Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಹಾರಿದ ಹಾರಿಸ್... ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ರೌಫ್

VIDEO: ಹಾರಿದ ಹಾರಿಸ್… ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ರೌಫ್

ಝಾಹಿರ್ ಯೂಸುಫ್
|

Updated on: Mar 22, 2025 | 11:10 AM

New Zealand vs Pakistan, 3rd T20I: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 19.4 ಓವರ್​ಗಳಲ್ಲಿ 204 ರನ್​ ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಹಸನ್ ನವಾಝ್ (105) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಶತಕದೊಂದಿಗೆ ಪಾಕಿಸ್ತಾನ್ ತಂಡ 16 ಓವರ್​ಗಳಲ್ಲಿ 207 ರನ್​ ಬಾರಿಸಿ 9 ವಿಕೆಟ್​ಗಳ ಜಯ ಸಾಧಿಸಿದೆ.

ಆಕ್ಲೆಂಡ್​ನ ಈಡನ್ ಪಾರ್ಕ್​ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಆಟಗಾರ ಹಾರಿಸ್ ರೌಫ್ ಅದ್ಭುತ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​ನ ಮೊದಲ ಓವರ್​ನ 5ನೇ ಎಸೆತದಲ್ಲಿ ಫಿನ್ ಅಲೆನ್ ಲೆಗ್​ನತ್ತ ಬಾರಿಸಿದ ಚೆಂಡನ್ನು ರೌಫ್ ಅದ್ಭತ ಡೈವಿಂಗ್ ಮೂಲಕ ಒಂದೇ ಕೈಯಲ್ಲಿ ಬಂಧಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 19.4 ಓವರ್​ಗಳಲ್ಲಿ 204 ರನ್​ ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಹಸನ್ ನವಾಝ್ (105) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಶತಕದೊಂದಿಗೆ ಪಾಕಿಸ್ತಾನ್ ತಂಡ 16 ಓವರ್​ಗಳಲ್ಲಿ 207 ರನ್​ ಬಾರಿಸಿ 9 ವಿಕೆಟ್​ಗಳ ಜಯ ಸಾಧಿಸಿದೆ.