ಕೊರೊನಾ ತಗುಲದಂತೆ ವಿಶಿಷ್ಟ ಹರಕೆ; ದೇವರಿಗೆ ನೀರು ಅರ್ಪಿಸಿ ಗ್ರಾಮವನ್ನು ಕಾಪಾಡುವಂತೆ ಬೇಡಿಕೊಂಡ ಮಹಿಳೆಯರು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಸದ್ಯ ತಮ್ಮೂರಿಗೆ ಕೊರೊನಾ ಬರಬಾರದು ಎಂಬ ಕಾರಣಕ್ಕೆ ಎಲ್ಲಾ ಮಹಿಳೆಯರು ಸೇರಿಕೊಂಡು ಭಕ್ತಯಿಂದ ಬೇಡಿಕೊಂಡು ದೇವರಿಗೆ ನೀರು ಅರ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಕೊರೊನಾ ತಗುಲದಂತೆ ವಿಶಿಷ್ಟ ಹರಕೆ; ದೇವರಿಗೆ ನೀರು ಅರ್ಪಿಸಿ ಗ್ರಾಮವನ್ನು ಕಾಪಾಡುವಂತೆ ಬೇಡಿಕೊಂಡ ಮಹಿಳೆಯರು
ದೇವರಿಗೆ ನೀರು ಅರ್ಪಿಸಿ ಗ್ರಾಮವನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಿರುವ ಮಹಿಳೆಯರು
Follow us
preethi shettigar
|

Updated on: Apr 28, 2021 | 11:44 AM

ಬೆಳಗಾವಿ: ಕೊರೊನಾ ಸೋಂಕು ತಡೆಯದಂತೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ವಿಕೇಂಡ್ ಲಾಕ್ ಡೌನ್, 14 ದಿನಗಳ ಜನತಾ ಕರ್ಪ್ಯೂ ಸೇರಿದಂತೆ ಕಠಿಣ ನಿಯಮಗಳನ್ನ ರಾಜ್ಯದಲ್ಲಿ ಪ್ರಯೋಗ ಮಾಡುತ್ತಿದೆ. ಆದರೆ ಬೆಳಗಾವಿಯ ಹಳ್ಳಿವೊಂದರಲ್ಲಿ ಮಹಿಳೆಯರು ಕೊರೊನಾ ದೂರವಾಗಲಿ ಎಂದು ಮಂದಿರ, ಮಸೀದಿಗಳ ಮೊರೆ ಹೋಗಿದ್ದು, ದೇವರಿಗೆ ವಿಶಿಷ್ಟ ಹರಕೆವೊಂದನ್ನ ಕಟ್ಟಿಕೊಂಡು ಅದನ್ನ ತಿರಿಸುವ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಸದ್ಯ ತಮ್ಮೂರಿಗೆ ಕೊರೊನಾ ಬರಬಾರದು ಎಂಬ ಕಾರಣಕ್ಕೆ ಎಲ್ಲಾ ಮಹಿಳೆಯರು ಸೇರಿಕೊಂಡು ಭಕ್ತಯಿಂದ ಬೇಡಿಕೊಂಡು ದೇವರಿಗೆ ನೀರು ಅರ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ದುರಗಮ್ಮಾ, ಲಕ್ಕಮ್ಮಾ ದೇವರಿಗೆ ಮನೆಯಿಂದ ಬಿಂದಿಗೆಗಳಲ್ಲಿ ನೀರು ತಂದು ದೇವಸ್ಥಾನದ ಸುತ್ತಲು ಮತ್ತು ದೇವರಿಗೆ ನೀರು ಹಾಕಿ ಊರನ್ನ ಕಾಪಾಡುವಂತೆ ಕೇಳಿಕೊಂಡಿದ್ದಾರೆ.

