Burqa Ban: ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ..; ಪ್ರಸ್ತಾವನೆಗೆ ಕ್ಯಾಬಿನೆಟ್ನಲ್ಲಿ ಅನುಮೋದನೆ
ಈಗೆರಡು ವರ್ಷಗಳ ಹಿಂದೆ ಈಸ್ಟರ್ ಸಂಡೇ ದಿನದಂದು ಶ್ರೀಲಂಕಾದ ಚರ್ಚ್, ಹೋಟೆಲ್ಗಳ ಮೇಲೆ ಉಗ್ರದಾಳಿಯಾಗಿತ್ತು. ಆಗಿನಿಂದಲೂ ಬುರ್ಖಾ ಬ್ಯಾನ್ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಲೇ ಇತ್ತು.
ಕೊಲಂಬೋ: ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಶ್ರೀಲಂಕಾ ದೇಶ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಸೇರಿ ಎಲ್ಲ ರೀತಿಯ ಮುಖ ಮುಸುಕುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವಂತಿಲ್ಲ ಎಂಬ ಪಸ್ತಾವನೆಗೆ ಕ್ಯಾಬಿನೆಟ್ನಲ್ಲಿ ಅನುಮೋದನೆ ಸಿಕ್ಕಿದೆ. ಅದರ ಅನ್ವಯ ಇನ್ನು ಮುಂದೆ ಶ್ರೀಲಂಕಾದಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವಂತಿಲ್ಲ.
ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಇತ್ತು. ಅಲ್ಲಿನ ಸಾರ್ವಜನಿಕ ಭದ್ರತೆ ಸಚಿವ ಸರತ್ ವೀರಸೇಕರ್ ಅವರು ಮಾರ್ಚ್ನಲ್ಲಿ ಈ ಪ್ರಸ್ತಾಪವನ್ನು ಕ್ಯಾಬಿನೆಟ್ನಲ್ಲಿ ಇಟ್ಟು, ಅನುಮೋದನೆಗೆ ಒತ್ತಾಯಿಸಿದ್ದರು. ಅವರಂತೆ ಉಳಿದ ಕೆಲವು ಸಚಿವರೂ ಸಹ ಬುರ್ಖಾ ನಿಷೇಧಕ್ಕೆ ಒತ್ತಾಯಿಸುತ್ತಿದ್ದರು. ಇದು ಶ್ರೀಲಂಕಾದ ಮುಸ್ಲಿಂ ಸಂಘಟನೆಗಳ ಅಸಮಾಧಾನಕ್ಕೂ ಕಾರಣವಾಗಿ ವಿವಾದ ಸೃಷ್ಟಿಸಿತ್ತು. ಈಗ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು, ಕಾಯ್ದೆಯಾಗಿ ಬದಲಾಗಲಿದೆ.
ಈಗೆರಡು ವರ್ಷಗಳ ಹಿಂದೆ ಈಸ್ಟರ್ ಸಂಡೇ ದಿನದಂದು ಶ್ರೀಲಂಕಾದ ಚರ್ಚ್, ಹೋಟೆಲ್ಗಳ ಮೇಲೆ ಉಗ್ರದಾಳಿಯಾಗಿತ್ತು. ಆಗಿನಿಂದಲೂ ಬುರ್ಖಾ ಬ್ಯಾನ್ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಹಾಗಂತ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಮಾಸ್ಕ್ ನಿಷೇಧವಲ್ಲ. ಕೇವಲ ಬುರ್ಖಾ, ನಿಖಾಬ್ಗಳಷ್ಟೇ ಬ್ಯಾನ್ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಕ್ತಿಲ್ಲ ಬೆಡ್; ಮನೆಯಲ್ಲೇ ಪತಿ, ಹೆಣ್ಣುಮಕ್ಕಳ ಮುಂದೆ ನರಳಿ ನರಳಿ ಕಣ್ಣು ಮುಚ್ಚಿದ ಮಹಿಳೆ
ಮಾಜಿ ಪೊಲೀಸ್ ಆಯುಕ್ತ ಪರಮ್ ಸಿಂಗ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ತಕ್ಷಣ ರಿಪೋರ್ಟ್ ಕೊಡಿ: ಮಹಾರಾಷ್ಟ್ರ ಸರ್ಕಾರ
Sri Lankas Cabinet on Tuesday cleared proposal of ban burqa