ಕೊರೊನಾ ಲಸಿಕೆ ಫಾರ್ಮುಲಾ ಬೇರೆ ದೇಶಗಳಿಗೆ ನೀಡುವುದು ಅಂದರೆ ಅಡುಗೆಯ ರೆಸಿಪಿ ಹಂಚಿಕೊಂಡಂತಲ್ಲ ಎಂದ ಬಿಲ್ ಗೇಟ್ಸ್

ಕೊರೊನಾ ಲಸಿಕೆ ಫಾರ್ಮುಲಾವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಜತೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

ಕೊರೊನಾ ಲಸಿಕೆ ಫಾರ್ಮುಲಾ ಬೇರೆ ದೇಶಗಳಿಗೆ ನೀಡುವುದು ಅಂದರೆ ಅಡುಗೆಯ ರೆಸಿಪಿ ಹಂಚಿಕೊಂಡಂತಲ್ಲ ಎಂದ ಬಿಲ್ ಗೇಟ್ಸ್
ಬಿಲ್ ಗೇಟ್ಸ್ (ಸಂಗ್ರಹ ಚಿತ್ರ)
Follow us
Srinivas Mata
|

Updated on: Apr 28, 2021 | 1:44 PM

ಶತಕೋಟ್ಯಧಿಪತಿ, ದಾನಿ ಹಾಗೂ ಮೈಕ್ರೋಸಾಫ್ಟ್ ಕಂಪೆನಿ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಈಚೆಗೆ ಸಂದರ್ಶನವೊಂದನ್ನು ನೀಡಿದ್ದರು. ಕೊರೊನಾ ಲಸಿಕೆ ಫಾರ್ಮುಲಾಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವ ವಿಚಾರವಾಗಿ ನೀಡಿದ ಅವರ ಹೇಳಿಕೆ ಈಗ ಹಲವರನ್ನು ಅಚ್ಚರಿಗೆ ದೂಡಿದೆ. ಸ್ಕೈ ನ್ಯೂಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ, ಪ್ರಸ್ತುತ ಕೊರೊನಾ ಲಸಿಕೆ ಕೊರತೆ ಬಗ್ಗೆ ಪ್ರಶ್ನಿಸಲಾಯಿತು. ಒಂದು ವೇಳೆ ಬೌದ್ಧಿಕ ಆಸ್ತಿ ಸಂರಕ್ಷಣೆಯನ್ನು ತೆರವುಗೊಳಿಸಿ, ವಿಶ್ವದ ಇತರ ತಯಾರಕರಿಗೆ ಲಸಿಕೆ ಉತ್ಪಾದಿಸಲು ಅನುಮತಿಸಿದರೆ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಆಗ ಅವರು “ಇಲ್ಲ” ಎಂಬ ಉತ್ತರವನ್ನು ನೀಡಿದ್ದಾರೆ.

ಬಿಲ್ ಗೇಟ್ಸ್ ಇದಕ್ಕೆ ವಿವರಣೆ ನೀಡಿ, ವಿಶ್ವದಲ್ಲಿ ಬೇಕಾದಷ್ಟು ಲಸಿಕೆ ಕಾರ್ಖಾನೆಗಳಿವೆ ಮತ್ತು ಜನರು ಲಸಿಕೆ ಸುರಕ್ಷತೆ ಬಗ್ಗೆ ಗಂಭೀರವಾಗಿದ್ದಾರೆ. ಆದ್ದರಿಂದ ಈವರೆಗೆ ಆಗದ್ದು ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಿದರೆ, ಉದಾಹರಣೆಗೆ: ಜಾನ್ಸನ್ ಅಂಡ್ ಜಾನ್ಸನ್ ಕಾರ್ಖಾನೆಯಿಂದ ಭಾರತಕ್ಕೆ ಅಂದುಕೊಳ್ಳಿ. ಇದು ಔದಾರ್ಯ. ಇದು ನಮ್ಮ ಅನುದಾನ ಹಾಗೂ ಪರಿಣತಿಯಿಂದ ಮಾತ್ರ ಎಲ್ಲವೂ ಆಗಿದೆ ಎಂದು ಹೇಳಿದ್ದಾರೆ.

