Poonam Pandey: ಸತ್ತು ಬದುಕಿ ಬಂದ ಬೋಲ್ಡ್ ನಟಿ ಪೂನಂ ಪಾಂಡೆಗೆ ಜನ್ಮದಿನ
ಪೂನಂ ಪಾಂಡೆ ಅವರ ಜನ್ಮದಿನದಂದು, ಅವರ ವಿವಾದಾತ್ಮಕ ವೃತ್ತಿ ಮತ್ತು ಕ್ಯಾನ್ಸರ್ ಸುಳ್ಳು ಸುದ್ದಿಯನ್ನು ನೆನಪಿಸಿಕೊಳ್ಳೋಣ. ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಾವಿನ ಸುದ್ದಿ ಹರಡಿದ್ದರು. ಈ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಕೆಲವರು ಅವರನ್ನು ಶ್ಲಾಘಿಸಿದರೆ ಇನ್ನು ಕೆಲವರು ಖಂಡಿಸಿದರು.

ಬಾಲಿವುಡ್ ನಟಿ, ವಿವಾದಗಳ ಕೇಂದ್ರ ಬಿಂದು ಪೂನಂ ಪಾಂಡೆ (Poonam Pandey) ಅವರಿಗೆ ಇಂದು (ಮಾರ್ಚ್ 11) ಜನ್ಮದಿನ. ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅಲ್ಲದೆ ಕಳೆದ ವರ್ಷದ ಆರಂಭದಲ್ಲಿ ಅವರು ಮಾಡಿಕೊಂಡ ವಿವಾದವನ್ನು ಕೂಡ ಈಗ ನೆನಪಿಸಿಕೊಳ್ಳಲಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಾವು ಸತ್ತೇ ಹೋಗಿದ್ದಾಗಿ ಸುದ್ದಿ ಹರಡಿದ್ದರು. ಅದು ಸುಳ್ಳು ಎಂದು ಗೊತ್ತಾದಾಗ ಎಲ್ಲರೂ ಪೂನಂ ಪಾಂಡೆಗೆ ಬಾಯಿಗೆ ಬಂದಂತೆ ಬೈದಿದ್ದರು. ಕೆಲವರು ಅವರ ದಿಟ್ಟ ನಡೆಯನ್ನು ಶ್ಲಾಘಿಸಿದ್ದರು.
ಪೋಸ್ಟ್
2024ರ ಫೆಬ್ರವರಿ 2ರಂದು ಪೂನಂ ಪಾಂಡೆ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ಮುಂಜಾನೆ ಪೂನಂ ಪಾಂಡೆ ನಿಧನ ಹೊಂದಿದ್ದಾರೆ. ಖಾಸಗಿತನಕ್ಕೆ ಗೌರವ ನೀಡಿ ಎಂದು ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಈ ಸುದ್ದಿ ಸಾಕಷ್ಟು ಹರಿದಾಡಿತ್ತು. ಇದನ್ನು ಕೆಲವರು ನಂಬಿದರೆ ಇನ್ನೂ ಕೆಲವರು ಸುಳ್ಳು ಎಂದಿದ್ದರು. ಇದು ಪಬ್ಲಿಸಿಟಿ ಸ್ಟಂಟ್ ಎಂದು ಕೂಡ ಹೇಳಲಾಯಿತು.
ಸರ್ವಿಕಲ್ ಕ್ಯಾನ್ಸರ್
ಸರ್ವಿಕಲ್ ಕ್ಯಾನ್ಸರ್ ಅಥವಾ ಗರ್ಭಕಂಠದ ಕ್ಯಾನ್ಸರ್ನಿಂದ ತಾವು ಮೃತಪಟ್ಟಿದ್ದಾಗಿ ಪೂನಂ ಪಾಂಡೆ ಹೇಳಿದ್ದರು. ನಂತರ ಈ ಸುದ್ದಿ ಸಾಕಷ್ಟು ಚರ್ಚೆ ಆಯಿತು. ಅನೇಕರು ಸರ್ವಿಕಲ್ ಕ್ಯಾನ್ಸರ್ ಎಂದರೆ ಏನು ಎಂಬುದರ ಹುಡುಕಾಟದಲ್ಲಿ ತೊಡಗಿದರು. ಈ ಬಗ್ಗೆ ಸಾಕಷ್ಟು ಚರ್ಚೆ ಆದ ಬಳಿಕವೇ ಅವರು ತಾವು ಬದುಕಿದ್ದ ವಿಚಾರ ರಿವೀಲ್ ಮಾಡಿದ್ದರು.
ಛೀಮಾರಿ-ಹೊಗಳಿಕೆ
ನಟಿಗೆ ಕೆಲವರು ಛೀಮಾರಿ ಹಾಕಿದರು. ಸಾವಿನ ವಿಚಾರದಲ್ಲಿ ಅವರು ಈ ರೀತಿ ಮಾಡಬಾರದಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನಟಿ ಮಾಡಿದ್ದು ಸರಿ ಇದೆ ಎಂದು ವಾದಿಸಿದ್ದರು. ಇನ್ನೂ ಕೆಲವರು ಅವರ ದಿಟ್ಟ ನಿರ್ಧಾರ ಶ್ಲಾಘಿಸಿದ್ದರು.
ಇದನ್ನೂ ಓದಿ: ಪೂನಂ ಪಾಂಡೆಗೆ ಮಧ್ಯ ರಸ್ತೆಯಲ್ಲಿ ಕಿಸ್ ಮಾಡಲು ಬಂದ ಅಭಿಮಾನಿ; ಇದು ನಾಟಕ ಎಂದ ನೆಟ್ಟಿಗರು
ಸಿನಿಮಾ ರಂಗ
2013ರಲ್ಲಿ ಪೂನಂ ಪಾಂಡೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಚಿತ್ರ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿಲ್ಲ. ರಿಯಾಲಿಟಿ ಶೋಗಳಲ್ಲಿ ಪೂನಂ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.