Sign In

By signing in or creating an account, you agree with Associated Broadcasting Company's Terms & Conditions and Privacy Policy.

2020ರ ರಾಜ್ಯ ಸಿನಿಮಾ ಪ್ರಶಸ್ತಿ: ಪ್ರಜ್ವಲ್ ದೇವರಾಜ್, ಅಕ್ಷತಾ ಪಾಂಡವಪುರ ಅತ್ಯುತ್ತಮ ನಟ-ನಟಿ

ಪ್ರಜ್ವಲ್ ದೇವರಾಜ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಕೊವಿಡ್ ಕಾರಣದಿಂದ 2020ರಲ್ಲಿ ಕಡಿಮೆ ಸಿನಿಮಾಗಳು ಬಿಡುಗಡೆ ಆಗಿದ್ದವು. ಪ್ರಶಸ್ತಿಗಾಗಿ 66 ಸಿನಿಮಾಗಳನ್ನು ವೀಕ್ಷಿಸಲಾಗಿದೆ. 2020ನೇ ಸಾಲಿನ ರಾಜ್ಯ ಸಿನಿಮಾ ಪ್ರಶಸ್ತಿ ಬಗ್ಗೆ ಇಲ್ಲಿದೆ ವಿವರ..

2020ರ ರಾಜ್ಯ ಸಿನಿಮಾ ಪ್ರಶಸ್ತಿ: ಪ್ರಜ್ವಲ್ ದೇವರಾಜ್, ಅಕ್ಷತಾ ಪಾಂಡವಪುರ ಅತ್ಯುತ್ತಮ ನಟ-ನಟಿ
Prajwal Devaraj, Akshatha Pandavapura
Follow us
ಮದನ್​ ಕುಮಾರ್​
|

Updated on:Mar 11, 2025 | 8:00 PM

2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ (Karnataka State Film Awards) ಪಟ್ಟಿ ಪ್ರಕಟ ಆಗಿದೆ. ‘ಜಂಟಲ್​ಮ್ಯಾನ್’ ಸಿನಿಮಾದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ (Prajwal Devaraj) ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ. ‘ಪಿಂಕಿ ಎಲ್ಲಿ’ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ (Akshatha Pandavapura) ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ‘ಪಿಂಕಿ’ ಎಲ್ಲಿ ಸಿನಿಮಾಗೆ ಮೊದಲ ‘ಅತ್ಯುತ್ತಮ’ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಈ ಸಿನಿಮಾಗೆ ಪೃಥ್ವಿ ಕೋಣನೂರು ಅವರು ನಿರ್ದೇಶನ ಮಾಡಿದ್ದಾರೆ. ‘ವರ್ಣಪಟಲ’ ಸಿನಿಮಾಗೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ಹರಿವ ನದಿಗೆ ಮೈಯೆಲ್ಲ ಕಾಲು’ ಸಿನಿಮಾಗೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ.

‘ಗಿಳಿಯು ಪಂಚರದೊಳಿಲ್ಲ’ ಹಾಗೂ ‘ಈ ಮಣ್ಣು’ ಸಿನಿಮಾಗಳಿಗೆ ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ ಪ್ರಶಸ್ತಿ ಕೊಡಲಾಗಿದೆ. ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ ಪ್ರಶಸ್ತಿಯನ್ನು ‘ಫೋರ್ ವಾಲ್ಸ್’ ಚಿತ್ರ ಪಡೆದುಕೊಂಡಿದೆ. ‘ಪದಕ’ ಸಿನಿಮಾ ‘ಅತ್ಯುತ್ತಮ ಮಕ್ಕಳ ಚಿತ್ರ’ ಪ್ರಶಸ್ತಿಗೆ ಭಾಜನವಾಗಿದೆ. ತುಳು ಭಾಷೆಯ ‘ಜೀಟಿಗೆ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

‘ತಲೆದಂಡ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಮೇಶ್ ಪಂಡಿತ್ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ದಂತಪುರಾಣ’ ಸಿನಿಮಾದಲ್ಲಿನ ನಟನೆಗಾಗಿ ಮಂಜುಳಮ್ಮ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ಗಗನ್ ಬಡೇರಿಯಾ ಅವರು ‘ಮಾಲ್ಗುಡಿ ಡೇಸ್’ ಸಿನಿಮಾಗಾಗಿ ಪಡೆದಿದ್ದಾರೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಇದನ್ನೂ ಓದಿ: ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ: ದಕ್ಷಿಣ ಭಾರತ ಚಿತ್ರರಂಗದ್ದೆ ಮೇಲುಗೈ

‘ಆಕ್ಟ್ 1978’ ಚಿತ್ರಕ್ಕಾಗಿ ನಾಗೇಂದ್ರ ಕೆ. ಉಜ್ಜನಿ ಅವರು ‘ಅತ್ಯುತ್ತಮ ಸಂಕಲನ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘ತಲೆದಂಡ’ ಚಿತ್ರಕ್ಕಾಗಿ ಅಶೋಕ್ ಕಶ್ಯಪ್ ಅವರಿಗೆ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ನೀಡಲಾಗಿದೆ. ಇದೇ ಸಿನಿಮಾದ ನಟನೆಗಾಗಿ ಮಾಸ್ಟರ್ ಆಹಿಲ್ ಅನ್ಸಾರಿಗೆ ‘ಅತ್ಯುತ್ತಮ ಬಾಲ ನಟ’ ಪ್ರಶಸ್ತಿ ಸಿಕ್ಕಿದೆ. ‘ಪಾರು’ ಚಿತ್ರಕ್ಕಾಗಿ ಬೇಬಿ ಹಿತೈಷಿ ಪೂಜಾರ್ ‘ಅತ್ಯುತ್ತಮ ಬಾಲನಟಿ’ ಪ್ರಶಸ್ತಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 pm, Tue, 11 March 25

ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್