ಹುಬ್ಬಳ್ಳಿಯಲ್ಲಿದ್ದಾನೆ ಸಲ್ಮಾನ್ ಕೊಲೆ ಬೆದರಿಕೆಯ ಆರೋಪಿ; ವಾಣಿಜ್ಯ ನಗರಿಗೆ ಮುಂಬೈ ಪೊಲೀಸರು
ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಮತ್ತೊಮ್ಮೆ ಜೀವ ಬೆದರಿಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಆರೋಪಿಯನ್ನು ಹುಡುಕುತ್ತಿರುವ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕದಿಂದ ಬಂದ ಈ ಬೆದರಿಕೆ ಸಂದೇಶದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಕ್ಷಮೆ ಕೇಳುವಂತೆ ಅಥವಾ 5 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಲಾಗಿದೆ.
ನಟ ಸಲ್ಮಾನ್ ಖಾನ್ ಅವರಿಗೆ ಸಾಲು ಸಾಲು ಬೆದರಿಕೆಗಳು ಬರುತ್ತಿವೆ. ಅವರನ್ನು ಕೊಲೆ ಮಾಡೋದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಬೆದರಿಕೆ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ಗೆ ಹೊಸ ಬೆದರಿಕೆ ಬಂದಿತ್ತು. ಈ ಪ್ರಕರಣದ ಆರೋಪಿ ಹುಬ್ಬಳ್ಳಿಯಲ್ಲಿ ಇದ್ದಾನೆ ಎನ್ನುವ ವಿಚಾರ ಗೊತ್ತಾಗಿದೆ. ಮುಂಬೈನಿಂದ ಪೊಲೀಸರ ತಂಡ ಹುಬ್ಬಳಿಗೆ ಎಂಟ್ರಿ ಕೊಟ್ಟಿದೆ. ಆರೋಪಿಯ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ. ಈವರೆಗೆ ಯಾವುದೇ ಬಂಧನ ನಡೆದಿಲ್ಲ.
ಸಲ್ಮಾನ್ ಖಾನ್ ಅವರಿಗೆ ನಿರಂತರ ಬೆದರಿಕೆ ಬರುತ್ತಿವೆ. ಇದನ್ನು ಪೊಲೀಸರು ನಿರ್ಲಕ್ಷ್ಯ ಮಾಡುತ್ತಿಲ್ಲ. ಎಲ್ಲವನ್ನೂ ಗಂಭೀರವಾಗಿ ಸ್ವೀಕರಿಸುತ್ತಾ ಇದ್ದಾರೆ. ತಾನು ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ವ್ಯಕ್ತಿಯೋರ್ವ ಸಲ್ಮಾನ್ಗೆ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆಪ್ ಸಂಖ್ಯೆಗೆ ಸಂದೇಶ ಕಳುಹಿಸಲಾಗಿತ್ತು. ಕೃಷ್ಣಮೃಗ ಬೇಟೆ ಕೇಸ್ನಲ್ಲಿ ಸಲ್ಮಾನ್ ಖಾನ್ ಅವರು ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು ಎಂದು ಹೇಳಿದ್ದ. ಈತ ಕರ್ನಾಟಕದಿಂದ ಈ ಬೆದರಿಕೆ ಹಾಕಿದ್ದ ಅನ್ನೋದು ಗೊತ್ತಾಗಿದೆ.
ಸದ್ಯ ಮುಂಬೈ ಪೊಲೀಸರು ಹುಬ್ಬಳ್ಳಿಗೆ ಬಂದಿದ್ದಾರೆ. ಆರೋಪಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಈತ ನಿಜಕ್ಕೂ ಲಾರೆನ್ಸ್ ಬಿಷ್ಣೋಯ್ ಸಹೋದರನೇ ಅಥವಾ ಪ್ರ್ಯಾಂಕ್ ಮಾಡುವ ಉದ್ದೇಶದಿಂದ ಈ ಮೆಸೇಜ್ ಬಂದಿತ್ತೇ ಎನ್ನುವ ಪ್ರಶ್ನೆ ಮೂಡಿದೆ.
ಈ ಮೊದಲು ಸಲ್ಮಾನ್ ಖಾನ್ ಅವರಿಗೆ ಇದೇ ರೀತಿಯ ಬೆದರಿಕೆ ಬಂದಿತ್ತು. ಮುಂಬೈ ಟ್ರಾಫಿಕ್ ಪೊಲೀಸ್ನವರಿಗೆ ಸಲ್ಮಾನ್ನ ಕೊಲ್ಲೋ ಬೆದರಿಕೆ ಹಾಕಿದ್ದರು. ‘ಅದು ತಪ್ಪಾಗಿ ಸಂದೇಶ ರವಾನೆ ಆಗಿದೆ’ ಎಂದು ಅದೇ ಸಂಖ್ಯೆಯಿಂದ ಕ್ಷಮೆ ಕೇಳಿ ಸಂದೇಶ ಕಳುಹಿಸಲಾಗಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ ಒಂದಲ್ಲ ಎಂಟು ನೈಟ್ ಸ್ಟ್ಯಾಂಡ್ ಮಾಡಿದ್ದರು ಎಂದ ಮಾಜಿ ಗೆಳತಿ
ಸಿನಿಮಾ ವಿಚಾರಕ್ಕೆ ಬರೋದಾದರೆ ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬೆದರಿಕೆ ಮಧ್ಯೆಯೂ ಸಲ್ಮಾನ್ ಖಾನ್ ಅವರು ಶೂಟಿಂಗ್ನಲ್ಲಿ ಭಾಗಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.