ಅಪಾಯದಲ್ಲಿರುವ ಭಾರತಕ್ಕೆ ಸಹಾಯ ಮಾಡಲು ವಿಶ್ವ ವಿಫಲವಾಗಿದೆ: ಯುಎಸ್​ನ ವೈದ್ಯಕೀಯ ಸಲಹೆಗಾರ ಡಾ. ಫೌಸಿ ಅಸಮಾಧಾನ

ಜಾಗತಿಕ ಅಸಮಾನತೆ ಇದೆ ಎಂಬುದಕ್ಕೆ, ಇಂದು ಭಾರತದಲ್ಲಿ ಉಂಟಾದ ಪರಿಸ್ಥಿತಿಗೆ ಜಗತ್ತಿನ ಇತರ ಶ್ರೀಮಂತ ರಾಷ್ಟ್ರಗಳು ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವುದೇ ಉದಾಹರಣೆ ಎಂದು ಡಾ. ಫೌಸಿ ಹೇಳಿದ್ದಾರೆ.

ಅಪಾಯದಲ್ಲಿರುವ ಭಾರತಕ್ಕೆ ಸಹಾಯ ಮಾಡಲು ವಿಶ್ವ ವಿಫಲವಾಗಿದೆ: ಯುಎಸ್​ನ ವೈದ್ಯಕೀಯ ಸಲಹೆಗಾರ ಡಾ. ಫೌಸಿ ಅಸಮಾಧಾನ
ಡಾ. ಅಂಥೋನಿ ಫೌಸಿ
Lakshmi Hegde

|

Apr 28, 2021 | 12:17 PM


ಕೊವಿಡ್​ 19 ಎರಡನೇ ಅಲೆಯ ಹೊಡೆತಕ್ಕೆ ನಲುಗುತ್ತಿರುವ ಭಾರತಕ್ಕೆ ಸಹಾಯ ಮಾಡಲು, ಭಾರತದ ಪರ ಒಗ್ಗಟ್ಟಾಗಿ ನಿಲ್ಲಲು ವಿಶ್ವದ ಶ್ರೀಮಂತ ರಾಷ್ಟ್ರಗಳು ವಿಫಲವಾಗಿವೆ ಎಂದು ಯುಎಸ್​​ನ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದಲ್ಲಿ ಕೊವಿಡ್ 19 ಮಹಾಮಾರಿ ಅಬ್ಬರ ಹೆಚ್ಚಾಗಿದೆ. ಒಂದು ದಿನದಲ್ಲಿ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ 3 ಸಾವಿರಕ್ಕೂ ಮೀರಿದೆ. ಆಕ್ಸಿಜನ್​, ಐಸಿಯು ಬೆಡ್​ಗಳು, ಔಷಧಿ, ಲಸಿಕೆಗಳ ಅಭಾವ ಕಾಡುತ್ತಿದೆ. ಕೆಲವು ಅಮೆರಿಕ, ಇಂಗ್ಲೆಂಡ್​ನಂಥ ಕೆಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಹೀಗಿರುವಾಗ ಯುಎಸ್​ನ ವೈದ್ಯಕೀಯ ಸಲಹೆಗಾರ ಡಾ.ಅಂಥೋನಿ, ಭಾರತಕ್ಕೆ ಉಳಿದ ಶ್ರೀಮಂತ ರಾಷ್ಟ್ರಗಳು ಮಾಡುತ್ತಿರುವ ಸಹಾಯ ಸಾಕಾಗುತ್ತಿಲ್ಲ. ಭಾರತವನ್ನು ಅಪಾಯದಿಂದ ಪಾರು ಮಾಡಲು ಯಾರೂ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಕೊವಿಡ್​ ಮಹಾಮಾರಿ ದೊಡ್ಡ ವಿಪತ್ತು ತರುತ್ತಿದೆ. ಈ ಹೊತ್ತಲ್ಲಿ ಇಡೀ ವಿಶ್ವ ಒಟ್ಟಾಗಿ ಭಾರತದ ಪರ ನಿಲ್ಲಬೇಕು ಎಂದು ಡಾ. ಅಂಥೋನಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಜಗತ್ತಿನ ಹಲವು ಬಡ, ಮಧ್ಯಮ ಆದಾಯದ ರಾಷ್ಟ್ರಗಳು ಕೊವಿಡ್ ನಿಂದ ತತ್ತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆ ದೇಶಗಳಿಗೆ ಅಗತ್ಯ ಇರುವ ಆರೋಗ್ಯ ಸೌಕರ್ಯ ನೀಡಬೇಕಾಗಿರುವುದು ಶ್ರೀಮಂತ ರಾಷ್ಟ್ರಗಳ ಕರ್ತವ್ಯ. ಆದರೆ ಶ್ರೀಮಂತ ರಾಷ್ಟ್ರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಜಾಗತಿಕ ಅಸಮಾನತೆ ಇದೆ ಎಂಬುದಕ್ಕೆ, ಇಂದು ಭಾರತದಲ್ಲಿ ಉಂಟಾದ ಪರಿಸ್ಥಿತಿಗೆ ಜಗತ್ತಿನ ಇತರ ಶ್ರೀಮಂತ ರಾಷ್ಟ್ರಗಳು ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವುದೇ ಉದಾಹರಣೆ. ವಿಶ್ವವ್ಯಾಪಿಯಾದ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕಾದರೆ ಮೊಟ್ಟಮೊದಲನೇದಾಗಿ ಜಾಗತಿಕ ಒಗ್ಗಟ್ಟು ಇರಬೇಕು. ಎಲ್ಲ ದೇಶಗಳೂ ಸಮಾನ ಎಂದು ಭಾವಿಸಬೇಕು ಎಂದು ಡಾ. ಅಂಥೋನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗೀಗ ಭಾರತ ಸೇರಿ ಹಲವು ದೇಶಗಳಲ್ಲಿ ಜನರು ಕೊರೊನಾ ಸೋಂಕಿನಿಂದ ಸಾಯುವುದಕ್ಕಿಂತ ಆಕ್ಸಿಜನ್ ಅಭಾವ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳು ತಮ್ಮ ಜವಾಬ್ದಾರಿ ಅರಿತು ನಡೆಯಬೇಕು. ನಾವೆಲ್ಲರೂ ಒಟ್ಟಾಗಬೇಕು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೆ ದಾವಣಗೆರೆ ಪಾಲಿಕೆಯಿಂದ ಉಚಿತ ವಾಹನ

ಕೊರೊನಾ ತಗುಲದಂತೆ ವಿಶಿಷ್ಟ ಹರಕೆ; ದೇವರಿಗೆ ನೀರು ಅರ್ಪಿಸಿ ಗ್ರಾಮವನ್ನು ಕಾಪಾಡುವಂತೆ ಬೇಡಿಕೊಂಡ ಮಹಿಳೆಯರು

World Failed to help india avert Covid 19 crisis Said top US adviser Dr Fauci

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada