Jr.ಎನ್ಟಿಆರ್ ಜೊತೆ ಡ್ಯಾನ್ಸ್ ಮಾಡುವಾಗ ಎಡವಿದ ಹೃತಿಕ್ ರೋಷನ್; ಸಂಭವಿಸಿತು ಅವಘಡ
ವಾರ್ 2 ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಹೃತಿಕ್ ರೋಷನ್ ಅವರಿಗೆ ಗಂಭೀರ ಗಾಯವಾಗಿದೆ. ಇದರಿಂದ ಚಿತ್ರದ ಚಿತ್ರೀಕರಣ ಮತ್ತು ಬಿಡುಗಡೆ ಮುಂದೂಡಲ್ಪಟ್ಟಿದೆ. ನಾಲ್ಕು ವಾರಗಳ ವಿಶ್ರಾಂತಿ ಅವಶ್ಯಕ ಎಂದು ವೈದ್ಯರು ಸೂಚಿಸಿದ್ದಾರೆ. ಈ ಘಟನೆಯು ಚಿತ್ರತಂಡಕ್ಕೆ ಆತಂಕವನ್ನುಂಟುಮಾಡಿದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.

ಫೈಟ್ ದೃಶ್ಯ, ಚೇಸಿಂಗ್ ದೃಶ್ಯ, ಭರ್ಜರಿ ಸ್ಟೆಪ್ಗಳಿರೋ ಸಾಂಗ್ ದೃಶ್ಯಗಳನ್ನು ಶೂಟ್ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಇಲ್ಲವಾದಲ್ಲಿ ಸಮಸ್ಯೆ ಆಗೋದು ಖಚಿತ. ಈಗ ‘ವಾರ್ 2’ (War 2) ಚಿತ್ರದ ವೇಳೆ ಅವಘಡ ಸಂಭವಿಸಿದೆ. ಸಾಂಗ್ ಶೂಟಿಂಗ್ ವೇಳೆ ಹೃತಿಕ್ ರೋಷನ್ ಕಾಲಿಗೆ ಗಂಭಿರವಾಗಿ ಗಾಯವಾಗಿದೆ. ಇದರಿಂದ ಅವರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ. ಇದರಿಂದ ಸಿನಿಮಾ ಶೂಟ್ ಕೂಡ ಮುಂದಕ್ಕೆ ಹೋಗಿದೆ.
ಜೂನಿಯರ್ ಎನ್ಟಿಆರ್ ಅವರು ಭರ್ಜರಿ ಡ್ಯಾನ್ಸ್ ಮಾಡುತ್ತಾರೆ. ‘ಆರ್ಆರ್ಆರ್’ ಚಿತ್ರದ ‘ನಾಟು.. ನಾಟು..’ ಹಾಡಿನಲ್ಲಿ ಇದು ಸಾಬೀತಾಗಿದೆ. ಹೃತಿಕ್ ಕೂಡ ಒಳ್ಳೆಯ ಡ್ಯಾನ್ಸರ್. ಈ ಕಾರಣದಿಂದಲೇ ‘ವಾರ್ 2’ ಚಿತ್ರದಲ್ಲಿ ಭರ್ಜರಿ ಸ್ಟೆಪ್ಗಳಿರೋ ಸಾಂಗ್ನ ಇಡಲಾಗಿತ್ತು. ಆದರೆ, ಶೂಟ್ ವೇಳೆ ಸಮಸ್ಯೆ ಆಗಿದೆ. ಸದ್ಯ ವೈದ್ಯರು ನಾಲ್ಕು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಇದರಿಂದ ಸಿನಿಮಾ ಶೂಟ್ ಮೇ ತಿಂಗಳಿಗೆ ಮುಂದೂಡಲ್ಪಟ್ಟಿದೆ.
ಹಾಡಿನ ಶೂಟ್ ಪೂರ್ಣಗೊಳಿಸಿ ಆ ಬಳಿಕ ಮಾತಿನ ಭಾಗದ ಶೂಟ್ ಮುಂದುವರಿಸುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಹೃತಿಕ್ ಗಾಯಗಿಂದ ಪ್ಲ್ಯಾನ್ ಉಲ್ಟಾ ಆಗಿದೆ. ಇದು ತಂಡಕ್ಕೆ ಚಿಂತೆಯನ್ನು ತಂದೊಡ್ಡಿದೆ. ಸಿನಿಮಾನ ಆಗಸ್ಟ್ 14ರಂದು ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ಈಗ ಹೃತಿಕ್ ಇಂಜೂರಿ ಕಾರಣದಿಂದ ಅಂದುಕೊಂಡ ದಿನಾಂಕದಂದು ಸಿನಿಮಾನ ತರಲಾಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಪ್ರಶಾಂತ್ ನೀಲ್-ಜೂನಿಯರ್ ಎನ್ಟಿಆರ್ ಸಿನಿಮಾ ಶೂಟಿಂಗ್ ಯಾವಾಗ? ಇಲ್ಲಿದೆ ಅಪ್ಡೇಟ್
ಈಗಾಗಲೇ ಟಾಕಿ ಪೋರ್ಷನ್ ಬಹುತೇಕ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಕಿಯಾರಾ ಅಡ್ವಾಣಿ ಅವರು ನಾಯಕಿ. ಅವರು ಪ್ರೆಗ್ನೆಂಟ್ ಎಂದು ಘೋಷಣೆ ಮಾಡಿದ್ದಾರೆ. ಅವರ ಭಾಗದ ಶೂಟ್ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ‘ವಾರ್ 2’ ಚಿತ್ರವನ್ನು ‘ಬ್ರಹ್ಮಾಸ್ತ್ರ’ ಖ್ಯಾತಿಯ ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಾ ಇದ್ದಾರೆ. ಹೃತಿಕ್ ಅವರು ಬಾಲಿವುಡ್ನಲ್ಲಿ ಕಾಣಿಸಿಕೊಳ್ಳುತ್ತಿರುವದರಿಂದ ನಿರೀಕ್ಷೆ ಹೆಚ್ಚಿದೆ. ಅವರ ಪಾತ್ರದ ಬಗ್ಗೆಯೂ ಬೆಟ್ಟದಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Tue, 11 March 25