AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಅರವಿಂದ್ ನೇತೃತ್ವದಲ್ಲಿ ಬರುತ್ತಿದೆ ಹೊಸ ಶೋ; ರಿವೀಲ್ ಆಯ್ತು ಮಾಹಿತಿ

ರಮೇಶ್ ಅರವಿಂದ್ ಅವರು ‘ಸರಿಗಮಪ’ ಕಾರ್ಯಕ್ರಮದಲ್ಲಿ ‘ಮಹಾನಟಿ’ ಶೋನ ಎರಡನೇ ಸೀಸನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ರಿಯಾಲಿಟಿ ಶೋ ನಟನಾ ಕನಸು ಕಾಣುವ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಮೊದಲ ಸೀಸನ್ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ, ಎರಡನೇ ಸೀಸನ್‌ಗಾಗಿ ಆಡಿಷನ್‌ಗಳು ಪ್ರಾರಂಭ ಆಗಲಿದೆ.

ರಮೇಶ್ ಅರವಿಂದ್ ನೇತೃತ್ವದಲ್ಲಿ ಬರುತ್ತಿದೆ ಹೊಸ ಶೋ; ರಿವೀಲ್ ಆಯ್ತು ಮಾಹಿತಿ
ರಮೇಶ್ ಅರವಿಂದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 11, 2025 | 7:48 AM

Share

‘ಮಹಾನಟಿ’ ಹೆಸರಿನ ಶೋ ಈ ಮೊದಲು ಪ್ರಸಾರ ಕಂಡಿದ್ದು ಗೊತ್ತೇ ಇದೆ. ನಟನೆ ಮಾಡಬೇಕು ಎಂದು ಹಂಬಲ ಹೊಂದಿರುವ ಪ್ರತಿಭೆಗಳು ಈ ವೇದಿಕೆಗೆ ಬಂದು ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿ ಹೋಗಿದ್ದರು. ಇದರಿಂದ ಹಲವು ಪ್ರತಿಭೆಗಳ ಅನಾರಣ ಆಗಿತ್ತು. ಕೆಲವರು ಬದುಕು ಇದರಿಂದ ಬದಲಾಗಿದೆ. ಈಗ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಈ ಬಗ್ಗೆ ‘ಸರಿಗಮಪ’ (SAREGAMAPA) ವೇದಿಕೆ ಮೇಲೆ ರಮೇಶ್ ಅರವಿಂದ್ ಅವರು ಮಾಹಿತಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.

ರಮೇಶ್ ಅರವಿಂದ್ ಅವರು ‘ಮಹಾನಟಿ’ ಶೋನಲ್ಲಿ ಜಡ್ಜ್ ಸ್ಥಾನದಲ್ಲಿ ಇದ್ದರು. ಇವರ ಜೊತೆ ನಟಿ ಪ್ರೇಮಾ, ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಕೂಡ ಇದ್ದರು. ಅನುಶ್ರೀ ಈ ಶೋ ನಿರೂಪಣೆ ಮಾಡಿದ್ದರು. ಈಗ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಇದರಲ್ಲಿ ರಮೇಶ್ ಅರವಿಂದ್ ಜಡ್ಜ್ ಸ್ಥಾನದಲ್ಲಿ ಮುಂದುವರಿಯುವುದ ಬಹುತೇಕ ಖಚಿತವಾಗಿದೆ. ಆದರೆ, ಉಳಿದಂತೆ ಯಾರೆಲ್ಲ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ
Image
NTR​ ಜೊತೆ ಡ್ಯಾನ್ಸ್ ಮಾಡುವಾಗ ಎಡವಿದ ಹೃತಿಕ್ ರೋಷನ್; ಸಂಭವಿಸಿತು ಅವಘಡ
Image
ಸಹನಟನ ಜೊತೆ ಸಿಕ್ಕಿಬಿದ್ದ ಕಿರುತೆರೆ ನಟಿ; 6 ತಿಂಗಳಿಗೆ ಕೊನೆ ಆಯ್ತು ಸಂಸಾರ
Image
ಪತ್ನಿಗೊಂದು ಚಾನ್ಸ್ ಕೊಡಿ; ‘ಮ್ಯಾಕ್ಸ್’ ನಿರ್ಮಾಪಕನ ಬಳಿ ರಂಭಾ ಪತಿ ಕೋರಿಕೆ
Image
ಚಾಂಪಿಯನ್ಸ್ ಆದ ಖುಷಿಯಲ್ಲಿ ಅನುಷ್ಕಾಗೆ ರೋಹಿತ್ ಶರ್ಮಾ ಪ್ರೀತಿಯ ಅಪ್ಪುಗೆ

ರಮೇಶ್ ಅರವಿಂದ್ ಅವರು ‘ಸರಿಗಮಪ’ ಶೋಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ್ದಾರೆ. ‘ಮಹಾನಟಿ ಸೀಸನ್ 2 ಶೀಘ್ರವೇ ಬರುತ್ತಿದೆ. ಚಿತ್ರರಂಗದಲ್ಲಿ ನಾಯಕಿ ಆಗಬೇಕು, ಟಿವಿಯಲ್ಲಿ ಮಿಂಚಬೇಕು ಎಂದು ಯುವ ಪ್ರತಿಭೆಗಳಿಗೆ ವೇದಿಕೆ ಸಜ್ಜಾಗಿದೆ. ಮಹಾನಟಿ 2 ಆಡಿಷನ್​ಗೆ ರೆಡಿ ಆಗಿ. ಟೈಟಲ್ ಝಲಕ್ ಬರ್ತಿದೆ ನೋಡಿ’ ಎಂದರು ರಮೇಶ್ ಅರವಿಂದ್.

View this post on Instagram

A post shared by Zee Kannada (@zeekannada)

‘ಮಹಾನಟಿ’ ಶೋಗೆ ಆಗಮಿಸೋ ಬಹುತೇಕರು ನಟನೆ ಮಾಡಬೇಕು ಎಂಬ ಕನಸು ಕಂಡು, ನಂತರ ಅದನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದೆ ಒದ್ದಾಡಿದವರೇ ಆಗಿದ್ದಾರೆ. ಈ ಬಾರಿ ಯಾರೆಲ್ಲ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮೊದಲ ಸೀಸನ್​ನಲ್ಲಿ ಮೈಸೂರಿನ ತರಿಕೆರೆಯ ಪ್ರಿಯಾಂಕಾ ಅವರು ವಿನ್ನರ್ ಆಗಿದ್ದರು.

ಇದನ್ನೂ ಓದಿ: ‘ರಾಮ ಶ್ಯಾಮ ಭಾಮ’ ಕ್ಲೈಮ್ಯಾಕ್ಸ್ ಹಿಂದಿದೆ ವಿಶೇಷ ಕಥೆ; ರಿವೀಲ್ ಮಾಡಿದ ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ಈ ಮೊದಲು ಹಿರಿತೆರೆಯಲ್ಲಿ ಮಿಂಚಿದವರು. ಆ ಬಳಿಕ ಅವರು ಕಿರುತೆರೆಯಲ್ಲೂ ಮಿಂಚಿದರು. ಅವರು ಈ ಮೊದಲು ‘ವೀಕೆಂಡ್ ವಿತ್ ರಮೇಶ್’  ಶೋ ನಡೆಸಿಕೊಡುತ್ತಿದ್ದರು. ‘ಮಹಾನಟಿ’ ವೇದಿಕೆ ಮೇಲೆ ಅವರು ಸಾಕಷ್ಟು ಅನುಭವಗಳನ್ನು ಹಂಚಿಕೊಂಡಿದ್ದು ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?