ರೆಸಿಪಿ ಹಂಚಿಕೊಂಡಷ್ಟು ಸಲೀಸಲ್ಲ ರೆಸಿಪಿ ಹಂಚಿಕೊಂಡಷ್ಟು ಸಲೀಸಲ್ಲ ಇದು ಎಂದು ಹೇಳಿರುವ ಬಿಲ್ ಗೇಟ್ಸ್, ಔಷಧದ ಪರೀಕ್ಷೆ ಮತ್ತು ಪ್ರಯತ್ನಗಳಾಗಬೇಕು. ಹಾಗೂ ಇದಕ್ಕಾಗಿ ವಿಪರೀತ ಎಚ್ಚರಿಕೆಯ ಉತ್ಪಾದನಾ ಪ್ರಕ್ರಿಯೆಗಳು ನಡೆಯಬೇಕು. ಈ ಪ್ರಕರಣದಲ್ಲಿ ನಾವು ಏನನ್ನು ಕೊಟ್ಟು ಏನು ಪಡೆದಿದ್ದೇವೆ ಅನ್ನೋದಿಕ್ಕೆ ಇದು ಕೇವಲ ಬೌದ್ಧಿಕ ಆಸ್ತಿ ಮಾತ್ರವಲ್ಲ. ಎಲ್ಲೋ ಒಂದು ಕೆಲಸ ನಿರ್ವಹಿಸದ ಕಾರ್ಖಾನೆ ಇದೆ. ನಿಯಂತ್ರಕರ ಅನುಮತಿಯೊಂದಿಗೆ ಜಾದೂ ಎನಿಸುವಂಥ ಸುರಕ್ಷಿತ ಲಸಿಕೆ ತಯಾರಾಗುತ್ತದೆ ಎಂದಲ್ಲ. ನಿಮಗೆ ಗೊತ್ತಿರಬೇಕು, ಇವೆಲ್ಲದರ ಮೇಲೆ ಪ್ರಯೋಗಗಳನ್ನು ಮಾಡಬೇಕು. ಮತ್ತು ಪ್ರತಿ ಉತ್ಪಾದನಾ ಪ್ರಕ್ರಿಯೆಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಶ್ರೀಮಂತ ರಾಷ್ಟ್ರಗಳು ತಮಗೆ ಮೊದಲು ಲಸಿಕೆ ದೊರೆಯುವುದಕ್ಕೆ ಆದ್ಯತೆ ನೀಡುತ್ತಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ ಎಂದು ಹೇಳಿದ ಬಿಲ್ ಗೇಟ್ಸ್, ಒಂದು ಸಲ ಮುಂದುವರಿದ ದೇಶಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಮುಗಿದ ಮೇಲೆ ಅಭಿವೃದ್ಧಿಶೀಲ ದೇಶಗಳಿಗೆ ದೊರೆಯುತ್ತದೆ. ಯು.ಕೆ. ಮತ್ತು ಅಮೆರಿಕದಲ್ಲಿ 30 ವರ್ಷ ವಯಸ್ಸಾದವರಿಗೆ ಈಗ ಲಸಿಕೆ ಹಾಕುತ್ತಿದ್ದೇವೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ 60 ವರ್ಷದ ಎಲ್ಲರಿಗೂ ಲಸಿಕೆ ಹಾಕಿಲ್ಲ. ಇದು ನ್ಯಾಯಸಮ್ಮತ ಅಲ್ಲ. ಆದರೆ ಇನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ಯಾವುದೆಲ್ಲ ದೇಶದಲ್ಲಿ ಕೊರೊನಾದ ಗಂಭೀರ ಸಮಸ್ಯೆ ಇದೆಯೋ ಅಲ್ಲಿಗೆಲ್ಲ ಲಸಿಕೆ ಹಂಚಿಕೆ ಆಗುತ್ತದೆ.

ತಾವು ಚೆನ್ನಾಗಿರುವ ಆಹಾರ ಪದಾರ್ಥಗಳನ್ನೆಲ್ಲ ತಿಂದು ಕೊನೆಯಲ್ಲಿ ಉಳಿದಿದ್ದನ್ನು ಬಡವರಿಗೆ ಹಾಕುತ್ತಿದ್ದ ಈ ಹಿಂದಿನಂತೆಯೇ ಈಗಲೂ ಆಗಿದೆ ಎಂಬಂತಾಗಿದೆ ಪ್ರಸ್ತುತ ಸನ್ನಿವೇಶ.

ಬಿಲ್​ ಗೇಟ್ಸ್ ಪ್ರತಿಕ್ರಿಯೆಗೆ ಜನಾಕ್ರೋಶ ಇತರ ದೇಶಗಳಿಗೆ ಲಸಿಕೆ ಉತ್ಪಾದನೆ ಮಾಡುವ ವಿಚಾರವಾಗಿ ಬಿಲ್ ಗೇಟ್ಸ್ ನೀಡಿದ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಿಲ್ ಗೇಟ್ಸ್ ಬಗ್ಗೆ ಜನರಲ್ಲಿ ಇದ್ದ ಭಾವನೆಯನ್ನೇ ಬದಲಿಸಿದೆ.

ಕನ್ಸರ್ವೇಟಿವ್ಸ್ ಬಿಲ್ ಗೇಟ್ಸ್ ಅನ್ನು ದ್ವೇಷಿಸುತ್ತಾರೆ. ಏಕೆಂದರೆ, ವಿಶ್ವದ ಮೇಲೆ ಲಸಿಕೆಯನ್ನು ಗೇಟ್ಸ್ ಹೇರುತ್ತಿದ್ದಾರೆ ಎಂದು ಭಾವಿಸುತ್ತಾರೆ. ಲಿಬರಲ್ಸ್​ಗೆ ಬಿಲ್ ಗೇಟ್ಸ್ ಇಷ್ಟವಾಗುತ್ತಾರೆ. ಏಕೆಂದರೆ, ಈ ವಿಶ್ವವು ಲಸಿಕೆ ಪಡೆಯುವುದಕ್ಕೆ ಆತ ಸಹಾಯ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ. ವಾಸ್ತವ ಏನೆಂದರೆ, ಲಸಿಕೆಯನ್ನು ಲಾಭರಹಿತ ಖಾಸಗೀಕರಣಕ್ಕೆ ನೂಕುವ ಮೂಲಕ ಲಕ್ಷಾಂತರ ಮಂದಿ ಸಾಯೋದನ್ನು ಖಂಡಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಲವು ತಜ್ಞರು ಗೇಟ್ಸ್ ಹೇಳಿಕೆ ಅಚ್ಚರಿ ವ್ಯಕ್ತಪಡಿಸಿದ್ದು, ಇದೆಷ್ಟು ತಪ್ಪು ಎಂದಿದ್ದಾರೆ.

ಇದನ್ನೂ ಓದಿ: ಇಡೀ ವಿಶ್ವಕ್ಕೇ ಕೊರೊನಾ ಔಷಧ ತಯಾರಿಸುವ ಸಾಮರ್ಥ್ಯ ಭಾರತಕ್ಕಿದೆ -ಬಿಲ್ ಗೇಟ್ಸ್

(Billionaire, Microsoft co- founder Bill Gates said no to corona vaccine formula sharing with developing nations)

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