‘ರಾಮಾಯಣ’ ಬಿಡುಗಡೆ ದಿನಾಂಕ ಘೋಷಣೆ: ರಣಬೀರ್ ಕಪೂರ್​ ಬದಲು ಯಶ್​ ಫಸ್ಟ್​ ಲುಕ್​ಗೆ ಹೆಚ್ಚಿತು ಬೇಡಿಕೆ

‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಹುತಾರಾಗಣ ಇದೆ. ‘ರಾಮಾಯಣ’ ಶೂಟಿಂಗ್ ಭರದಿಂದ ಸಾಗುತ್ತಿದೆ. ಇಷ್ಟು ದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ ಈಗ ಒಂದು ಅಪ್​ಡೇಟ್ ನೀಡಲಾಗಿದೆ. ಎರಡು ಪಾರ್ಟ್​ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.

‘ರಾಮಾಯಣ’ ಬಿಡುಗಡೆ ದಿನಾಂಕ ಘೋಷಣೆ: ರಣಬೀರ್ ಕಪೂರ್​ ಬದಲು ಯಶ್​ ಫಸ್ಟ್​ ಲುಕ್​ಗೆ ಹೆಚ್ಚಿತು ಬೇಡಿಕೆ
ಯಶ್
Follow us
|

Updated on: Nov 06, 2024 | 3:25 PM

ರಾಮಾಯಣದ ಕಥೆ ಎಂದಿಗೂ ಪ್ರಸ್ತುತ ಆಗಿರುತ್ತದೆ. ಹಾಗಾಗಿ ಈ ಕಥೆಯನ್ನು ಇಟ್ಟುಕೊಂಡು ಆಗಾಗ ಸಿನಿಮಾ, ಸೀರಿಯಲ್​ಗಳು ತಯಾರಾಗುತ್ತವೆ. ಈಗ ಬಾಲಿವುಡ್​ನಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್​, ಯಶ್, ಸಾಯಿ ಪಲ್ಲವಿ ಮುಂತಾದವರು ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈಗ ಈ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ. ಅದರ ಬೆನ್ನಲ್ಲೇ ಯಶ್ ಅಭಿಮಾನಿಗಳು ಹೊಸ ಬೇಡಿಕೆ ಇಟ್ಟಿದ್ದಾರೆ.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್​ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅವರು ನಟಿಸುತ್ತಿದ್ದಾರೆ. ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಹೀರೋ ಫಸ್ಟ್​ ಲುಕ್​ ಬಿಡುಗಡೆ ಆಗಲಿ ಎಂದು ಸಿನಿಪ್ರಿಯರು ಬಯಸುವುದು ಸಹಜ. ಆದರೆ ‘ರಾಮಾಯಣ’ ಚಿತ್ರದಿಂದ ಮೊದಲು ವಿಲನ್ (ಯಶ್) ಲುಕ್ ಬರಲಿ ಎಂದು ಫ್ಯಾನ್ಸ್ ಡಿಮ್ಯಾಂಡ್​ ಇಟ್ಟಿದ್ದಾರೆ.

ಈ ರೀತಿ ಬೇಡಿಕೆ ಇಡಲು ಕಾರಣ ಇದೆ. ಕೆಲವು ತಿಂಗಳ ಹಿಂದೆ ‘ರಾಮಾಯಣ’ ಸಿನಿಮಾದ ಶೂಟಿಂಗ್ ಸೆಟ್​ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದವು. ಅದರಲ್ಲಿ ರಣಬೀರ್ ಕಪೂರ್​ ಮತ್ತು ಸಾಯಿ ಪಲ್ಲವಿ ಅವರ ಲುಕ್ ಬಹಿರಂಗ ಆಗಿದ್ದವು. ಹಾಗಾಗಿ ಪ್ರೇಕ್ಷಕರಿಗೆ ಯಾವುದೇ ಕುತೂಹಲ ಉಳಿದಿಲ್ಲ. ಸದ್ಯಕ್ಕೆ ಎಲ್ಲರೂ ಕಾಯುತ್ತಿರುವುದು ಯಶ್ ಅವರ ಫಸ್ಟ್​ ಲುಕ್ ನೋಡಲು.

ಇದನ್ನೂ ಓದಿ: ಕೋರ್ಟ್​ ಕಟಕಟೆಯಲ್ಲಿ ರಾಧಿಕಾ ಪಂಡಿತ್; ಅಬ್ಬರಿಸುತ್ತಾ ವಾದ ಮಾಡಿದ ಯಶ್

2026ರ ದೀಪಾವಳಿಗೆ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್​ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ ಎರಡನೇ ಪಾರ್ಟ್​ ರಿಲೀಸ್ ಆಗಲಿದೆ. ಈ ಮಾಹಿತಿ ತಿಳಿಸಲು ಚಿತ್ರತಂಡದವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಕಮೆಂಟ್ ಮಾಡಿದ ಅನೇಕರು ಯಶ್​ ಅವರ ಫಸ್ಟ್​ ಲುಕ್ ಪೋಸ್ಟರ್​ ರಿಲೀಸ್ ಮಾಡಿ ಎಂದು ಒತ್ತಾಯಿಸಿದ್ದಾರೆ. ‘ಆದಿಪುರುಷ್ ರೀತಿ ಕಳಪೆ ಸಿನಿಮಾ ಮಾಡಬೇಡಿ’ ಎಂದು ಕೂಡ ಅನೇಕರು ಸಲಹೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?