AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್ ಸಂಭ್ರಮ ನೋಡಿ

IPL 2025: ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್ ಸಂಭ್ರಮ ನೋಡಿ

ಪೃಥ್ವಿಶಂಕರ
|

Updated on: Apr 27, 2025 | 10:11 PM

Ravi Bishnoi's Six off Bumrah: ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2025ರ 45ನೇ ಪಂದ್ಯದಲ್ಲಿ, ರವಿ ಬಿಷ್ಣೋಯ್ ಜಸ್ಪ್ರೀತ್ ಬುಮ್ರಾ ಎಸೆತವನ್ನು ಸಿಕ್ಸರ್ ಬಾರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರವಿ 14 ಎಸೆತಗಳಲ್ಲಿ 13 ರನ್ ಗಳಿಸಿದರು. ಲಕ್ನೋ ತಂಡ ಸೋತರೂ, ಬಿಷ್ಣೋಯ್ ಅವರ ಈ ಇನ್ನಿಂಗ್ಸ್ ಎಲ್ಲರನ್ನೂ ರಂಜಿಸಿತು. ಮುಂಬೈ 54 ರನ್‌ಗಳಿಂದ ಗೆಲುವು ಸಾಧಿಸಿತು.

ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2025 ರ 45 ನೇ ಪಂದ್ಯದಲ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್​ನಲ್ಲಿ ರವಿ ಬಿಷ್ಣೋಯ್ ಸಿಕ್ಸರ್ ಬಾರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಲಕ್ನೋದ ಲೆಗ್ ಸ್ಪಿನ್ನರ್ 14 ಎಸೆತಗಳಲ್ಲಿ 13 ರನ್ ಗಳಿಸಿದರು, ಇದರಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇವುಗಳಲ್ಲಿ ಒಂದು ಬುಮ್ರಾ ಅವರ ಬೌಲಿಂಗ್​ನಲ್ಲಿ ಬಂದಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿತು. ಬಿಷ್ಣೋಯ್ ಅವರ ಸಿಕ್ಸರ್ ನೋಡಿ, ತಂಡದ ನಾಯಕ ರಿಷಭ್ ಪಂತ್ ಮತ್ತು ಮಾರ್ಗದರ್ಶಕ ಜಹೀರ್ ಖಾನ್​ಗೂ ನಗು ತಡೆಯಲಾಗಲಿಲ್ಲ. ಲಕ್ನೋ ಡಗೌಟ್‌ನಲ್ಲಿ ಅವರೊಂದಿಗೆ ಕುಳಿತಿದ್ದ ಉಳಿದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ದಿಗ್ಭ್ರಮೆಗೊಂಡರು. ಆದಾಗ್ಯೂ, ಬಿಷ್ಣೋಯ್ ಅವರ ಈ ಇನ್ನಿಂಗ್ಸ್‌ನಿಂದ ಲಕ್ನೋಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಲಕ್ನೋ ತಂಡವನ್ನು ಮುಂಬೈ 54 ರನ್‌ಗಳಿಂದ ಸೋಲಿಸುವ ಮೂಲಕ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿತು.