ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್​ ಸಭೆ ಸಫಲ, ಭಾರತಕ್ಕೆ ನೆರವು ನೀಡಲು 135 ಸಿಇಓಗಳ ಒಪ್ಪಿಗೆ

ಅಮೇರಿಕದ ಅಧ್ಯಕ್ಷ ಜೋ ಬೈಡನ್​ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಮುಗಿದ ನಂತರ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್​ 135 ಸಿಇಓಗಳ ಜೊತೆ ಸಭೆ ನಡೆಸಿದ್ದು ಫಲಪ್ರದವಾಗಿದೆ. ಅವರೆಲ್ಲ ಭಾರತಕ್ಕೆ ನೆರವು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್​ ಸಭೆ ಸಫಲ, ಭಾರತಕ್ಕೆ ನೆರವು ನೀಡಲು 135 ಸಿಇಓಗಳ ಒಪ್ಪಿಗೆ
ಅಮೇರಿಕದ ವಿದೇಶಾಂಗ ಕಾರ್ಯದರ್ಶಿ, ಆ್ಯಂಟನಿ ಬ್ಲಿಂಕೆನ್​
Follow us
ಡಾ. ಭಾಸ್ಕರ ಹೆಗಡೆ
|

Updated on:Apr 27, 2021 | 3:17 PM

ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಕೋ ಬೈಡನ್ ನಡುವಿನ ಮಾತುಕತೆ ನಡೆದ ಕೆಲವೇ ಹೊತ್ತಿನಲ್ಲಿ ನಡೆದ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು 135 ಪ್ರಮುಖ ಕಂಪೆನಿಗಳ ಸಿಇಓಗಳ ಸಭೆಯಲ್ಲಿ, ಭಾರತಕ್ಕೆ ಅಮೇರಿಕದ ಖಾಸಗೀ ವಲಯದಿಂದ ಕೂಡ ನೆರವು ನೀಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೆಸರು ಹೇಳಲು ಇಚ್ಛಿಸದ ಓರ್ವ ಸಿಇಓ ಅವರು ಟಿವಿ9 ಡಿಜಿಟಲ್​ಗೆ ಸಭೆಯ ವಿವರವನ್ನು ನೀಡಿದ್ದಾರೆ.

ಸಭೆಯಲ್ಲಿ ಏನು ನಡೆಯಿತು?