ಕಳೆದ ವರ್ಷ ಕೊರೊನಾ ಬಂದ ಸಂದರ್ಭದಲ್ಲಿ ಕೂಡ ಗ್ರಾಮದ ಎಲ್ಲಾ ಮುತ್ತೈದೆ ಮಹಿಳೆಯರು ಸೇರಿಕೊಂಡು ಈ ವಿಶಿಷ್ಟ ಹರಕೆಯನ್ನ ಕಟ್ಟಿಕೊಂಡಿದ್ದರು. ಬೆಳಗ್ಗೆ ಎದ್ದು ಸ್ನಾನ ಮಾಡಿ ಮಕ್ಕಳನ್ನ ಕರೆದುಕೊಂಡು ಪ್ರತಿಯೊಬ್ಬರು ಬಿಂದಿಗೆಯನ್ನ ಹೊತ್ತು ಮೊದಲು ದರ್ಗಾಕ್ಕೆ ಹೋಗಿ ಅಲ್ಲಿ ನೀರು ಅರ್ಪಿಸಿ ನಂತರ ದುರಗಮ್ಮಾ, ಲಕ್ಕಮ್ಮಾ ದೇವಸ್ಥಾನಕ್ಕೆ ಬಂದು  ನೀರು ಹಾಕಿ ದೇವರನ್ನ ಆರಾಧನೆ ಮಾಡುತ್ತಾರೆ ಮತ್ತು ಗ್ರಾಮದ ಜನರಿಗೆ, ಜಾನುವಾರುಗಳಿಗೆ ಕೊರೊನಾ ಸೋಂಕು ಬಾರದಂತೆ ಕಾಪಾಡಮ್ಮಾ ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ.

ಯುಗಾದಿಯ ಹಬ್ಬದಿಂದ ಈ ವಿಶಿಷ್ಟ ಹರಕೆಯನ್ನ ಆರಂಭಿಸಿದ್ದು, ಪ್ರತಿ ಮಂಗಳವಾರ ಈ ರೀತಿ ನೀರು ಹಾಕುತ್ತಿದ್ದೇವು. ಇನ್ನೂ ಈ ವಾರ ಕೊನೆಯದಾಗಿ ನೀರನ್ನು ಹಾಕುವ ಹರಕೆ ಮಾಡಿದ್ದು, ಗ್ರಾಮವನ್ನು ಸುರಕ್ಷೆ ಮಾಡುವುದರ ಜೊತೆಗೆ ಕೊರೊನಾ ತೋಲಗುವಂತೆ ದೇವರು ಮಾಡುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ ಎಂದು ಗ್ರಾಮಸ್ಥೆ ದಾನವ್ವಾ ಹೇಳಿದ್ದಾರೆ.

ಗ್ರಾಮದ ಜನರು ಮಾಡುತ್ತಿರುವುದು ಮೂಡನಂಬಿಕೆಯಿಂದಲೋ ಅಥವಾ ದೇವರ ಮೇಲಿರುವ ಭಕ್ತಿಯಿಂದಲೋ ಇರಬಹುದು.  ಆದರೆ ತಮ್ಮೂರಿನ ರಕ್ಷಣೆಗಾಗಿ ಇಂತಹದ್ದೊಂದು ವಿಶಿಷ್ಟ ಹರಕೆ ಮಾಡುತ್ತಿರುವುದು ನಿಜಕ್ಕೂ ಜನರನ್ನ ಜಾಗೃತರನ್ನಾಗುವಂತೆ ಮಾಡುತ್ತಿದೆ. ಇದರ ಜೊತೆಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಜನ ಅರ್ಥಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ:

ಕೊರೊನಾ ಮುಕ್ತವಾಗಲು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ವಿಶೇಷ ಪೂಜೆ

ಕುಂದಾನಗರಿಯಲ್ಲಿ ಆಕ್ಸಿಜನ್​ಗಿಲ್ಲ ಕೊರತೆ; ಕೊರೊನಾ ಸೋಂಕು ತಡೆಯಲು ಸಕಲ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತ

(Belagavi village people unique praying at god to control Covid spread across the village)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್