AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ರೈ ಜೊತೆ ರಣಬೀರ್ ಕಪೂರ್ ಗೆಳೆತನ; ಅನುಷ್ಕಾ ಶರ್ಮಾ ಅಸೂಯೆ ನೋಡಿ

ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಅವರ ನಡುವಿನ ಆತ್ಮೀಯ ಗೆಳೆತನದ ಬಗ್ಗೆ ಚರ್ಚಿಸುವ ಲೇಖನ ಇದು. 'ಸಂಜು', 'ಯೇ ಜದಿಲ್ ಹೇ ಮುಷ್ಕಿಲ್', ಮತ್ತು 'ಬಾಂಬೆ ವೆಲ್ವೆಟ್' ಚಿತ್ರಗಳಲ್ಲಿ ಅವರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಆದರೆ, ರಣಬೀರ್ ಅವರು ಐಶ್ವರ್ಯಾ ರೈ ಅವರೊಂದಿಗಿನ ಗೆಳೆತನದ ಬಗ್ಗೆ ಮಾತನಾಡಿದಾಗ ಅನುಷ್ಕಾ ಅವರಿಗೆ ಅಸೂಯೆಯಾಯಿತು.

ಐಶ್ವರ್ಯಾ ರೈ ಜೊತೆ ರಣಬೀರ್ ಕಪೂರ್ ಗೆಳೆತನ; ಅನುಷ್ಕಾ ಶರ್ಮಾ ಅಸೂಯೆ ನೋಡಿ
ರಣಬೀರ್-ಅನುಷ್ಕಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 10, 2024 | 6:30 AM

Share

ಅನುಷ್ಕಾ ಶರ್ಮಾ ಹಾಗೂ ರಣಬೀರ್ ಕಪೂರ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ‘ಸಂಜು’, ‘ಯೇದಿಲ್ ಹೇ ಮುಷ್ಕಿಲ್’, ‘ಬಾಂಬೆ ವೆಲ್ವೆಟ್’ ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಇವೆಲ್ಲವೂ 2015ರಿಂದ 2018ರ ಅವಧಿಯಲ್ಲಿ ಬಂದ ಸಿನಿಮಾಗಳು. ಇವರ ಮಧ್ಯೆ ಒಳ್ಳೆಯ ಗೆಳೆತನ, ಬಾಂಡಿಗ್ ಬೆಳೆಯಲು ಈ ಸಿನಿಮಾಗಳು ಸಹಕಾರಿ ಆಗಿದ್ದವು. ಒಮ್ಮೆ ಐಶ್ವರ್ಯಾ ರೈ ಜೊತೆಗಿನ ಗೆಳೆತನದ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಕ್ಕೆ ಸಿಟ್ಟಾಗಿದ್ದರು ಅನುಷ್ಕಾ ಶರ್ಮಾ. ಅವರ ಮುಖದಲ್ಲಿ ಅಸೂಯೆ ಎದ್ದು ಕಾಣುತ್ತಿತ್ತು.

‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಅನುಷ್ಕಾ ಶರ್ಮಾ ಹಾಗೂ ಐಶ್ವರ್ಯಾ ರೈ ಜೊತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರದ ಪ್ರಚಾರದ ವೇಳೆ ಐಶ್ವರ್ಯಾ ಜೊತೆಗಿನ ಗೆಳೆತನದ ಬಗ್ಗೆ ರಣಬೀರ್ ಮಾತನಾಡಿದ್ದರು. ಆಗ ಅನುಷ್ಕಾ ಬೇರೆಯದೇ ರೀತಿಯಲ್ಲಿ ಉತ್ತರಿಸಿದ್ದರು.

‘ಅನುಷ್ಕಾ ನನ್ನ ಬೆಸ್ಟ್ ಫ್ರೆಂಡ್. ನಾನು ಅವರಿಗೆ ಹೊಡೆಯಬಹುದು. ಅಷ್ಟು ಆಳವಾಗಿದೆ ನಮ್ಮ ಫ್ರೆಂಡ್​ಶಿಪ್. ಐಶ್ವರ್ಯಾ ಕೂಡ ನನ್ನ ಬೆಸ್ಟ್ ಫ್ರೆಂಡ್. ನನ್ನ ತಂದೆಯ ಸಿನಿಮಾದಲ್ಲಿ ಐಶ್ವರ್ಯಾ ನಟಿಸುತ್ತಿದ್ದರು. ನಾನು ಆ ಸಿನಿಮಾದಲ್ಲಿ ಸಹಾಯಕನಾಗಿದ್ದೆ. ಆಗಲೇ ಐಶ್ವರ್ಯಾ ನನಗೆ ಫ್ರೆಂಡ್ ಆದರು. ನಂತರ ನಾನು ಕಾಲೇಜು ಸೇರಿದೆ. ಐಶ್ವರ್ಯಾ ಅವರ ಜೀವನದಲ್ಲಿ ಬ್ಯುಸಿ ಆದರು’ ಎಂದರು ರಣಬೀರ್.

View this post on Instagram

A post shared by Mads (@mads_creationsss)

ಇದು ಅನುಷ್ಕಾ ಅಸೂಯೆಗೆ ಕಾರಣ ಆಗಿತ್ತು. ‘ನೀವು ಹಾಗೂ ಐಶ್ವರ್ಯಾ ಸೆಟ್​​ನಲ್ಲಿ ಫ್ರೆಂಡ್ ಆಗಿದ್ರಾ? ಇದು ಸುಳ್ಳು’ ಎಂದು ಅನುಷ್ಕಾ ವಾದಿಸೋಕೆ ಬಂದರು. ‘ಇದುವೇ ನೋಡಿ ಅಸೂಯೆ. ನಾನು ಹಾಗೂ ಐಶ್ವರ್ಯಾ ಟಚ್​​ನಲ್ಲಿ ಇದ್ದಿದ್ದರೆ ನನ್ನ ಜೀವನದಲ್ಲಿ ಅನುಷ್ಕಾಗೆ ಜಾಗವೇ ಇರುತ್ತಿರಲಿಲ್ಲ. ನಾವಿಬ್ಬರೂ ಬೆಸ್ಟ್​ ಫ್ರೆಂಡ್ ಆಗುತ್ತಲೇ ಇರಲಿಲ್ಲ. ಈಗ ಅನುಷ್ಕಾ ನನ್ನ ಬೆಸ್ಟ್​ ಫ್ರೆಂಡ್’ ಎಂದು ಕಾಲೆಳೆದರು ರಣಬೀರ್.

ಇದನ್ನೂ ಓದಿ: ‘ರಾಮಾಯಣ’ ಬಿಡುಗಡೆ ದಿನಾಂಕ ಘೋಷಣೆ: ರಣಬೀರ್ ಕಪೂರ್​ ಬದಲು ಯಶ್​ ಫಸ್ಟ್​ ಲುಕ್​ಗೆ ಹೆಚ್ಚಿತು ಬೇಡಿಕೆ

ರಣಬೀರ್ ಕಪೂರ್ ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ‘ಅನಿಮಲ್’ ಚಿತ್ರ ಸೂಪರ್ ಹಿಟ್ ಆಯಿತು. ಈಗ ಅವರು ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ‘ಲವ್ ಆ್ಯಂಡ್ ವಾರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.