ ಪ್ರತಿಭೆಗೆ ಸಿಕ್ಕ ಫಲ’ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ನೀಡಿ: ಕೊಡವ ಕೌನ್ಸಿಲ್ ಒತ್ತಾಯ
ಒಟ್ಟಿನಲ್ಲಿ ರಶ್ಮಿಕಾ ಅವರಿಗೆ ಈಗ ಸುಗ್ಗಿ ಕಾಲ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದಿನದಿಂದ ದಿನಕ್ಕೆ ಖ್ಯಾತಿ ಹೆಚ್ಚಾಗುತ್ತಲೇ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.