ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ಅವರು ‘ಮಜಾ ಟಾಕೀಸ್’ ಶೋಗೆ ಬಂದಿದ್ದಾರೆ. ಅವರು ಕ್ರಿಕೆಟ್ ಕಮೆಂಟೇಟರ್ ಆಗಿದ್ದಾರೆ. ಅವರು ಈಗ ಒಂದು ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. ತಮಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಜಾನಿ ನಿಕ್ ನೇಮ್ ಹೇಗೆ ಬಂತು’ ಎಂದು ಸೃಜನ್ ಲೋಕೇಶ್ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಜಾನಿ, ‘ನನಗೆ ಮರುನಾಮಕರಣ ಆಗಿದ್ದು 1990ರಲ್ಲಿ. ತಂದೆ-ತಾಯಿ ಇಟ್ಟಿದ್ದು ಶ್ರೀನಿವಾಸ್ಮೂರ್ತಿ ಎಂಬ ಹೆಸರು. ಹಿಂದೂಪುರದಲ್ಲಿ ಒಂದು ಮ್ಯಾಚ್ ನಡೆದಿತ್ತು. ಅದನ್ನು ಆಡೋಕೆ ಹೋದ್ವಿ. ಮ್ಯಾಚ್ ಮುಗಿದ ಬಳಿಕ ಥಿಯೇಟರ್ ಹೋದೆವು. ‘ಕರ್ತವ್ಯಂ’ ಅನ್ನೋದು ಸಿನಿಮಾ ಹೆಸರು. ಈ ಚಿತ್ರದಲ್ಲಿ ಬರೋ ಒಂದು ಪಾತ್ರದ ಹೆಸರು ಜಾನಿ. ಅದು ನನ್ನಂತೆ ಇತ್ತು. ಹೀಗಾಗಿ, ಈ ಹೆಸರು ಇಡಲಾಯಿತು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.