ಭಾರತದಲ್ಲಿನ ಪರಿಸ್ಥಿತಿಗೆ ಸ್ಪಂದಿಸಲು ಅಮೇರಿಕದ ಸರಕಾರ ತಡವಾಗಿರಬಹುದು. ಆದರೆ, ಈಗ ಅಮೇರಿಕಾ ಸರಕಾರ ಮಾತ್ರವಲ್ಲ, ಇಡೀ ನಾಗರಿಕ ಜಗತ್ತು ಭಾರತಕ್ಕೆ ಸಹಾಯ ಹಸ್ತ ನೀಡಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ. ಅಮೇರಿಕದ ಸೇನೆ ಮತ್ತು ವಿದೇಶಾಂಗ ಇಲಾಖೆಯು ಔಷಧ ಮತ್ತು ಇನ್ನತರೇ ಉಪಕರಣ ನೀಡುವುದು ನಿರ್ಧಾರವಾಗಿದೆ. ಯುಪಿಎಸ್, ಯುನೈಟೆಡ್ ಮತ್ತು ಡೆಲ್ಟಾ ಏರ್ಲೈನ್ಸ್ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಭಾರತಕ್ಕೆ ಸಹಾಯ ಕೊಂಡೊಯ್ಯಲು ಮುಂದಾಗಿವೆ. ಅಮೆಜಾನ್ ವೆಂಟಿಲೇಟರ್ ವಿತರಣೆಯನ್ನು ನೋಡಿಕೊಳ್ಳುತ್ತಿದೆ. ಗೂಗಲ್, ಐಬಿಎಂ, ಜೆಪಿ ಮೋರ್ಗಾನ್, ನುವೀನ್ ಲ್ಯಾಬ್ಸ್, ಫೆಡ್ಎಕ್ಸ್, ವಾಲ್ಮಾರ್ಟ್, ಕೋಕ್, ಜೆ & ಜೆ, ಫಿಜರ್ ಮುಂತಾದ ಕಂಪೆನಿಗಳಿಗೆ ಒಂದು ವಿಚಾರ ಗೊತ್ತಿದೆ. ಅದೇನೆಂದರೆ ಭಾರತದಲ್ಲಿನ ತಮ್ಮ ಪ್ರಭಾವವು ಪ್ರಪಂಚದ ಮೇಲೆ ಕೂಡ ಪರಿಣಾಮ ಬೀರುತ್ತದೆ ಮತ್ತು ಸಂದೇಶ ಹೋಗುತ್ತದೆ ಎಂದು. ಹಲವಾರು ಮೊಬೈಲ್ ಮಿಲಿಟರಿ ಆಸ್ಪತ್ರೆಗಳನ್ನು ಅದು ಕಳುಹಿಸುತ್ತಿದೆ. ಇಂದಿನ ಸಭೆಯಲ್ಲಿ ಪಾಲ್ಗೊಂಡ ನಂತರ ನನಗನ್ನಿಸಿದ್ದೇನೆಂದರೆ, ಅಮೇರಿಕ ಭಾರಿ ಪ್ರಮಾಣದಲ್ಲಿ ಸಹಾಯವನ್ನು ನೀಡುತ್ತಿದೆ. ಈಗ ನಾನು ಹೇಗೆ ಮಾತನಾಡುತ್ತದ್ದೇನೋ, ಅಷ್ಟೇ ಪ್ರಮಾಣದಲ್ಲಿ ನೆರವು ರವಾನೆ ಆಗುವುದು ಖಂಡಿತ. ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ರವಾನಿಸಲಾಗುತ್ತಿದೆ. ಯುದ್ಧಭೂಮಿ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಉಪಕರಣಗಳ ಹೆಚ್ಚುವರಿ ಸಂಗ್ರಹವನ್ನು ಭಾರತಕ್ಕೆ ಕಳಿಸಲಾಗುತ್ತಿದೆ. ಲಾಕ್ಹೀಡ್ ಮಾರ್ಟಿನ್ ಭಾರತದ ಸಣ್ಣ ಪಟ್ಟಣಗಳಿಗೆ ಉಪಕರಣಗಳನ್ನು ಸಾಗಿಸಲು ಹೆಲಿಕಾಪ್ಟರ್ ಮತ್ತು ಸರಕು ವಿಮಾನಗಳನ್ನು ಕಳುಹಿಸುತ್ತಿದ್ದಾರೆ. ಅನೇಕ ಸಂಸ್ಥೆಗಳು ಭಾರತದಲ್ಲಿರುವ ತಮ್ಮ ಖಾಲಿ ಕಚೇರಿಗಳನ್ನು ಲಸಿಕೆ ಕೇಂದ್ರಗಳಾಗಿ ಬಳಸಲು ಅನುಮತಿ ನೀಡಿವೆ. ಈ ನಂಬಲಾಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸಹಾಯಕ್ಕೆ ನಿಲ್ಲಲು ತನಗೆ ಹೃದಯವಿದೆ ಎಂದು ಅಮೆರಿಕ ತೋರಿಸುತ್ತದೆ. ನಾನು ಈ ಮೊದಲು ಇಂತಹ ಸಾರ್ವಜನಿಕ-ಖಾಸಗಿ ಸಮನ್ವಯವನ್ನು ನೋಡಿರಲಿಲ್ಲ. ಯುಎಸ್ ಸರ್ಕಾರವು ತನ್ನ ಶಕ್ತಿ ಮತ್ತು ಆರ್ಥಿಕ ಸಂಪನ್ಮೂಲವನ್ನು ಸಂಪೂರ್ಣವಾಗಿ ಭಾರತಕ್ಕೆ ನೀಡಲು ಮುಂದಾಗಿದೆ. ಕೋವಿಡ್ ಹರಡುವಿಕೆಯನ್ನು ನಿಲ್ಲಿಸಲೇಬೇಕಾಗಿದೆ, ಇಲ್ಲವಾದಲ್ಲಿ ಮೇ ಅಂತ್ಯದ ವೇಳೆಗೆ ಭಾರತದಲ್ಲಿ ರೂಪಾಂತರಗೊಂಡ ವೈರಸ್ ಪ್ರಪಂಚದಾದ್ಯಂತ ಹರಡುತ್ತದೆ. ಇದನ್ನು ನಿಲ್ಲಿಸಲು ಏನೆಲ್ಲಾ ಮಾಡಬೇಕೋ ಅದಕ್ಕೆ ನಅವು ಕೈ ಜೋಡಿಸಲು ನಿರ್ಧರಿಸಿದ್ದೇವೆ ಎಂದು ಹೆಸರು ಹೇಳಲಿಚ್ಚಿಸದ ಸಿಇಓ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

ಮೊದಲ ಮಾತುಕತೆ: ನೂತನ ವರ್ಷಕ್ಕೆ ಶುಭ ಕೋರಿ ಚೀನಾ ಕಿವಿ ಹಿಂಡಿದ ಜೋ ಬೈಡೆನ್

(135 CEOs agreed to help India in a meeting held by US state secretary Antony Blinken)

Published On - 3:09 pm, Tue, 27 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್